ಸಲಿಂಗ ಕಾಮಕ್ಕೆ ಆಹ್ವಾನಿಸಿದ ಡೋಂಗಿ ಆಸಿಫ್ ಬಾಬಾನನ್ನು ಹಿಡಿದುಕೊಂಡು ಹಿಟ್ಟು ರುಬ್ಬಿದರು !
ಗದಗ: ತನ್ನ ಭಕ್ತನೊಬ್ಬನನ್ನು ಸಲಿಂಗ ಕಾಮಕ್ಕೆ ಆಹ್ವಾನಿಸಿ ಪೀಡಿಸುತ್ತಿದ್ದ ಡೋಂಗಿ ಬಾಬಾಗೆ ಜನರೇ ಧರ್ಮದೇಟು ನೀಡಿ ಟ್ರೀಟ್ ಮೆಂಟ್ ನೀಡಿದ ಪ್ರಸಂಗ ನಡೆದಿದೆ.
ನಗರದ ಆಶ್ರಯ ಕಾಲೊನಿಯಲ್ಲಿ ಈ ಘಟನೆ ನಡೆದಿದೆ. ಸ್ಥಳೀಯರು ಜಾಗೀರದಾರನನ್ನು ಥಳಿಸಿದ ಬಳಿಕ ಗದಗ ನಗರ ಪೊಲೀಸರಿಗೆ ಒಪ್ಪಿಸಿದ್ದಾರೆ.
ಮೂಲತಃ ವಿಜಯಪುರ ಜಿಲ್ಲೆಯವನಾದ ನಗರದ ಎಸ್ ಎಮ್ ಕೃಷ್ಣಾ ನಗರದ ಆಶ್ರಯ ಕಾಲೊನಿಯ ತನ್ನ ಹೆಂಡತಿ ಮನೆಯಲ್ಲಿ ಹಲವು ವರ್ಷಗಳಿಂದ ಬೀಡುಬಿಟ್ಟಿದ್ದ ಡೋಂಗಿ ಬಾಬಾ ಆಸೀಫ್. ತನ್ನ ಮೈ ಮೇಲೆ ದೇವರು ಬರುತ್ತಾನೆ ಎಂದು ಜನರನ್ನು ನಂಬಿಸಿದ್ದ. ತನ್ನ ಬಳಿ ಎಲ್ಲಾ ಸಮಸ್ಯೆಗಳಿಗೂ ಪರಿಹಾರವಿದೆ ಎಂದು ಪುಂಗಿ ಊದುತ್ತಿದ್ದ. ಮೌಢ್ಯದ ಜನ ನಂಬುತ್ತಿದ್ದರು. ಹೆಚ್ಚಾಗಿ ಯುವಕರನ್ನೇ ಗುರಿಯಾಗಿಸಿಕೊಂಡು ವಂಚಿಸುತ್ತಿದ್ದ ಈತ ಅವರಿಗೆ ಸುಳ್ಳು ಪುರಾಣಗಳನ್ನು ಹೇಳಿ ನಂಬಿಸುತ್ತಿದ್ದ. ಅಷ್ಟೇ ಅಲ್ಲದೇ, ಸಮಸ್ಯೆ ಪರಿಹಾರಕ್ಕೆ ಬಂದ ಯುವಕರನ್ನು ಲೈಂಗಿಕ ಕ್ರಿಯೆಗೆ ಬರುವಂತೆ ಆಮಿಷ ಒಡ್ಡುತ್ತಿದ್ದ ಎಂದು ಆರೋಪಿಸಲಾಗಿದೆ.
ಮೊನ್ನೆ ಹೀಗೆ ಯುವಕನೊಬ್ಬನಿಗೆ ಹೋಮೋ ಸೆಕ್ಸ್ ಗೆ ಬಾಬಾ ಎಂದು ಆಹ್ವಾನಿಸಿದ್ದಾನೆ ಈ ಆಸಿಫ್ ಬಾಬಾ. ಯುವಕ ಊರವರ ಗುಂಪು ಕಟ್ಟಿಕೊಂಡೇ ಬಂದಿದ್ದಾನೆ. ಬಾಬಾ ಎಂದ ಬಾಬಾನ ಬೆನ್ನು ಬ್ಯಾಂಡಾಗಿದೆ. ಹಾಗೆ ಸಾರ್ವಜನಿಕರಿಂದ ಧರ್ಮದೇಟು ಬೀಳುತ್ತಲೇ ‘ನಾನು ಮಾಡಿದ್ದು ತಪ್ಪಾಗಿದೆ. ನಾನು ಮಾಡಿದ್ದೆಲ್ಲ ಮೋಸ, ತಪ್ಪಾಗಿದೆ ಕ್ಷಮಿಸಿ, ನನ್ನನ್ನು ಬಿಟ್ಟುಬಿಡಿ’ ಎಂದು ಕೈಕಾಲು ಹಿಡಿದುಕೊಂಡು ಗೋಗರೆದರೂ ಜನ ಮಾತ್ರ ಕೇಳದೆ ಮನಬಂದಂತೆ ಹಿಟ್ಟು ರುಬ್ಬಿದ್ದಾರೆ.
ಕುದಿಯುವ ಎಣ್ಣೆಯಲ್ಲಿ ಕೈ ಹಾಕಿ ಬಜ್ಜಿ ತೆಗೆಯುವುದು, ಮೈಮೇಲೆ ದೇವರು ಬಂದಂತೆ ನಟಿಸುತ್ತಿದ್ದ ಈ ಡೋಂಗಿ ಬಾಬಾ ತಾನೊಬ್ಬ ಪವಾಡ ಪುರುಷ ಎಂದು ಜನರನ್ನು ನಂಬಿಸಿದ್ದ ಎಂದು ಜನರು ದೂರಿದ್ದಾರೆ.