Arrest: ಇಂದು ಸಂಜೆಯೊಳಗೆ ʼಮಹೇಶ್‌ ತಿಮರೋಡಿʼ ಅರೆಸ್ಟ್‌ ಮಾಡಲು ಪರಮೇಶ್ವರ್‌ ಸೂಚನೆ

Share the Article

Arrest: ಸಿಎಂ ಸಿದ್ದರಾಮಯ್ಯ ಕೊಲೆಗಾರ ಎಂಬ ಮಹೇಶ್‌ ತಿಮರೋಡಿ ಹೇಳಿಕೆ ಇಂದು ಸದನದಲ್ಲಿ ಚರ್ಚೆಗೆ ಕಾರಣವಾಗಿದೆ. ನಂತರ ಮಹೇಶ್‌ ತಿಮರೋಡಿ ವಿರುದ್ಧ ಕಠಿಣ ಕ್ರಮಕ್ಕೆ ಸಚಿವ ಪರಮೇಶ್ವರ್‌ ಸೂಚನೆ ನೀಡಿದ್ದಾರೆ.

ಇಂದು ಸಂಜೆಯೊಳಗೆ ಮಹೇಶ್‌ ತಿಮರೋಡಿಯನ್ನು ಅರೆಸ್ಟ್‌ ಮಾಡಿ ಎಂದು ಗೃಹ ಸಚಿವ ಜಿ.ಪರಮೇಶ್ವರ್‌ ಪೊಲೀಸರಿಗೆ ಸೂಚನೆ ನೀಡಿರುವುದಾಗಿ ವರದಿಯಾಗಿದೆ.

ಧರ್ಮಸ್ಥಳ ಬಗ್ಗೆ ಅಪಪ್ರಚಾರ ಮಾಡಿದವನೇ ಸಿದ್ದರಾಮಯ್ಯ ಅವರು ಕೊಲೆಗಾರ ಎಂದು ಹೇಳಿದ್ದಾರೆ. ರಾಜ್ಯದ ಮುಖ್ಯಮಂತ್ರಿ ವಿರುದ್ಧ 24 ಕೊಲೆ ಆರೋಪ ಮಾಡಿದ್ದಾರೆ. ಇದಕ್ಕೂ ಎಸ್‌ಐಟಿ ರಚನೆ ಮಾಡಬೇಕು ಎಂದು ವಿಪಕ್ಷ ನಾಯಕ ಆರ್‌ ಅಶೋಕ್‌ ಆಗ್ರಹ ಮಾಡಿದ್ದಾರೆ.

ಅಶೋಕ್‌ ಹೇಳಿಕೆ ಬೆನ್ನಲ್ಲೇ ಮಹೇಶ್‌ ತಿಮರೋಡಿ ವಿರುದ್ಧ ಕ್ರಮ ಕೈಗೊಳ್ಳಲು ಗೃಹ ಸಚಿವ ಜಿ.ಪರಮೇಶ್ವರ್‌ ಸೂಚನೆ ನೀಡಿದ್ದಾರೆ.

ಹಾಗಾಗಿ ಯಾವುದೇ ಕ್ಷಣದಲ್ಲಿಯೂ ಮಹೇಶ್‌ ಶೆಟ್ಟಿ ತಿಮರೋಡಿ ಬಂಧನದ ಸಾಧ್ಯತೆಗಳಿದೆ ಎನ್ನಲಾಗಿದೆ. ಆಡಳಿತ ಶಾಸಕರೆಲ್ಲರೂ ಮಹೇಶ್‌ ಶೆಟ್ಟಿ ತಿಮರೋಡಿ ವಿರುದ್ಧ ಕ್ರಮ ತೆಗೆದುಕೊಳ್ಳಲು ಮುಖ್ಯಮಂತ್ರಿಗಳನ್ನು ಒತ್ತಾಯ ಮಾಡಿದ್ದಾರೆ.

ಗೃಹ ಸಚಿವರ ಸೂಚನೆ ಬೆನ್ನಲ್ಲೇ ಸ್ಥಳೀಯ ಪೊಲೀಸರು ಕಾನೂನು ಕ್ರಮ ಪ್ರಕ್ರಿಯೆಯನ್ನು ಆರಂಭಿಸುತ್ತಿದ್ದಾರೆ ಎಂದು ವರದಿಯಾಗಿದೆ.

Comments are closed.