Bengaluru:ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿಂದು ʻಧರ್ಮ ಸಂರಕ್ಷಣಾʼ ಸಮಾವೇಶ

Bengaluru:ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿಂದು ʻಧರ್ಮ ಸಂರಕ್ಷಣಾʼ ಸಮಾವೇಶ!Bengaluru: ಧರ್ಮಸ್ಥಳದ (Dharmasthala) ವಿರುದ್ಧ ಪಿತೂರಿ ನಡೆಸಿ ಕಂಡ ಕಂಡಲೆಲ್ಲ ಗುರುತು ಮಾಡಿ ಗುಂಡಿ ಅಗೆಸಿದ್ದ ಮುಸುಕುಧಾರಿಯನ್ನ ಎಸ್‌ಐಟಿ ಬಂಧಿಸಿದೆ. ಇದೀಗ ಶ್ರೀ ಕ್ಷೇತ್ರ ಧರ್ಮಸ್ಥಳದ ವಿರುದ್ದ ನಿರಾಧಾರ ಆರೋಪ ಮಾಡುತ್ತಾ ವ್ಯವಸ್ಥಿತ ಷಡ್ಯಂತ್ರ ನಡೆದಿರುವುದನ್ನು ಖಂಡಿಸಿ ಇಂದು ಫೀಡಂ ಪಾರ್ಕ್‌ನಲ್ಲಿ (Freedom Park) ಬೆಳಗ್ಗೆ 11 ಗಂಟೆಗೆ ಧರ್ಮ ಸಂರಕ್ಷಣಾ ಸಮಾವೇಶ ಹಮ್ಮಿಕೊಳ್ಳಲಾಗಿದೆ.
ಈ ಸಮಾವೇಶವನ್ನು ಪುಣ್ಯ ಕ್ಷೇತ್ರ ಸಂರಕ್ಷಣಾ ಸಮಿತಿಯಿಂದ ಆಯೋಜಿಸಲಾಗಿದ್ದು, ಬೆಂಗಳೂರಿನ ಧರ್ಮಸ್ಥಳ ಭಕ್ತರು ಹಾಗೂ ಬೆಂಗಳೂರು ಸುತ್ತಮುತ್ತಲಿನ ಊರುಗಳ ಭಕ್ತರು ಆಗಮಿಸಲಿದ್ಧಾರೆ.

Comments are closed.