ಹಸುವಿಗೆ ಗುಂಡಿಕ್ಕಿ ಕೊಂದ ದುಷ್ಕರ್ಮಿಗಳು | ತಡೆಯಲು ಬಂದ ಹಿಂದೂ ಕಾರ್ಯಕರ್ತನ ಎದೆಗೆ ಕೋವಿ ಇಟ್ಟು ಬೆದರಿಕೆ !

ಮಡಿಕೇರಿ ತಾಲ್ಲೂಕಿನ ಕಗ್ಗೋಡ್ಲು ಗ್ರಾಮದಲ್ಲಿ ಹಸುವಿಗೆ ಗುಂಡಿಕ್ಕಿ ಕೊಂದ ದುಷ್ಕೃತ್ಯ ಮತ್ತೆ ಮರುಕಳಿಸಿದೆ.
ಮಂಗಳವಾರ ಸಂಜೆ 7 ಗಂಟೆಗೆ ನಡೆದ ಪ್ರಕರಣ ಇದಾಗಿದೆ.
ವಿಷಯ ತಿಳಿದು ಸ್ದಳಕ್ಕೆ 50 ಕ್ಕೂ ಹೆಚ್ಚು ಹಿಂದು ಜಾಗರಣ ವೇದಿಕೆಯ ಕಾರ್ಯಕರ್ತರ ದೌಡು.

 

ಎಲ್ಲಾ ಕಡೆಗಳಿಂದಲೂ ಸುತ್ತುವರಿದ ಹಿಂದೂ ಕಾರ್ಯಕರ್ತರು ಜಮಾಯಿಸಿ ಪರಿಸ್ಥಿತಿ ಬಿಗುವಾಗುತ್ತಿರುವಾಗ ಮಡಿಕೇರಿ ಗ್ರಾಮಾಂತರ ಪೋಲೀಸರ ಆಗಮನ.

ಕೊಡಗಿನಲ್ಲಿ ಮುಂಚೂಣಿ ತಂಡದ ಕಾರ್ಯಕರ್ತನ ಎದೆಗೆ ಕೋವಿಯಿಟ್ಟು ಬೆದರಿಸಿ ದುಷ್ಕರ್ಮಿಗಳು ಕತ್ತಲಲ್ಲಿ ಪರಾರಿ ಆದ ದುಷ್ಕರ್ಮಿಗಳು.
ಸ್ಥಳದಲ್ಲಿದ್ಢ ಗೋಮಾಂಸ ಮತ್ತು ಚಾಕು ವಶಪಡಿಸಿಕೊಂಡ ಪೋಲೀಸರು. ಈಗ ಕಗ್ಗೋಡ್ಲು ಗ್ರಾಮದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ.

ಆರೋಪಿಗಳನ್ನು ಶೀಘ್ರವೇ ಬಂದಿಸುವುದಾಗಿ ಪೋಲೀಸರ ಭರವಸೆ ನೀಡಿದ್ದರೂ ಇಂದು ಹಿಂದು ಜಾಗರಣ ವೇದಿಕೆಯ ತುರ್ತು ಸಭೆ ಕರೆದಿದೆ.

ಕೊಡಗಿನಲ್ಲಿ ದಿನನಿತ್ಯವೂ ನಡೆಯುತ್ತಿರುವ ಗೋಹತ್ಯೆ.
ಗೋಹತ್ಯೆ ತಡೆಗಟ್ಟುವಲ್ಲಿ ಪೋಲೀಸ್ ಇಲಾಖೆ ಸಂಪೂರ್ಣ ವಿಫಲ ಎಂದು ಹಿಂದು ಜಾಗರಣ ವೇದಿಕೆ ಪ್ರಮುಖ ನಾಯಕರು ಆಕ್ರೋ ಶ ವ್ಯಕ್ತಪಡಿಸಿದ್ದಾರೆ.

ಕಳೆದ ವಾರವಷ್ಟೆ ಕಗ್ಗೋಡ್ಲುವಿನಲ್ಲಿ ರೈತರ ಗೋವಿಗೆ ಗುಂಡಿಕ್ಕಿ ಮಾಂಸ ಮಾಡಿ ಕೊಂಡೊಯ್ದಿದ್ದ ದುಷ್ಕರ್ಮಿಗಳು. ಇದೀಗ ಮತ್ತೊಂದು ಪ್ರಕರಣದ ಹಿನ್ನಲೆಯಲ್ಲಿ ಭುಗಿಲೆದ್ದ ಆಕ್ರೋಷ ತೀವ್ರ ಪ್ರತಿಭಟನೆಗೆ ಕಾರಣವಾಗುತ್ತಿದೆ.

Leave A Reply

Your email address will not be published.