ಜಿ.ಪಂ., ತಾ.ಪಂ.ಮೀಸಲಾತಿ ಬದಲಾವಣೆ ಸಾಧ್ಯತೆ ?

ರಾಜ್ಯದ ಎಲ್ಲ ಜಿಲ್ಲಾ ಪಂಚಾಯಿತಿ ಮತ್ತು ತಾಲ್ಲೂಕು ಪಂಚಾಯಿತಿ ಕ್ಷೇತ್ರಗಳ ಮೀಸಲಾತಿ ಪಟ್ಟಿಯ ಕರಡು ಅಧಿಸೂಚನೆಗಳನ್ನು ರಾಜ್ಯ ಚುನಾವಣಾ ಆಯೋಗ ಜು.1ರಂದು ರಾತ್ರಿ ಪ್ರಕಟಿಸಿದೆ.ಜು.8ರಂದು ಆಕ್ಷೇಪಣೆ ಸಲ್ಲಿಸಲು ಕೊನೆಯ ದಿನವಾಗಿದೆ.

ಮೀಸಲಾತಿಯ ಕರಡು ಪಟ್ಟಿಗೆ ಈಗಾಗಲೇ ಹಲವು ಜಿಲ್ಲೆಗಳಲ್ಲಿ ಆಕ್ಷೇಪಣೆಯನ್ನೂ ಈಗಾಗಲೇ ಸಲ್ಲಿಸಿದ್ದಾರೆ.ಹಲವೆಡೆ ಕಳೆದ ಬಾರಿ ಮಹಿಳೆಯರಿಗೆ ಮೀಸಲಾಗಿದ್ದ ಕ್ಷೇತ್ರಗಳಲ್ಲಿ ಈ ಬಾರಿಯೂ ಮಹಿಳೆಯರಿಗೆ ಮೀಸಲಾತಿ ನಿಗದಿಯಾಗಿದೆ.ಸಾಮಾನ್ಯ ಕ್ಷೇತ್ರದಲ್ಲೂ ಇದೇ ರೀತಿಯಾಗಿದೆ.ಕೆಲವು ತಾಲೂಕುಗಳಲ್ಲಿ ಜಿ.ಪಂ.ಕ್ಷೇತ್ರದಲ್ಲಿ ಪುರುಷರಿಗೆ ಅವಕಾಶವೇ ಇಲ್ಲದಾಗಿದೆ.ಯಾವ ಮಾನದಂಡದ ಆಧಾರದಲ್ಲಿ ಈ ಕರಡು ಪಟ್ಟಿ ತಯಾರಿಸಲಾಗಿದೆ ಎಂದು ಹಲವೆಡೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿಗಳ ಚುನಾಯಿತ ಸದಸ್ಯರ ಅಧಿಕಾರದ ಅವಧಿ ಏಪ್ರಿಲ್‌ ಅಂತ್ಯದಲ್ಲೇ ಕೊನೆಗೊಂಡಿದೆ. ಕೋವಿಡ್‌ ಕಾರಣದಿಂದ ಚುನಾವಣೆ ವಿಳಂಬವಾಗಿದ್ದು, ಆಡಳಿತಾಧಿಕಾರಿಗಳನ್ನು ನೇಮಿಸಲಾಗಿದೆ. ಜಿಲ್ಲಾ ಪಂಚಾಯಿತಿ ಮತ್ತು ತಾಲ್ಲೂಕು ಪಂಚಾಯಿತಿಗಳ ಚುನಾವಣೆಗೆ ಸಿದ್ಧತೆ ಮುಂದುವರಿಸಿರುವ ರಾಜ್ಯ ಚುನಾವಣಾ ಆಯೋಗವು, ಕರಡು ಮೀಸಲಾತಿ ಪಟ್ಟಿಯನ್ನು ಅಂತಿಮಗೊಳಿಸಿದೆ.

ಇ– ರಾಜ್ಯಪತ್ರದ ಮೂಲಕ ಎಲ್ಲ ಕ್ಷೇತ್ರಗಳ ಮೀಸಲಾತಿ ಪಟ್ಟಿಗಳನ್ನು ಪ್ರಕಟಿಸಲಾಗಿದೆ.

ಆಕ್ಷೇಪಣೆ ಸಲ್ಲಿಸಲು ಸಲ್ಲಿಸಲು ಏಳು ದಿನಗಳ ಕಾಲಾವಕಾಶ ನೀಡಲಾಗಿದೆ. ಯಾವುದೇ ಆಕ್ಷೇಪಣೆಗಳು ಇದ್ದರೆ ಜುಲೈ 8ರೊಳಗೆ ‘ಕಾರ್ಯದರ್ಶಿ, ರಾಜ್ಯ ಚುನಾವಣಾ ಆಯೋಗ, ಒಂದನೇ ಮಹಡಿ, ಕೆಎಸ್‌ಸಿಎಂಎಫ್‌ ಕಟ್ಟಡ (ಹಿಂಭಾಗ), ನಂ. 8, ಕನ್ನಿಂಗ್‌ ಹ್ಯಾಂ ರಸ್ತೆ, ಬೆಂಗಳೂರು– 560052’ ಈ ವಿಳಾಸಕ್ಕೆ ಸಲ್ಲಿಸುವಂತೆ ಆಯೋಗ ಸೂಚಿಸಿದೆ.

ಕರಡು ಪಟ್ಟಿ ಪ್ರಕಟವಾದ ಮರುದಿನವೇ ಆಯೋಗಕ್ಕೆ ಆಕ್ಷೇಪಣೆಗಳನ್ನು ಸಲ್ಲಿಸಿದ್ದಾರೆ.ಇನ್ನೂ ದಿನಗಳಿರುವುದರಿಂದ ಇನ್ನಷ್ಟು ಆಕ್ಷೇಪಣೆ ಸಲ್ಲಿಸುವ ಸಾಧ್ಯತೆ ಇದೆ‌.ಮೀಸಲಾತಿಯೂ ಆಯಾ ಜಿಲ್ಲೆ ಹಾಗೂ ತಾಲೂಕಿನಲ್ಲಿ ಬದಲಾವಣೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ.ಮೀಸಲಾತಿಗಳು ಜಿಲ್ಲೆಯಲ್ಲಿ ಅಷ್ಟೇ ಇರಲಿದ್ದು,ಕ್ಷೇತ್ರ ಬದಲಾವಣೆಯಾಗುವ ಸಾಧ್ಯತೆ ಇದೆ.

Leave A Reply

Your email address will not be published.