Bangalore: ಕೇಸರಿ ಶಾಲು ಹಾಕಿದ್ದಕ್ಕೆ ಕಾರ್ಮಿಕನ ಬಟ್ಟೆ ಹರಿದು ಅನ್ಯಕೋಮಿನ ಯುವಕರಿಂದ ಹಲ್ಲೆ

Share the Article

Bangalore: ಕೇಸರಿ ಶಾಲು ಹಾಕಿದ್ದಕ್ಕೆ ಬೆಂಗಳೂರಿನ ಶಂಕರಪುರಂ ಬಳಿ ವ್ಯಕ್ತಿಯೊಬ್ಬರಿಗೆ ಹಲ್ಲೆ ಮಾಡಲಾಗಿದೆ ಎಂದು ವರದಿಯಾಗಿದೆ. ಕೇಸರಿ ಶಾಲು ಧರಿಸಿ ಕೆಲಸ ಮಾಡುತ್ತಿದ್ದ ನೌಕರನ ಮೇಲೆ ಇಬ್ಬರು ಅನ್ಯಕೋಮಿನ ಯುವಕರಿಂದ ಈ ಹಲ್ಲೆ ನಡೆದಿದೆ ಎನ್ನುವ ಆರೋಪ ಕೇಳಿ ಬಂದಿರುವ ಕುರಿತು ಮಾಧ್ಯಮವೊಂದು ವರದಿ ಮಾಡಿದೆ.

ಕೂಲಿ ಕೆಲಸ ಮಾಡುತ್ತಿದ್ದ ಸುರೇಂದ್ರ ಕುಮಾರ್‌ ಎಂಬಾತ ಟ್ರಾವೆಲ್ಸ್‌ ಕಂಪನಿಯಲ್ಲಿ ಲೋಡಿಂಗ್‌ ಮತ್ತು ಅನ್‌ಲೋಡಿಂಗ್‌ ಕೆಲಸ ಮಾಡುತ್ತಿದ್ದು, ಈತನ ಮೇಲೆ ಹಲ್ಲೆ ನಡೆದಿದೆ. ಆ.24 ರಂದು ರಾತ್ರಿ 9.30 ಕ್ಕೆ ನಡೆದಿದೆ.

ಕೇಸರಿ ಶಾಲು ಯಾಕೆ ಹಾಕಿಕೊಂಡಿದ್ದೀಯಾ ಎಂದು ಇಬ್ಬರು ಅಪರಿಚಿತ ಯುವಕರು ಲೋಡಿಂಗ್‌ ಕೆಲಸ ಮಾಡುತ್ತಿದ್ದ ಸುರೇಂದ್ರ ಕುಮಾರ್‌ ಮೇಲೆ ಪ್ರಶ್ನೆ ಮಾಡಿದ್ದಾರೆ, ಈ ಸಂದರ್ಭದಲ್ಲಿ ಯಾಕೆ ಆತನ ಮೇಲೆ ಹಲ್ಲೆ ಮಾಡುತ್ತಿದ್ದೀರಾ ಎಂದು ತಡೆಯಲು ಬಂದ ಟ್ರಾವೆಲ್ಸ್‌ ಮಾಲೀಕನ ಮೇಲೂ ಗಲಾಟೆ ಮಾಡಿದ್ದಾರೆ ಎನ್ನಲಾಗಿದೆ.

ಕೇಸರಿ ಶಾಲು ಯಾಕೋ ಹಾಕಿದ್ದೀಯಾ? ಎಂದು ಬೈದು, ಬಟ್ಟೆ ಹರಿದು ಹಾಕಿದ್ದಾರೆ. ಈ ಕುರಿತು ಮಾಲೀಕ ರಾಮ್‌ಜಿ ಕಲಾಸಿಪಾಳ್ಯ ಠಾಣೆಗೆ ದೂರನ್ನು ನೀಡಿದ್ದಾರೆ. ಕಲಾಸಿಪಾಳ್ಯ ಪೊಲೀಸ್‌ ಠಾಣೆಯಲ್ಲಿ ಎನ್‌ಸಿಆರ್‌ ದಾಖಲಾಗಿದೆ.

Comments are closed.