Anushree : ದಾಂಪತ್ಯ ಜೀವನಕ್ಕೆ ಕಾಲಿರಿಸಿದ ನಿರೂಪಕಿ ಅನುಶ್ರೀ!!

Anushree: ಕನ್ನಡ ಚಿತ್ರರಂಗದ ಖ್ಯಾತ ನಿರೂಪಕಿ ಹಾಗೂ ನಟಿ ಅನುಶ್ರೀ ಅವರು ಕೊನೆಗೂ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾರೆ. ಇಂದು ಬೆಳಗ್ಗೆ 10:56ಕ್ಕೆ ಬೆಂಗಳೂರಿನಲ್ಲಿ ರೋಷನ್ ಅವರು ಅನುಶ್ರೀಗೆ ಮಾಂಗಲ್ಯ ಧಾರಣೆ ಮಾಡಿ, ಇಬ್ಬರೂ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ಈ ದಾಂಪತ್ಯ ಬಂಧನದ ಸಮಾರಂಭವು ಕನ್ನಡ ಚಿತ್ರರಂಗದ ಸ್ಟಾರ್ ಸೆಲೆಬ್ರಿಟಿಗಳ ಉಪಸ್ಥಿತಿಯಿಂದ ಮತ್ತಷ್ಟು ರಂಗುಗೊಂಡಿತು. ಸಂಭ್ರಮ ಬೈ ಸ್ವಾನ್‌ಲೈನ್ಸ್ ಸ್ಟುಡಿಯೋಸ್‌ನಲ್ಲಿ ನಡೆದ ಈ ಮದುವೆ, ಕನ್ನಡಿಗರ ಸಾಂಪ್ರದಾಯಿಕ ಆಚರಣೆಗಳ ಜೊತೆಗೆ ಆಧುನಿಕ ಸೊಗಡನ್ನು ಸಂಯೋಜಿಸಿತ್ತು.
ಇನ್ನು ಅರಿಶಿಣ ಶಾಸ್ತ್ರದಿಂದ ಆರಂಭವಾದ ಈ ಕಾರ್ಯಕ್ರಮದಲ್ಲಿ ಅನುಶ್ರೀ ಮತ್ತು ರೋಷನ್ ತಮ್ಮ ಸಾಂಪ್ರದಾಯಿಕ ವೇಷಭೂಷಣದಲ್ಲಿ ಮಿಂಚಿದರು. ಮದುವೆಯ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುವ ಮೂಲಕ ಈ ಜೋಡಿಯ ಖುಷಿಯ ಕ್ಷಣಗಳು ಎಲ್ಲರಿಗೂ ಸಂತಸ ತಂದಿವೆ.
Ganesha Chaturti: ಗಣೇಶ ಚತುರ್ಥಿಯಂದು ಚಂದ್ರನನ್ನು ನೋಡಬಾರದು ಯಾಕೆ?
Comments are closed.