INDIA Todayಯ ರಾಜ್‌ದೀಪ್ ಸರ್ ದೇಸಾಯಿ ವಿರುದ್ಧ ಡಾ.ಎಂ.ಕೆ.ಪ್ರಸಾದ್‌ರಿಂದ ಪ್ರತಿಭಟನೆ


ಪುತ್ತೂರು: ರಾಷ್ಟ್ರದ ಕುರಿತು ಅಭಿವೃದ್ಧಿಯ ಚಿಂತನೆ ಇಲ್ಲದ ತೀರಾ ಅನಗತ್ಯ ಚರ್ಚೆಗಳನ್ನು ಮಾಡುತ್ತಿರುವ India Today TV ಯ ಕಾರ್ಯನಿರ್ವಾಹಕ ಸಂಪಾದಕ ರಾಜ್‌ದೀಪ್ ಸರ್ ದೇಸಾಯಿ ವಿರುದ್ಧ ಪುತ್ತೂರಿನ ಖ್ಯಾತ ವೈದ್ಯ ,ಹಿಂದೂ ಸಂಘಟನೆಗಳ ಮಾರ್ಗದರ್ಶಕರಾಗಿರುವ ಡಾ.ಎಂ.ಕೆ.ಪ್ರಸಾದ್ ಭಂಡಾರಿ ಅವರು ಬಿತ್ತಿಫಲಕ ಪ್ರದರ್ಶನ ಮಾಡಿ ತಮ್ಮ ಪ್ರತಿಭಟನೆ, ಆಕ್ರೋಶ ಹೊರಹಾಕಿದ್ದಾರೆ.

ರಾಜ್‌ದೀಪ್ ಸರ್ ದೇಸಾಯಿ ಅವರನ್ನು India Today ಬಳಗದಿಂದ ಹೊರ ಹಾಕಬೇಕು.ಇಲ್ಲವೇ ನಾನು ಆ ಮಾಧ್ಯಮವನ್ನು ಬಹಿಷ್ಕಾರ ಮಾಡುತ್ತೇನೆ ಎಂದು ತನ್ನ ಪ್ರತುಭಟನಾ ಫಲಕದಲ್ಲಿ ಉಲ್ಲೇಖಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರನ್ನು ಗುರಿಯಾಗಿಸಿ ಅವರ ಹಾಗೂ ಸರಕಾರದ ವಿರುದ್ಧ ಈ ಮಾಧ್ಯಮದಲ್ಲಿ ತಿಳಿಸಲಾಗುತ್ತಿದೆ.ಇದರಿಂದಾಗಿ India Today ಯನ್ನು ಬಹಿಷ್ಕರಿಸುತ್ತೇನೆ ಎಂದಿದ್ದಾರೆ.