Cash Rules: ಮನೆಯಲ್ಲಿ ಎಷ್ಟು ಹಣ ಇಟ್ಕೊಬೋದು ಗೊತ್ತಾ?! RBI ನಿಯಮ ಏನ್ ಹೇಳುತ್ತೆ?

Share the Article

 

Cash Rules: ದೇಶದಲ್ಲಿ ಅಕ್ರಮ ಆಸ್ತಿ ಗಳಿಕೆ ಪ್ರಕರಣಗಳು ತುಂಬಾ ಹೆಚ್ಚಾಗುತ್ತಿದೆ. ಎಲ್ಲಾ ರಾಜಕೀಯ ವ್ಯಕ್ತಿಗಳು, ಹಣವಂತರು, ಸಿರಿವಂತರಾದಿಯಾಗಿ ಅನೇಕರು ತೆರಿಗೆಯನ್ನು ಪಾವತಿಸಿದೃ ಬೇಕಾಬಿಟ್ಟಿ ಹಣವನ್ನು ಮನೆಯಲ್ಲಿ ಸಂಗ್ರಹಿಸಿಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಮನೆಯಲ್ಲಿ ಎಷ್ಟು ಕ್ಯಾಶ್ ಇರಬೇಕೆಂದು ಚರ್ಚೆಯಾಗುತ್ತಿದೆ.

ಹೌದು, ಹಣದ ವಿಚಾರದಲ್ಲಿ ತೆರಿಗೆ ಇಲಾಖೆಯು(Income Tax) ಸಾಕಷ್ಟು ನಿಯಮಗಳನ್ನು ತರುತ್ತದೆ. ಅಂತೆಯೇ ಒಂದು ಮನೆಯಲ್ಲಿ ಇಷ್ಟು ಕ್ಯಾಶ್ ಇರಬೇಕು ಅಂದರೆ ಹಣ ಇರಬೇಕೆಂದು ಇಲಾಖೆಯು ರೂಲ್ಸ್(Cash Rules) ಏನಾದರೂ ಮಾಡಿದೆಯೇ? ಅದಕ್ಕಿಂತಲೂ ಹೆಚ್ಚಿಗೆ ಇಟ್ಟುಕೊಂಡರೆ ಅಪಾಯ ಕಟ್ಟಿಟ್ಪ ಬುತ್ತಿಯೇ? ಅಂದರೆ ಕಾನೂನು ಕ್ರಮ ಜರುಗಿಸಲಾಗುವುದೇ?ಎಂಬ ವಿಚಾರ ಸದ್ಯ ಸಾಕಷ್ಟು ಚರ್ಚೆಯಾಗಿದೆ. ಹಾಗಿದ್ರೆ ನಾವು ನಮ್ಮ ಮನೆಗಳಲ್ಲಿ ತೆರಿಗೆ ಇಲಾಖೆಯ ಪ್ರಕಾರ ಎಷ್ಟು ಹಣವನ್ನು ಇಟ್ಟುಕೊಳ್ಳಬಹುದು ಗೊತ್ತಾ?! ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.

ಹಣ ಇಟ್ಟುಕೊಳ್ಳಲು ಮಿತಿ ಇದೆಯಾ?

