ಬಡ ಇಂಜಿನಿಯರಿಂಗ್ ವಿದ್ಯಾರ್ಥಿಯ ಬದುಕು ಬದಲಾಯಿಸಿದ ಸಾಮಾಜಿಕ ಜಾಲತಾಣ..ಸೈಕಲ್ನಲ್ಲಿ ಬರುತ್ತಿದ್ದ ಡೆಲಿವರಿ ಬಾಯ್ ಗೆ ಬೈಕ್ ಗಿಫ್ಟ್ ನೀಡಿದ ನೆಟ್ಟಿಗರು

 

ಹೈದರಬಾದ್: ಆತನ ಹೆಸರು ಮಹಮ್ಮದ್ ಅಖಿಲ್. ಡೆಲಿವರಿ ಬಾಯ್ ಆಗಿ ಪಾರ್ಟ್’ಟೈಮ್ ಕೆಲಸ ಮಾಡಿಕೊಂಡಿದ್ದಾನೆ. ಇಂಜಿನಿಯರಿಂಗ್ ವಿದ್ಯಾರ್ಥಿಯಾಗಿರುವ ಆತನದ್ದು 7 ಜನರ ಕುಟುಂಬ. 7 ಜನರಿದ್ದರೂ ಕುಟುಂಬದ ಸಂಪೂರ್ಣ ಜವಾಬ್ದಾರಿ ಈತನ ಮೇಲಿದೆ. ಆರ್ಡರ್ ಬಂದಾಗ ಸೈಕಲ್’ನಲ್ಲಿ ತರಕಾರಿ ಹಾಗೂ ಆಹಾರ ವಸ್ತುಗಳನ್ನು ಡೆಲಿವರಿ ಮಾಡಿ ಜೀವನ ಸಾಗಿಸುತ್ತಿದ್ದ. ಇದೀಗ ಸಾಮಾಜಿಕ ಜಾಲತಾಣ ಆತನ ಜೀವನ ಬದಲಾಯಿಸಿದ್ದು ಸೈಕಲ್ ನಲ್ಲಿ ಡೆಲಿವರಿ ಕೊಡುತ್ತಿದ್ದ ಯುವಕ ದ್ವಿಚಕ್ರವಾಹನದಲ್ಲಿ ಮನೆ ಬಾಗಿಲಿಗೆ ಬರುತ್ತಿದ್ದಾರೆ.

ಆತನ ಬಾಳು ಹಸನಾಗಿ ಸಿದ್ದು ಒಂದು ಫೇಸ್ಬುಕ್ ಪೋಸ್ಟ್. ಹೈದರಾಬಾದ್’ನ ರಾಬಿನ್ ಮುಕೇಶ್ ಎಂಬವರು ನಿಲೋಫರ್ ಕೇಫೇ ಯಲ್ಲಿ ಆಹಾರ ಆರ್ಡರ್ ಮಾಡಿದ್ದರು. ತಡ ಮಾಡದ ಅಖಿಲ್ ಬೆಚ್ಚ-ಬೆಚ್ಚಗಿನ ಆಹಾರವನ್ನು ಕೆಲವೇ ಸಮಯಗಳಲ್ಲಿ ಮುಖೇಶ್ ಮನೆ ಬಾಗಿಲಿಗೆ ತಲುಪಿಸಿದ್ದ. ಬಿರುಸಿನ ಗಾಳಿ-ಮಳೆ ನಡುವೆ ಸೈಕಲ್ ನಲ್ಲಿ ಬಂದ ಆತನನ್ನು ಮುಕೇಶ್ ಮಾತನಾಡಿಸಿದ್ದಾರೆ. ಯುವಕನ ಕಷ್ಟ ತಿಳಿದ ಅವರು ಫೇಸ್ಬುಕ್ನಲ್ಲಿ ಸಹಾಯ ಕೋರಿ ಪೋಸ್ಟ್ ಮಾಡಿದ್ದಾರೆ. ಅವರ ಪೋಸ್ಟಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು 12 ಗಂಟೆಗಳಲ್ಲಿ 73 ಸಾವಿರ ರೂ ಸಂಗ್ರಹವಾಗಿದೆ. ಆ ಹಣದಲ್ಲಿ ಅಕಿಲ್’ಗೆ ಟಿವಿಎಸ್ ಎಕ್ಸೆಲ್ ಬೈಕ್ ಖರೀದಿಸಿ ಗಿಫ್ಟ್ ಕೊಡಲಾಗಿದೆ. ಜೊತೆಗೆ ಉತ್ತಮ ರೈನ್ ಕೋಟ್ ಮತ್ತು ಹೆಲ್ಮೆಟ್ ನೀಡಲಾಗಿದೆ. ಇನ್ನುಳಿದ ಹಣವನ್ನು ಆತನ ವಿದ್ಯಾಭ್ಯಾಸಕ್ಕಾಗಿ ಬಳಸಲು ನೀಡಲಾಗಿದೆ.

Leave A Reply

Your email address will not be published.