Dharmasthala: ಬೆಳ್ತಂಗಡಿ: ಧರ್ಮಸ್ಥಳದ ಪರ ಸ್ಟೇಟಸ್ ಹಾಕಿದ್ದಕ್ಕೆ ಹಲ್ಲೆ: ದೂರು ದಾಖಲು!

Share the Article

Dharmasthala: ಧರ್ಮಸ್ಥಳದ (Dharmasthala) ಪರ ಸ್ಟೇಟಸ್ ಹಾಕಿದ್ದಕ್ಕೆ ಹಲ್ಲೆ ನಡೆಸಿ ಬಳಿಕ ಕೊಲೆ ಮಾಡುವುದಾಗಿ ಜೀವ ಬೆದರಿಕೆ ಹಾಕಿದ ಪ್ರಕರಣ ಬಗ್ಗೆ ಧರ್ಮಸ್ಥಳ ಪೊಲೀಸ್‌ ಠಾಣೆಯಲ್ಲಿ ಆರೋಪಿ ವಿರುದ್ಧ ಪ್ರಕರಣ ದಾಖಲಾಗಿದೆ.

ಬೆಳ್ತಂಗಡಿ ತಾಲೂಕಿನ ಹತ್ಯಡ್ಕ ಗ್ರಾಮದ ಅರಸಿನಮಕ್ಕಿಯಲ್ಲಿರುವ ಪ್ರಜ್ಞಾ ಹೇರ್ ಡ್ರೆಸ್ಸಸ್ ನಲ್ಲಿ ಕೆಲಸ ಮಾಡುತ್ತಿದ್ದ ಕೊಕ್ಕಡ ಗ್ರಾಮದ ಕೋರುಗದ್ದೆ ನಿವಾಸಿ ರಜತ್ ಭಂಡಾರಿ(25) ಎಂಬಾತನಿಗೆ ಆ.25 ರಂದು ಬೆಳಗ್ಗೆ 9:50 ರ ಸಮಯದಲ್ಲಿರುವ ಅಂಗಡಿಗೆ ಕಿರಣ್ 28 3 KA-21-M-5560 ಎಂಬ ಕಾರಿನಲ್ಲಿ ಬಂದು ರಜತ್ ಇದ್ದ ಅಂಗಡಿ ಒಳಗೆ ಅಕ್ರಮ ಪ್ರವೇಶಿಸಿ ರಜತ್‌ ಶರ್ಟ್ ನ ಕಾಲರ್ ಹಿಡಿದು ಅಂಗಡಿ ಹೊರಗೆ ಎಳೆದುಕೊಂಡು ಬಂದು ಅವ್ಯಾಚ ಶಬ್ದಗಳಿಂದ ಬೈದು ಧರ್ಮಸ್ಥಳದ ಪರ ಸ್ಟೇಟಸ್‌ ಹಾಕ್ತಿಯಾ ಎಂದು ಬೈದು ಎದೆಗೆ ಎಡ ಕೆನ್ನೆಗೆ ಹೊಡೆದು ಕಾಲಿನಿಂದ ಮರ್ಮಾಂಗಕ್ಕೆ ಒದ್ದು ನೀನು ನನ್ನ ಮೇಲೆ ಪೊಲೀಸ್‌ ಠಾಣೆಗೆ ದೂರು ನೀಡಿದರೆ ನಿನ್ನನ್ನ ಚಾಕುವಿನಿಂದ ಕೊಲ್ಲುವುದಾಗಿ ಆರೋಪಿ ಕಿರಣ್ ಶಿಶಿಲ ಜೀವ ಬೆದರಿಕೆ ಹಾಕಿರುವುದಾಗಿ ಬೆಳ್ತಂಗಡಿ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಹಲ್ಲೆಗೊಳಗಾದ ರಜತ್‌ ಭಂಡಾರಿ ಧರ್ಮಸ್ಥಳ ಪೊಲೀಸ್‌ ಠಾಣೆಗೆ ಆ.25 ರಂದು ನೀಡಿದ ದೂರಿನಲ್ಲಿ ತಿಳಿಸಿದ್ದಾನೆ.

ಕಿರಣ್ ಶಿಶಿಲನಿಂದ ಹಲ್ಲೆಗೊಳಗಾದ ರಜತ್‌ ಭಂಡಾರಿ ನೀಡಿದ ದೂರಿನ ಮೇರೆಗೆ ಆ.25 ರಂದು ಸಂಜೆ ಕಲಂ 329(4),352,115(2),351(2),110-BNS-2023 ಅಡಿಯಲ್ಲಿ ಧರ್ಮಸ್ಥಳ ಪೊಲೀಸ್‌ ಠಾಣೆಯಲ್ಲಿ ಆರೋಪಿ ಕಿರಣ್ ಶಿಶಿಲ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

Comments are closed.