Cinema: ಜೈಲಲ್ಲಿರೋ ದರ್ಶನ್ ನಟನೆಯ`ಇದ್ರೆ ನೆಮ್ದಿಯಾಗ್ ಇರ್ಬೇಕ್’ ಸಾಂಗ್ ರಿಲೀಸ್!

Share the Article

ದರ್ಶನ್ ನಟನೆಯ ಡೆವಿಲ್ ಸಿನಿಮಾದ (The Devil) `ಇದ್ರೆ ನೆಮ್ದಿಯಾಗ್ ಇರ್ಬೇಕ್‌ʼ (Idre Nemdiyaag Irbek) ಹಾಡು ಇಂದು ಬಿಡುಗಡೆ ಆಗಿದೆ. ನಿಜ ಜೀವನದಲ್ಲಿ ಜೈಲಲ್ಲಿ ನೆಮ್ಮದಿ ಇಲ್ಲದ ರಾತ್ರಿ ಹಗಲುಗಳನ್ನು ಕಳೆಯುತ್ತಿರುವ ದರ್ಶನ್ ಡೆವಿಲ್ ಸಿನ್ಮಾದಲ್ಲಿ ಇದ್ರೆ ನೆಮ್ದಿಯಾಗ್ ಇರ್ಬೇಕ್‌ ಅನ್ನೋ ಹಾಡಿದೆ. ಜೈಲಿನ ಏಕಾಂಗಿ ಜೀವನದಲ್ಲಿ ದರ್ಶನ್ ಗೆ ನೆಮ್ಮದಿ ಹೇಳಲು ಈ ಹಾಡು ಸೃಷ್ಟಿಸಲಾಗಿದೆ ಅನ್ನೋದು ಒಂದು ಕುಹಕ ಇದ್ದೀತು.

ಅಜನೀಶ್ ಲೋಕನಾಥ್ ಸಂಗೀತ ನಿರ್ದೇಶನದಲ್ಲಿ ದೀಪಕ್ ಬ್ಲೂ ಹಾಡಿಗೆ ಧ್ವನಿಯಾಗಿದ್ದಾರೆ. ದರ್ಶನ್ ಜೈಲಿನಲ್ಲಿರುವಾಗಲೇ ಡೆವಿಲ್ ಸಿನಿಮಾದ ಮೊದಲ ಸಾಂಗ್ ರಿಲೀಸ್ ಆಗಿದೆ.

ಚಿತ್ರದ ನಿರ್ದೇಶಕ ಪ್ರಕಾಶ್ ವೀರ್, ಪರಪ್ಪನ ಅಗ್ರಹಾರ ಜೈಲಿನಲ್ಲಿರೋ ದರ್ಶನ್ (Darshan) ಜೊತೆ ಚರ್ಚಿಸಿ ಇಂದು ಹಾಡನ್ನು ಬಿಡುಗಡೆ ಮಾಡಿದ್ದಾರೆ. ಡೆವಿಲ್ ಹಾಡು ನೋಡಿ ದರ್ಶನ್ ಅಭಿಮಾನಿಗಳು ಒಂದು ಕಡೆ ಸಂಭ್ರಮ ಪಡುತ್ತಿದ್ದಾರೆ.

B.Ajaneesh Loknath,

darshan,

Idre Nemdiyaag Irbek,

Prakash Veer,

The Devil,

ಇದ್ರೆ ನೆಮ್ದಿಯಾಗಿರ್ಬೇಕ್‌,

ದರ್ಶನ್ ಫ್ಯಾನ್ಸ್,

ದಿ ಡೆವಿಲ್‌,

Comments are closed.