ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಫೀಸ್ ಕಟ್ಟಲೇ ಬೇಕು,ಯಾವುದೇ ವಿನಾಯಿತಿ ಇಲ್ಲ-ಕ್ಯಾಮ್ಸ್
ಬೆಂಗಳೂರು: ಖಾಸಾಗಿ ಶಿಕ್ಷಣ ಸಂಸ್ಥೆಗಳಿಗೆ ವಿದ್ಯಾರ್ಥಿಗಳು ಫೀಸ್ ಕಟ್ಟಲೇ ಬೇಕು. ಈ ವಿಚಾರದಲ್ಲಿ ಯಾವುದೇ ವಿನಾಯಿತಿ ಇಲ್ಲ ಎಂದು ಕ್ಯಾಮ್ಸ್ ಖಡಕ್ ಸೂಚನೆ ನೀಡಿದೆ.
ಈ ಕುರಿತಂತೆ ಮಾಹಿತಿ ನೀಡಿರುವ ಕರ್ನಾಟಕ ಖಾಸಗಿ ಅನುದಾನ ರಹಿತ ಶಾಲಾ ಒಕ್ಕೂಟ (ಕ್ಯಾಮ್ಸ್ )ಪ್ರಧಾನ ಕಾರ್ಯದರ್ಶಿ ಶಶಿಕುಮಾರ್ ಅವರು,ಪೋಷಕರು ವಿದ್ಯಾರ್ಥಿಗಳ ಶಾಲಾ ಶುಲ್ಕ ಪಾವತಿ ಮಾಡಲೇಬೇಕು. ಕಳೆದ ವರ್ಷದ ಶುಲ್ಕ ಕೂಡ ಬಾಕಿಯಿದೆ. ಇದರಿಂದಾಗಿ ಶಾಲಾ ಸಿಬ್ಬಂದಿಗಳಿಗೂ ಸಂಬಳ ನೀಡಲಾಗದ ಸ್ಥಿತಿಯಲ್ಲಿದ್ದೇವೆ ಎಂದರು.
ಸರಕಾರ ಸುಮಾರು 700 ಕೋಟಿ ರೂಪಾಯಿ ಆರ್ ಟಿಇ ಹಣ ಬಾಕಿ ಉಳಿಸಿದೆ. ಕಳೆದ 6 ತಿಂಗಳಿಂದ ಹಣವೇ ಬಂದಿಲ್ಲ. ಶೇ.20ರಷ್ಟು ಮಕ್ಕಳು ಕೂಡ ದಾಖಲಾಗುತ್ತಿಲ್ಲ. ಎಲ್ಲಾ ಮಕ್ಕಳು ಕಡ್ಡಾಯವಾಗಿ ಶಾಲೆಗೆ ದಾಖಲಾಗುವಂತೆ ಸರ್ಕಾರ ನಿರ್ದೇಶನ ನೀಡಬೇಕು.
ಎಲ್ಲಾ ಪೋಷಕರಿಗೂ ಕೊರೊನಾದಿಂದಾಗಿ ಆರ್ಥಿಕ ಸಂಕಷ್ಟ ಎದುರಾಗಿದೆ ಎಂಬುದನ್ನು ನಾವು ಒಪ್ಪುವುದಿಲ್ಲ. ಪೋಷಕರಿಗೆ ತಮಗೆ ಅಗತ್ಯವಿರುವುದನ್ನು ಖರೀದಿಸಲು, ಬಿಲ್ ಗಳನ್ನು ಪಾವತಿಸಲು ಮಕ್ಕಳ ಶಾಲಾ ಶುಲ್ಕ ಪಾವತಿಸಲು ಹಣವಿಲ್ಲ ಎಂದರೆ ಹೇಗೆ? ನಾವು ಒಮ್ಮೆಲೇ ಶುಲ್ಕ ಪಾವತಿಸಿ ಎಂದು ಸೂಚಿಸುತ್ತಿಲ್ಲ. ಕಂತುಗಳಲ್ಲಿ ಶುಲ್ಕ ಪಾವತಿ ಮಾಡಲು ಅವಕಾಶ ಕೊಡುತ್ತಿದ್ದೇವೆ ಎಂದು ತೀಕ್ಷ್ಣವಾಗಿಯೇ ಹೇಳಿದ್ದಾರೆ.