ತನಗೆ ಶೀತವಾಗಿದೆ ಎಂದು ಒಬ್ಬಳೇ ಆಸ್ಪತ್ರೆಗೆ ಹೋದ 3 ವರ್ಷದ ಬಾಲೆ

Share the Article

ಕೇವಲ ಮೂರು ವರ್ಷದ ಬಾಲೆಯೊಬ್ಬಳು ತನಗೆ ಶೀತವಾಗಿದೆ ಎಂದು ಅಪ್ಪ ಅಮ್ಮ ಕೆಲಸದಲ್ಲಿ ತೊಡಗಿದ್ದ ವೇಳೆ ಆಸ್ಪತ್ರೆಗೆ ತೆರಳಿ ಅಚ್ಚರಿ ಮೂಡಿಸಿದ್ದಾಳೆ.

ನಾಗಾಲ್ಯಾಂಡ್ ನ ಲಿಪಾವಿ ಎನ್ನುವ ಈ ಪುಟ್ಟ ಹುಡುಗಿಗೆ ಈಗ ಕೇವಲ ಮೂರು ವರ್ಷ. ಆಕೆ ಹೆತ್ತವರು ಭತ್ತದ ಗದ್ದೆಯಲ್ಲಿ ಗೇಯ್ಮೆ ಮಾಡಲೆಂದು ಮಗುವನ್ನು ಮನೆಯಲ್ಲೇ ಬಿಟ್ಟು ಹೋಗಿದ್ದಾರೆ.

ಹಾಗೆ ಮನೆಯವರು ಕೆಲಸಕ್ಕೆ ಹೋದ ವೇಳೆ ಶೀತವಾಗಿದೆ ಎಂದು ತಾನೇ ಸ್ವತಃ ವೈದ್ಯರ ಬಳಿ ನಡೆದು ಹೋಗಿದ್ದಾಳೆ ಲಿಪಾವೀ. ಆಕೆಯ ಮನೆಯಿಂದ ಸ್ವಲ್ಪ ಹತ್ತಿರ ಇರುವ ಆರೋಗ್ಯ ಹಾಗೂ ವೆಲ್ನೆಸ್ ಸೆಂಟರ್‌ನ ಗೆ ಮಿಸ್ ಲಿಪಾವಿ ಮಾಸ್ಕ್ ಹಾಕಿಕೊಂಡು ತೆರಳಿರುವುದು ಬೆರಗುಮೂಡಿಸುತ್ತಿದೆ.

ಅಲ್ಲಿ ವೈದ್ಯರು ಆಕೆಯನ್ನು ಕೂರಿಸಿಕೊಂಡು ಮಾತನಾಡುತ್ತಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಘಟನೆ ವೈರಲ್ ಆಗುತ್ತಿದ್ದಂತೆ,
ನಾಗಾಲ್ಯಾಂಡ್ ನ ರಾಜ್ಯಪಾಲ ಬೆಂಜಮಿನ್ ಯೆಪ್ಲೋಮಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಟ್ಯಾಗ್ ಮಾಡುವ ಮೂಲಕ ಟ್ವಿಟ್ಟರ್ ನಲ್ಲಿ ಫೋಟೋ ಹಂಚಿಕೊಂಡಿದ್ದಾರೆ. ಒಟ್ಟಾರೆ, ಚಿಕ್ಕ ಪ್ರಾಯದಲ್ಲೇ ಆರೋಗ್ಯ ಪ್ರಜ್ಞೆ ಮೂಡಿಸಿಕೊಂಡು ವೈದ್ಯರ ಬಳಿ ತೆರಳಿದ ಮಿಸ್ ಲಿಪಾವಿ ಈ ಕೊರೋನಾ ಪೀಡಿತ ಸಂದರ್ಭದಲ್ಲಿ ಎಲ್ಲರಿಗೂ ಮಾದರಿಯಾಗಿದ್ದಾಳೆ.

Leave A Reply

Your email address will not be published.