ಈ ಮಹಿಳೆಯ ದೇಹದಲ್ಲಿ 216 ದಿನಗಳಿಂದ ಬೀಡುಬಿಟ್ಟಿದೆ ಕೊರೋನ

ದಕ್ಷಿಣ ಆಫ್ರಿಕಾದ ಎಚ್‌ಐವಿ ಸೋಂಕಿತ ಮಹಿಳೆಯೊಬ್ಬಳ ದೇಹದಲ್ಲಿ ಅತ್ಯಂತ ಅಪಾಯಕಾರಿಯಾದ ಕೊರೋನಾ ವೈರಸ್ ರೂಪಾಂತರಗಳನ್ನು ಸಂಶೋಧಕರು ಪತ್ತೆ ಹಚ್ಚಿದ್ದಾರೆ. ದುರ್ಬಲ ರೋಗನಿರೋಧಕತೆಯುಳ್ಳ ಈ ಮಹಿಳೆಯ ದೇಹದಲ್ಲಿ 216 ದಿನಗಳಿಂದ ಕೊರೋನಾ ವೈರಸ್ ಬೀಡುಬಿಟ್ಟಿದ್ದು, ಈವರೆಗೆ 32 ಬಾರಿ ರೂಪಾಂತರ ಹೊಂದಿದೆ ಎನ್ನಲಾಗಿದೆ.

ಈ ಮಹಿಳೆಗೆ 2006 ರಲ್ಲಿ ಎಚ್‌ಐವಿ ಪಾಸಿಟಿವ್ ಎಂದು ತಿಳಿದಿದ್ದು, ಕಾಲಕ್ರಮೇಣ ಅತಿ ದುರ್ಬಲ ರೋಗನಿರೋಧ ಶಕ್ತಿ ಹೊಂದಿದ್ದಳು. ಈಕೆಗೆ ಸೆಪ್ಟೆಂಬರ್ 2020ರಲ್ಲಿ ಕೊರೋನಾ ಸೋಂಕು ತಗುಲಿದ್ದು, ಅವಳ ಶರೀರದಲ್ಲಿ ರೂಪಾಂತರಗಳನ್ನು ಈ ವೈರಸ್ ನಿರಂತರವಾಗಿ ಹೊಂದುತ್ತಲೇ ಇತ್ತು. ಈವರೆಗೆ ವೈರಸ್ ಸ್ಟೈಕ್ ಪ್ರೋಟೀನ್‌ನಲ್ಲಿ 13 ಮ್ಯುಟೇಶನ್ ಗಳನ್ನು ಮತ್ತು 19 ಇತರ ಜೆನೆಟಿಕ್ ಶಿಫ್ಟ್ಗಳನ್ನು ತೋರಿಸಿದೆ ಎನ್ನಲಾಗಿದೆ.

ಅತ್ಯಂತ ದುರ್ಬಲ ರೋಗನಿರೋಧಕ ಶಕ್ತಿ ಹೊಂದಿರುವ ಈ ಮಹಿಳೆಯ ದೇಹದ ಮೇಲೆ ಸಂಶೋಧನೆ ನಡೆದಿದ್ದು,ಈ ಭಯಾನಕ ಅಂಶ ತಿಳಿದುಬಂದಿದೆ.

Leave A Reply

Your email address will not be published.