ಸುಳ್ಯ: ಲತೀಶ್ ಗುಂಡ್ಯ ವಿರುದ್ಧ ಸುಳ್ಳು ಕೇಸು, ಅಂಬೇಡ್ಕರ್ ಆಪತ್ಭಾಂದವ ಟ್ರಸ್ಟ್ ಅಧ್ಯಕ್ಷ ಹೇಮಂತ್ ಅರ್ಲಪದವು ಖಂಡನೆ

ಲತೀಶ್ ಗುಂಡ್ಯ ಇವರ ಮೇಲೆ ಸುಳ್ಳು ಅಪವಾದನೆಗಳನ್ನು ಹೊರಿಸಿದ್ದಾರೆ. ದಲಿತ ಹೋರಾಟಗಾರ ಬೈರ ಸಮುದಾಯಕ್ಕೆ ಸೇರಿದ ಒಬ್ಬ ಹಿಂದೂ ಮುಖಂಡನ ಮೇಲೆ ಆದ ಆರೋಪವನ್ನು ಅಂಬೇಡ್ಕರ್ ಆಪತ್ಭಾಂದವ ಟ್ರಸ್ಟ್ ಪುತ್ತೂರು ತಾಲೂಕು ಅಧ್ಯಕ್ಷರಾದ ಹೇಮಂತ್ ಅರ್ಲಪದವು ತೀವ್ರವಾಗಿ ಖಂಡಿಸಿದ್ದಾರೆ‌.

ದಲಿತ ಮುಖಂಡ ಸುಂದರ್ ಪಾಟಾಜೆ ಅವರು ಸುಳ್ಯ ಆಂಬುಲೆನ್ಸ್ ಚಾಲಕನ ಪಿತೂರಿಯಿಂದ ಕೊಲೆ ಬೆದರಿಕೆ, ಜಾತಿಯೊಳಗೆ ವೈಷಮ್ಯ ಬರುವಂತಹ ನಿರಾಧಾರವಾದ ಆರೋಪಗಳನ್ನು ಹೊರಿಸಿ ಸುಳ್ಯ ಠಾಣೆಗೆ ದೂರು ನೀಡಿರುವುದು ಸಮಂಜಸವಲ್ಲ.

ಇಂದೊಂದು ಸತ್ಯಕ್ಕೆ ದೂರವಾದ ವಿಚಾರ.ಸುಳ್ಳು, ಆರೋಪ ಹೊರಿಸಿ, ಲತೀಶ್ ಗುಂಡ್ಯರವರ ಸಾಮಾಜಿಕ ಜೀವನಕ್ಕೆ ಧಕ್ಕೆ ಬರುವಂತೆ ಮಾಡಿರುವುದು ಸರಿಯಲ್ಲ.

ಈ ಬಗ್ಗೆ ಸೂಕ್ತ ತನಿಖೆಯನ್ನು ನಡೆಸಿ ಲತೀಶ್ ಗುಂಡ್ಯ ಇವರಿಗೆ ನ್ಯಾಯ ದೊರಕಿಸಿ ಕೊಡಬೇಕು. ತಪ್ಪಿದ್ದಲ್ಲಿ ನಾವು ಮುಂದಿನ ದಿನಗಳಲ್ಲಿ ಬೀದಿಗಿಳಿದು ಹೋರಾಟದ ಹಾದಿಯನ್ನು ಹಿಡಿಯ ಬೇಕಾದ ಅನಿವಾರ್ಯತೆ ಎದುರಾಗಬಹುದು ಎಂದು ಎಚ್ಚರಿಸಿದರು.

Leave A Reply

Your email address will not be published.