Sunny leone : ತನ್ನ ಅವಳಿ ಮಕ್ಕಳನ್ನು ಹೆತ್ತು ಕೊಟ್ಟ ಬಾಡಿಗೆ ತಾಯಿಗೆ ಸನ್ನಿ ಲಿಯೋನ್ ಕೊಟ್ಟ ಹಣವೆಷ್ಟು ಗೊತ್ತಾ?

Share the Article

Sunny leone :ಇಂದು ಬಾಡಿಗೆ ತಾಯ್ತನವು ಒಂದು ಟ್ರೆಂಡ್ ಆಗಿ ಬೆಳೆಯುತ್ತಿದೆ. ಅನೇಕ ನಟಿಯರು, ಸೆಲೆಬ್ರಿಟಿ ಮಹಿಳೆಯರು ತಮ್ಮ ತ್ವಚೆಯನ್ನು ಕಾಪಿಡುವ ಕಾರಣಕ್ಕಾಗಿ ಹಾಗೂ ತಮ್ಮ ಬಿಡುವಿಲ್ಲದ ಕಾರಣವನ್ನೊಡ್ಡಿ ಬಾಡಿಗೆ ತಾಯಂದಿರ ಮೂಲಕ ತಮ್ಮ ಮಕ್ಕಳನ್ನು ಪಡೆಯುತ್ತಿದ್ದಾರೆ. ಅಂತೆಯೇ ನೀಲಿಚಿತ್ರ ತಾರೆ ಸನ್ನಿ ಲಿಯೋನ್ ಕೂಡ ಬಾಡಿಗೆ ತಾಯ್ತನದ ಮೂಲಕ ತಮ್ಮ ಮಗುವನ್ನು ಪಡೆದಿದ್ದರು.

ಸನ್ನಿ ಲಿಯೋನ್ (Sunny Leone) ಮೂರು ಮಕ್ಕಳ ತಾಯಿ. ಆಕೆ, ನಿಶಾ ಎಂಬ ಹೆಣ್ಣು ಮಗುವನ್ನು ದತ್ತು ಪಡೆದಿದ್ದಳು. ಬಳಿಕ ಬಾಡಿಗೆ ತಾಯ್ತನದ ಮೂಲಕ ನೋಹ್ ಮತ್ತು ಆಶರ್ ಎಂಬ ಇಬ್ಬರು ಗಂಡು ಮಕ್ಕಳನ್ನು ಪಡೆದರು. ಇದೀಗ ಅವರು ತಮ್ಮ ಮಕ್ಕಳ ಹುಟ್ಟು ಹಾಗೂ ದತ್ತು ಪಡೆದ ಕುರಿತಾಗಿ ಸಾಕಷ್ಟು ವಿಚಾರಗಳನ್ನು ಬಹಿರಂಗಪಡಿಸಿದ್ದು, ಇದಕ್ಕಾಗಿ ಎಷ್ಟು ಹಣವನ್ನು ಖರ್ಚು ಮಾಡಿದ್ದೇನೆ ಎಂಬುದಾಗಿ ತಿಳಿಸಿದ್ದಾರೆ.

ಈ ಕುರಿತಾಗಿ ಮಾತನಾಡಿರುವ ಅವರು ನಾವು ಮಕ್ಕಳನ್ನು ದತ್ತು ಪಡೆಯಲು ಅರ್ಜಿ ಸಲ್ಲಿಸಿದ್ದೆವು. ಇದಕ್ಕೂ ಮೊದಲು ಐವಿಎಫ್‌ನ ಪ್ರಯತ್ನವೂ ಮಾಡಿದ್ದು, ಹಲವು ಬಾರಿ ಅದು ವಿಫಲವೂ ಆಗಿತ್ತು. ಒಂದು ಬಾರಿ ಐವಿಎಫ್ ಮಾಡಿದ ದಿನವೇ ಚಿಕ್ಕ ಹುಡುಗಿಯೂ ನಮಗೆ ಸಿಕ್ಕಳು ಎಂದು ಹೇಳಿದ್ದಾರೆ. ಅಲ್ಲದೆ ಸರೊಗಸಿ ಪ್ರಕ್ರಿಯೆಯಲ್ಲಿ ತಾವು ತುಂಬಾ ಹಣಕಾಸಿನ ಬಾಧ್ಯತೆಗಳನ್ನು ಅನುಭವಿಸಿದೆವು. ವಾರಕ್ಕೊಮ್ಮೆ ನಾವು ಶುಲ್ಕ ಪಾವತಿಸಬೇಕಾಗಿತ್ತು. ಈ ವೇಳೆ ನಮ್ಮ ಬಾಡಿಗೆ ತಾಯಿಯ ಪತಿಗೂ ಪ್ರತಿ ಕೆಲಸದ ದಿನದ ರಜೆಗೆ ಹಣ ಸಿಗುತ್ತಿತ್ತು. ನಾವು ತುಂಬಾ ಹಣ ಪಾವತಿಸಿದ್ದರಿಂದ ಅವರು ಮನೆ ಖರೀದಿಸಿದರು. ಮತ್ತು ಸುಂದರವಾದ ಲೌಂಜ್‌ನಲ್ಲಿ ಮದುವೆಯನ್ನು ನಡೆಸಲು ಸಹಾಯ ಮಾಡಿದ್ದೆವು ಎಂದು ಅವರು ಬಹಿರಂಗಪಡಿಸಿದ್ದಾರೆ.

Mohan Bhagavat: ನಾನೂ ನಿವೃತ್ತನಾಗಲ್ಲ, ಮೋದಿಗೂ ಪಡೆಯಲು ಹೇಳಿಲ್ಲ – ಮೋಹನ್ ಭಾಗವತ್ ಹೇಳಿಕೆ !!

Comments are closed.