ಆ.24: ಮಾಡಾವಿನಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ – ವಿವಿಧ ಕ್ರೀಡಾಕೂಟ ,ಯಕ್ಷಗಾನ ರಂಗಪ್ರವೇಶ, ಮುದ್ದು ಕೃಷ್ಣ ವೇಷ ಸ್ಪರ್ಧೆ

ಪುತ್ತೂರು: ಅಭಿನವ ಕೇಸರಿ ಮಾಡಾವು ಇದರ ಆಶ್ರಯದಲ್ಲಿ ಶ್ರೀ ಕೃಷ್ಣಜನ್ಮಾಷ್ಟಮಿ ಅಂಗವಾಗಿ ವಿವಿಧ ಕ್ರೀಡಾಕೂಟ ಮಾಡಾವು ಕಟ್ಟೆಯ ಅಯ್ಯಪ್ಪ ಭಜನಾ ಮಂದಿರದ ಬಳಿ ಅ24ರಂದು ನಡೆಯಲಿದೆ.

ಬೆಳಿಗ್ಗೆ 8.30ರಿಂದ ಕ್ರೀಡಾಕೂಟ ಆರಂಭವಾಗಲಿದ್ದು ಬೆಳಿಗ್ಗೆ 9ಗಂಟೆಗೆ ಸಭಾ ಕಾರ್ಯಕ್ರಮ ನಡೆಯಲಿದೆ.
ಕೆಯ್ಯರು ಶ್ರೀ ಮಹಿಷಮರ್ದಿನಿ ದುರ್ಗಾಪರಮೇಶ್ವರಿ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಮಾಜಿ ಅಧ್ಯಕ್ಷ ಶಶಿಧರ ರಾವ್ ಬೊಳಿಕ್ಕಳ ಅವರ ಅಧ್ಯಕ್ಷತೆಯಲ್ಲಿ ಜ್ಯೋತಿ ಚಿಕಿತ್ಸಾಲಯ ಡಾ| ರಾಮಚಂದ್ರ ಭಟ್ ದೀಪ ಪ್ರಜ್ವಲಿಸಿ ಉದ್ಘಾಟಿಸುವರು.
ಅತಿಥಿಗಳಾಗಿ ಅಯ್ಯಪ್ಪ ಭಜನಾ ಮಂದಿರ ಮಾಡಾವು ಅಧ್ಯಕ್ಷ ರವೀಂದ್ರ ರೈ ನೆಲ್ಯಾಜೆ, ಅಯ್ಯಪ್ಪ ಭಕ್ತವೃಂದ ಮಾಡಾವು ಅಧ್ಯಕ್ಷ ಕೃಷ್ಣಮೂರ್ತಿ ಭಟ್ ಸವಣೂರು, ಕ್ಲಬ್ ಜೋನ್ ಫಿಟ್‌ನೆಸ್ ಸೆಂಟರ್ ಮತ್ತು ಮಲ್ಟಿ ಜಿಮ್ ಮಾಲಕ ಶಶಿಧರನ್ ಕೆ, ನಿವೃತ್ತ ಕಾರ್ಯದರ್ಶಿ ಹಾಲು ಉತ್ಪಾದಕರ ಸಂಘ ಕೆಯ್ಯೂರು ಚಂದ್ರಹಾಸ ರೈ ಬೊಳಿಕಲ ಮಠ, ಪಿಂಚಣಿ ಮತ್ತು ಸಣ್ಣ ಉಳಿತಾಯ ಇಲಾಖೆ ಮಂಗಳೂರು ಇದರ ಸಹಾಯಕ ನಿರ್ದೇಶಕ ಪ್ರಸನ್ನ ಎಂ.ಪಿ, ಬಿಂದು ನ್ಯಾಷನಲ್ ಪ್ರೊಕ್ಯೂಮೆಂಟ್ ಮ್ಯಾನೇಜರ್ ಮುರಳೀಧರ ಕೆಂಗುಡೇಲು, ಪ್ರಗತಿಪರ ಕೃಷಿಕ ಗೋಪಾಲ್ ದಾಸ್ ಚೆನ್ನಾವರ, ಉಪಸ್ಥಿತರಿರುವರು.
ಕಲಾವಿದರಾದ ಚೇತನ್ ಆಚಾರ್ಯ ಪೆರಿಂಜೆ , ತೇಜಸ್ ಆಚಾರ್ಯ,ಬಾಲಪ್ರತಿಭೆ ಪ್ರಶ್ವಿ ಶೆಟ್ಟಿ ಮಾಡಾವು, ಬಹುಮುಖ ಪ್ರತಿಭೆ ಸೌಜನ್ಯ ಎಂ, ಯಕ್ಷಗಾನ ಬಾಲ ಕಲಾವಿದ ಧ್ಯಾನ್ ರೈ ಅವರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ.
