Puttur: ಪುತ್ತೂರು: ದೇಶಕ್ಕೆ ಸಮರ್ಪಿತವಾದ “ಪಿಎಂಶ್ರೀ ವೀರಮಂಗಲ ಶಾಲೆಗೆ” ಪ್ರಧಾನಮಂತ್ರಿ ಕಛೇರಿಯ ಅಧಿಕಾರಿಗಳು ಭೇಟಿ ನೀಡಿ ಶ್ಲಾಘಣೆ

Share the Article

Puttur: ದೇಶಕ್ಕೆ ಸಮರ್ಪಿತವಾದ ಪಿಎಂಶ್ರೀ ವೀರಮಂಗಲ ಶಾಲೆಗೆ ಪ್ರಧಾನಮಂತ್ರಿ ಕಛೇರಿಯ ಅಧಿಕಾರಿಗಳ ಭೇಟಿ ನೀಡಿ ಶಾಲೆಯ ಚಟುವಟಿಕೆಗಳನ್ನು ಮುಕ್ತ ಕಂಠದಿಂದ ಚಂದ್ರಮೋಹನ್ ಠಾಕೋರ್ ಅವರು ಶ್ಲಾಘಿಸಿದ್ದಾರೆ.

ದ.ಕ ಜಿಲ್ಲೆಯ ಪುತ್ತೂರು(puttur) ತಾಲೂಕಿನ ಪಿಎಂಶ್ರೀ ಶಾಲೆ ವೀರಮಂಗಲ ಇಲ್ಲಿಗೆ ಪಿಎಂ ಕಛೇರಿಯಿಂದ IAS ಅಧಿಕಾರಿ ಚಂದ್ರಮೋಹನ್ ಠಾಕೋರ್ ಸಮಗ್ರ ಕರ್ನಾಟಕ ರಾಜ್ಯ ಯೋಜನಾ ನಿರ್ದೇಶಕರಾದ IAS ಅಧಿಕಾರಿ ಶ್ರೀಮತಿ ವಿದ್ಯಾಕುಮಾರಿ,ದ.ಕ ಜಿಲ್ಲಾ ಉಪನಿರ್ದೇಶಕರಾದ ಶ್ರೀ ಶಶಿಧರ್ ಜಿ ಎಸ್, ಕ್ಷೇತ್ರಶಿಕ್ಷಣಾಧಿಕಾರಿ ಶ್ರೀ ಲೋಕೇಶ್ ಎಸ್ ಆರ್, ಎಪಿಸಿ ಶ್ರೀಮತಿ ವಿದ್ಯಾಕುಮಾರಿ, ಅಕ್ಷರದಾಸೋಹ ಸಹ ನಿರ್ದೇಶಕ ಶ್ರೀ ವಿಷ್ಣುಪ್ರಸಾದ್, ಸಮನ್ವಯಾಧಿಕಾರಿ ಶ್ರೀ ನವೀನ್ ಸ್ಟೀಫನ್ ವೇಗಸ್, ಶಿಕ್ಷಣ ಸಂಯೋಜಕ ಶ್ರೀ ಹರಿಪ್ರಸಾದ್, ಎಸ್ ಎಸ್ ಕೆ ಕಛೇರಿಯ ಶ್ರೀಮತಿ ಉಷಾ ಬಂಗೇರ, ನರಿಮೊಗರು ಸಿ ಆರ್ ಪಿ ಶ್ರೀಮತಿ ಪರಮೇಶ್ವರಿ, ಇಂದು ಪಿಎಂಶ್ರೀ ಕಾರ್ಯ ಚಟುವಟಿಕೆ ವೀಕ್ಷಿಸಲು ಆಗಮಿಸಿದ್ದರು. 

ಮುಖ್ಯಗುರು ತಾರಾನಾಥ ಪಿ, ಎಸ್ ಡಿ ಎಂ ಸಿ ಅಧ್ಯಕ್ಷ ರವಿಚಂದ್ರ ಶಿಕ್ಷಕರಾದ ಹರಿಣಾಕ್ಷಿ,ಶೋಭಾ ,ಶ್ರೀಲತಾ, ಕವಿತಾ,ಹೇಮಾವತಿ, ಶಿಲ್ಪರಾಣಿ,ಸೌಮ್ಯ ಸರ್ವರನ್ನು ಸ್ವಾಗತಿಸಿದರು. ಪಿಎಂಶ್ರೀ ಚಟುವಟಿಕೆಗಳನ್ನು ವೀಕ್ಷಿಸಿ ಶಾಲೆಯ ಅಭಿವೃದ್ಧಿ ಕಂಡು ಪ್ರಶಂಶೆ ವ್ಯಕ್ತ ಪಡಿಸಿದರು.

Comments are closed.