ಇನ್ನಷ್ಟು ತಟ್ಟಲಿದೆ ಬೆಲೆ ಏರಿಕೆಯ ಬಿಸಿ…ಅಕ್ಟೋಬರ್ ಒಂದರಿಂದ ಎಲ್ ಪಿ ಜಿ ಬೆಲೆ ಗಗನಕ್ಕೇರಲಿದೆಯೇ?
ದಿನದಿಂದ ದಿನಕ್ಕೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ನೈಸರ್ಗಿಕ ಅನಿಲ ಬೆಲೆ ಏರಿಕೆ ಮುಂದುವರಿದಿದ್ದು,ಶೀಘ್ರವೇ ಎಲ್ ಪಿ ಜಿ ಬೆಲೆಯೂ ಏರಿಕೆಯ ಸಾಧ್ಯದೆ ಇದೆ.ದೇಶಿಯ ಗಣಿಗಾರಿಕೆಯಲ್ಲಿ ಇದರ ಪರಿಣಾಮ ಬೀರಿದ್ದು, ಅಕ್ಟೋಬರ್ ಒಂದರಿಂದಲೇ ದೇಶಡೆಲ್ಲೆಡೆ ಅನಿಲ ಬೆಲೆ ಶೇ.60ರಷ್ಟು ಏರಿಕೆಯಾಗಲಿದೆ.
ಈಗಾಗಲೇ ಎಲ್.ಪಿ.ಜಿ.ಗೆ ಸರ್ಕಾರ ನಿಗದಿಪಡಿಸಿದ್ದ ಸಬ್ಸಿಡಿಯನ್ನು ಕೆಳದಿನಗಳ ಹಿಂದೆಯೇ ಕೊನೆಗೊಳಿಸಲಾಗಿದೆ. ಇನ್ನು ತೈಲ ಕಂಪನಿ ಗಳು ಸರ್ಕಾರ ನೀಡುವ ಸಹಾಯಧನವನ್ನಷ್ಟೇ ಸಹಿಸಬೇಕಾಗಿದೆ.
ಒಟ್ಟಿನಲ್ಲಿ ಪೆಟ್ರೋಲ್, ಡೀಸಲ್ ಬೆಲೆ ಏರಿಕೆಯ ವಿರುದ್ಧ ಅಲ್ಲಲ್ಲಿ ಪ್ರತಿಭಟನೆಗಳು ನಡೆಯುತ್ತಿದೆ. ಇದರ ನಡೆವೆಯೇ ಅಕ್ಟೋಬರ್ ಒಂದರಿಂದ ತೈಲ ಬೆಲೆ ಏರಿಕೆಯ ಬಿಸಿಯೂ ತಟ್ಟಲಿದೆ.