Home Interesting Idli ATM : ಬೆಂಗಳೂರಿಗೆ ಬಂತು ಇಡ್ಲಿ ATM- ಹಣ ಡ್ರಾ ಮಾಡಿದಂತೆಯೇ ನಿಮಗೆ ಸಿಗುತ್ತೆ...

Idli ATM : ಬೆಂಗಳೂರಿಗೆ ಬಂತು ಇಡ್ಲಿ ATM- ಹಣ ಡ್ರಾ ಮಾಡಿದಂತೆಯೇ ನಿಮಗೆ ಸಿಗುತ್ತೆ ರುಚಿಯಾದ ಇಡ್ಲಿ, ವಡೆ

Hindu neighbor gifts plot of land

Hindu neighbour gifts land to Muslim journalist

 

Idli ATM : ಎಟಿಎಂ ನಲ್ಲಿ ಹಣ ನೀಡುವಂತೆ ಇದೀಗ ಇಡ್ಲಿಯನ್ನು ನೀಡುವಂತಹ ಒಂದು ಮಿಷನ್ ಬೆಂಗಳೂರಿನಲ್ಲಿ ಪ್ರತ್ಯಕ್ಷವಾಗಿದೆ. ಇದನ್ನು ಇಡ್ಲಿ ಎಟಿಎಂ ಅಂತ ಕರೆಯಲಾಗುತ್ತಿದ್ದು, 24×7 ಇದು ಕಾರ್ಯನಿರ್ವಹಿಸುತ್ತದೆ.

ಹೌದು, ಬೆಂಗಳೂರಿನ ಬಿಳೇಕಹಳ್ಳಿಯ ವಿಜಯ ಕಾಂಪ್ಲೆಕ್ಸ್‌ನಲ್ಲಿ ಅಳವಡಿಸಲಾಗಿದೆ. ಫ್ರಿಶಾಟ್ ಯಂತ್ರದಿಂದ ನಿಮಗೆ ಬಿಸಿಯಾದ ಇಡ್ಲಿ ಮತ್ತು ಚಟ್ನಿ ಸಿಗುತ್ತದೆ. ಇಲ್ಲಿ ಎಟಿಎಂನಿಂದ ಹಣ ಡ್ರಾ ಮಾಡಿದಂತೆಯೇ ನಿಮಗೆ ರುಚಿಯಾದ ಇಡ್ಲಿ ಸಿಗುತ್ತದೆ. ಇಡ್ಲಿ ಪ್ರಿಯರಿಗಾಗಿಯೇ ಈ ಮಷೀನ್ ಬಂದಿದ್ದು, ಈ ಯಂತ್ರದಲ್ಲಿ ನಿಮಗೆ ಗರಿಗರಿಯಾದ ಉದ್ದಿನ ವಡೆ ಸಹ ಸಿಗುತ್ತದೆ.

ಇಡ್ಲಿ ಮಷೀನ್ ಬಳಿಯಲ್ಲಿರೋ ಕ್ಯೂಕೋರ್ ಕೋಡ್ ಸ್ಕ್ಯಾನ್ ಮಾಡಬೇಕು. ನಂತರ ನಿಮ್ಮ ಮೊಬೈಲ್‌ನಲ್ಲಿ ಮೆನು ಲಿಸ್ಟ್ ಓಪನ್ ಆಗುತ್ತದೆ. ನಿಮಗೆ ಬೇಕಾದ ತಿಂಡಿಯನ್ನು ಆಯ್ಕೆ ಮಾಡಿ, ಪೇಮೆಂಟ್ ಮಾಡಬೇಕು. ನಂತರ ಬಿಲ್ ಮಷೀನ್‌ಗೆ ಸ್ಕ್ಯಾನ್ ಮಾಡಿದ್ರೆ ಜಸ್ಟ್ 55 ಸೆಕೆಂಡ್‌ನಲ್ಲಿ ಇಡ್ಲಿ ರೆಡಿಯಾಗಿ ಬರುತ್ತದೆ. ಪ್ಯಾಕಿಂಗ್ ಸಹ ಇಕೋ ಫ್ರೆಂಡ್ಲಿಯಾಗಿದೆ. ಸ್ಕ್ರೀನ್ ಮೇಲೆ ನಿಮ್ಮ ಫುಡ್ ಸಿದ್ಧವಾಗುವ ಮಾಹಿತಿಯನ್ನು ನೀಡಲಾಗಿರುತ್ತದೆ.