ಮನೆಯಲ್ಲಿ ಕ್ಯಾಷ್ ಇಟ್ಟುಕೊಳ್ಳಲು ಮಿತಿ ಇಲ್ಲ. ಇಷ್ಟೇ ಹಣ ಹೊಂದಬೇಕೆಂದು ನಿಯಮ ಇಲ್ಲ. ಆದರೆ, ನಿರ್ಬಂಧತೆ ಇದೆ. ಆ ಹಣಕ್ಕೆ ಸೂಕ್ತ ದಾಖಲೆ ನಿಮ್ಮ ಜೊತೆ ಇರಬೇಕು. ದಾಖಲೆ ಇಲ್ಲದ ಹಣವೇನಾದರೂ ಐಟಿ ಇಲಾಖೆಗೆ ಸಿಕ್ಕಿದಲ್ಲಿ ಶೇ. 137ರಷ್ಟು ದಂಡ ಕಟ್ಟಬೇಕಾಗುತ್ತದೆ ಹುಷಾರ್. ಉದಾಹರಣೆಗೆ ಒಂದು ಕೋಟಿ ರೂಪಾಯಿ ಇದ್ದರೆ ಅದಕ್ಕೆ ನೀವು 1.37 ಕೋಟಿ ಪಾವತಿಸಬೇಕು!! ಅಲ್ಲದೆ ಒಂದು ಹಣಕಾಸು ವರ್ಷದಲ್ಲಿ 20 ಲಕ್ಷ ರೂಗಿಂತ ಹೆಚ್ಚಿನ ನಗದು ವಹಿವಾಟು ನಡೆಸಿದರೆ ಪ್ಯಾನ್, ಆಧಾರ್ ದಾಖಲೆ ಒದಗಿಸಬೇಕು.

ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 68 ರಿಂದ 69Bಗಳು ವಿವರಿಸಲಾಗದ ಆಸ್ತಿಗಳು ಮತ್ತು ಆದಾಯವನ್ನ ಉಲ್ಲೇಖಿಸುತ್ತವೆ. ನೀವು ಅದರ ಮೂಲವನ್ನ ವಿವರಿಸಲು ಸಾಧ್ಯವಾಗದಿದ್ದರೆ, ನಿಮ್ಮ ಬಳಿ ಕಂಡುಬರುವ ಹಣವನ್ನ ಬಹಿರಂಗಪಡಿಸದ ಆದಾಯವೆಂದು ಪರಿಗಣಿಸಬಹುದು. ಈ ಸಂದರ್ಭಗಳಲ್ಲಿ, ತೆರಿಗೆ ಅಧಿಕಾರಿಗಳು ಮೊತ್ತದ 78 ಪ್ರತಿಶತದಷ್ಟು ಹೆಚ್ಚಿನ ತೆರಿಗೆ ಮತ್ತು ದಂಡವನ್ನು ವಿಧಿಸಬಹುದು.

ಕಾನೂನು ನಗದು ಹೊಂದಿಕೆಗೆ ಗರಿಷ್ಠ ಮಿತಿಯನ್ನ ನಿರ್ದಿಷ್ಟಪಡಿಸದಿದ್ದರೂ, ವಿವರಿಸಲಾಗದ ದೊಡ್ಡ ಪ್ರಮಾಣದ ನಗದು ಅನುಮಾನಗಳನ್ನ ಹುಟ್ಟು ಹಾಕಬಹುದು. ತನಿಖೆಯ ಸಮಯದಲ್ಲಿ ಪ್ರತಿ ರೂಪಾಯಿಯ ಮೂಲವನ್ನ ಸಾಬೀತುಪಡಿಸಲು ದಾಖಲೆಗಳು ಬೇಕಾಗುತ್ತವೆ. ನಿಮ್ಮ ಆದಾಯ ದಾಖಲೆಗಳು, ವ್ಯವಹಾರ ಖಾತೆಗಳು ಮತ್ತು ಐಟಿಆರ್ ಫೈಲಿಂಗ್‌’ಗಳು ಇದನ್ನು ಪ್ರತಿಬಿಂಬಿಸಬೇಕು. ನೀವು ವ್ಯಾಪಾರ ಮಾಲೀಕರಾಗಿದ್ದರೆ, ನಿಮ್ಮ ನಗದು ಪುಸ್ತಕದಲ್ಲಿರುವ ನಗದು ನಿಮ್ಮ ಖಾತೆ ಪುಸ್ತಕಗಳಿಗೆ ಹೊಂದಿಕೆಯಾಗಬೇಕು.

Comments are closed.