ಸಂಜೆ ನಡೆಯುವ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಸುಬ್ರಹ್ಮಣ್ಯ ರೈ ಬೊಳಿಕಲ ಶೇಡಿ ಗೌರವಾಧ್ಯಕ್ಷರು ಅಭಿನವ ಕೇಸರಿ ಮಾಡಾವು, ಭೌದ್ದಿಕ್ ಕಾರ್ಯಕ್ರಮ ಶರಾವತಿ ರವಿ ನಾರಾಯಣ ಪುತ್ತೂರು ದುರ್ಗಾ ವಾಹಿನಿ ಸಂಯೋಜಕಿ ವಿಶ್ವ ಹಿಂದೂ ಪರಿಷತ್ ಪುತ್ತೂರು ನಗರ ಪ್ರಖಂಡ, ಮುಖ್ಯ ಅತಿಥಿಗಳಾಗಿ ಹಿಂದೂ ಮುಖಂಡ ಪುತ್ತೂರು ಅರುಣ್ ಕುಮಾರ್ ಪುತ್ತಿಲ, ವಿಜಯ ಸಾಮ್ರಾಟ್ ರಿ. ಪುತ್ತೂರು ಸ್ಥಾಪಕ ಅಧ್ಯಕ್ಷ ಸಹಜ್ ರೈ ಬಳಜ್ಜ, ಕೆಯ್ಯರು ಗ್ರಾಮ ಪಂಚಾಯತ್ ಅಧ್ಯಕ್ಷ ಶರತ್ ಕುಮಾರ್ ಮಾಡಾವು,ಕುಂಬ್ರ, ಶ್ರೀ ಕ್ಷೇತ್ರ ಕೆಯ್ಯೂರು ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಎ.ಕೆ ಜಯರಾಮ ರೈ,ಕುಂಬ್ರ ಮಾತೃಶ್ರೀ ಅರ್ಥ್ ಮೂವರ್ಸ್‌ನ ಮೋಹನದಾಸ್ ರೈ ಕುಂಬ್ರ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಪ್ರಸನ್ನ ಮಾರ್ತ ಉಪಸ್ಥಿತರಿರುವರು.
ಸನ್ಮಾನ ಕಾರ್ಯಕ್ರಮ
ಸಮಾರೋಪ ಸಮಾರಂಭದಲ್ಲಿ ಯಕ್ಷಗಾನ ಗುರು ವಾಸುದೇವ ರೈ ಬೆಳ್ಳಾರೆ ಹಾಗೂ ವಿ.ಹಿಂ.ಪ.ಅಂಬ್ಯುಲೆನ್ಸ್ ಕೆಯ್ಯೂರು ಇದರ ಚಾಲಕರಿಗೆ ಸನ್ಮಾನ ನಡೆಯಲಿದೆ.
ಅಭಿನವ ಯಕ್ಷಕಲಾ ಕೇಂದ್ರ ಮಾಡಾವು ಇದರ ವಿದ್ಯಾರ್ಥಿಗಳಿಂದ ವಾಸುದೇವ ರೈ ಬೆಳ್ಳಾರೆ ನಿರ್ದೇಶನದಲ್ಲಿ ಅಗಸ್ಟ್ 24 ಸಂಜೆ 7:00 ರಿಂದ 10ರ ತನಕ ‘ಲೀಲಾವಿನೋದಿ’ ಶ್ರೀಕೃಷ್ಣ ಯಕ್ಷಗಾನ ರಂಗ ಪ್ರವೇಶ ಮತ್ತು ಪ್ರದರ್ಶನ ನಡೆಯಲಿದೆ. ಆರು ವರ್ಷದ ಒಳಗಿನ ಮಕ್ಕಳಿಗೆ “ಮುದ್ದುಕೃಷ್ಣ ವೇಷ” ಸ್ಪರ್ಧೆ ನಡೆಯಲಿದೆ.
ಕ್ರೀಡಾಕೂಟ ಪಂದ್ಯಾಟಗಳು ಕೆಯ್ಯೂರು, ಪಾಲ್ತಾಡಿ, ಕೆದಂಬಾಡಿ, ಕೊಳ್ತಿಗೆ, ಮತ್ತು ಅರಿಯಡ್ಕ ಗ್ರಾಮಸ್ಥರಿಗೆ ಸೀಮಿತವಾಗಿದ್ದು, ಪುರುಷರ ವಿಭಾಗದಲ್ಲಿ ಮಡಕೆ ಒಡೆಯುವುದು, ಜಾರುಕಂಬ ನಡಿಗೆ, ಕಬಡ್ಡಿ,ವಾಲಿಬಾಲ್, ಹಗ್ಗಜಗ್ಗಾಟ,ಮಹಿಳೆಯರ ವಿಭಾಗದಲ್ಲಿ ಮಡಕೆ ಒಡೆಯುವುದು, ಭಕ್ತಿ ಗೀತೆ, ಹಗ್ಗ ಜಗ್ಗಾಟ, ಜಾರುಕಂಬ ನಡಿಗೆ, ಹಾಗೂ ಮಕ್ಕಳ ವಿಭಾಗದಲ್ಲಿ ಭಕ್ತಿ ಗೀತೆ, ಸಂಗೀತ ಕುರ್ಚಿ, ಚಿತ್ರಕಲೆ ಪೆನ್ಸಿಲ್ ಸ್ಕೆಚ್ ನಡೆಯಲಿದೆ. ಎಲ್ಲರಿಗೂ ಭಾಗವಹಿಸಲು ಅವಕಾಶವಿದೆ ಎಂದು ಅಭಿನವ ಕೇಸರಿ ಮಾಡಾವು ಅಧ್ಯಕ್ಷ ಶಶಿಧರ ಆಚಾರ್ಯ ಮಾಡಾವು ಪ್ರಕಟಣೆಯಲ್ಲಿ ತಿಳಿಸಿದ್ದಾರೆ
Comments are closed.