ನನ್ನ ಇಷ್ಟದ 12th B ಹುಡುಗಿಯನ್ನು ಸೀರೆಯಲ್ಲಿ ನೋಡಬೇಕಿದೆ, ಪರ್ಮಿಷನ್ ಕೊಡಿ ಪ್ಲೀಸ್ – ಎಂದು ನರೇಂದ್ರ ಮೋದಿಗೆ ಪತ್ರ ಬರೆದ ಪ್ರೀತಿಯ ಹುಡುಗ
ಕೊರೊನಾ ಬಹುತೇಕ ಎಲ್ಲಾ ಪರೀಕ್ಷೆಗಳನ್ನು ಕೊಂದುಹಾಕಿದೆ. ಪರೀಕ್ಷೆಗಳು ರದ್ದಾದ ಕಾರಣ ಸಾಧಾರಣ ಓದುವ ವಿದ್ಯಾರ್ಥಿಗಳಿಗೆ ಖುಷಿಯೋ ಖುಷಿ. ಆದರೆ ಕೆಲವು 10 ಮತ್ತು 12ನೇ ತರಗತಿಯ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಬಹಳ ಬೇಸರ. ಇದಕ್ಕೆ ಕಾರಣ ಪರೀಕ್ಷೆ ಕ್ಯಾನ್ಸಲ್ ಆಗಿದೆ ಅಥವಾ ಕ್ಯಾನ್ಸಲ್ ಮಾಡುವ ನಿರ್ಧಾರ ತೆಗೆದುಕೊಳ್ಳಬಹುದು ಎಂಬ ಕಾರಣಕ್ಕೆ ಅಲ್ಲ. ಬದಲಿಗೆ ಶಾಲೆ- ಕಾಲೇಜುಗಳಿಂದ ಅಂತಿಮವಾಗಿ ಸಿಗುವ ಫೇರ್‌ವೆಲ್ ಫಂಕ್ಷನ್ ಮಿಸ್ ಆಯ್ತಲ್ಲಾ ಎಂಬ ನೋವು.
ಆ ದಿನ ತನ್ನ ಇಷ್ಟದ ಹುಡುಗನ ಹತ್ತಿರ ನಿಂತು ಗಲಗಲ ಊರಗಲ ನಗುತ್ತಾ ಸೆಲ್ಫಿ ತೆಗೆದುಕೊಳ್ಳುವುದು ಮಿಸ್ ಆಗಿ ಹೋಯಿತಲ್ಲ ಎಂಬ ದುಃಖ ಹುಡುಗಿಗೆ.
ಆದರೆ, ಅತ್ತ ಸೀರೆಯುಟ್ಟು ಸರಬರನೆ ಓಡಾಡುವ ಹುಡುಗಿಯನ್ನು ಸೀರೆಯಲ್ಲಿ ನೋಡಿ ಕಣ್ತುಂಬಿಕೊಂಡು ಆಕೆಯ ಭುಜಕ್ಕೆ ಭುಜ ಕೊಟ್ಟು ನಿಂತು ಸಂಭ್ರಮಿಸುವ ಬಯಕೆ ಹುಡುಗನದು.
ಹುಡುಗಿಯರು ಮನಸ್ಸಲ್ಲಿ ಏನೇ ಇದ್ದರೂ ಮುಚ್ಚಿಟ್ಟುಕೊಂಡು ಏನೂ ಆಗದವರಂತೆ, ನಿರ್ಭಾವುಕರಾಗಿ ನಡೆದು ಬಿಡುತ್ತಾರೆ. ಆದರೆ ಹುಡುಗರದು ಬಿಚ್ಚು ಮನಸ್ಸು. ತನಗನಿಸಿದ್ದನ್ನು ಎಕ್ಸ್ಪ್ರೆಸ್ ಮಾಡುತ್ತಾರೆ. ಹಾಗೆಯೇ ಈ ಹುಡುಗ ಪರೀಕ್ಷೆಗಳು ಕ್ಯಾನ್ಸಲ್ ಆದುದಕ್ಕೆ ದುಃಖಿಸಲಿಲ್ಲ. ಬದಲಿಗೆ, ಅಕಾಡೆಮಿಕ್ ಇಯರ್ ಮುಗಿದು, ಫೇರ್ವೆಲ್ ಪಾರ್ಟಿಯ ದಿನ ತನ್ನ ಇಷ್ಟದ ಹುಡುಗಿಯನ್ನು ಸೀರೆಯಲ್ಲಿ ನೋಡುವ ಅವಕಾಶ ಮಿಸ್ ಆಯಿತಲ್ಲ ಎಂಬ ನೋವಿನಿಂದ ಆತ ಖುದ್ದಾಗಿ ದೇಶದ ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆಯುತ್ತಾನೆ.
ಆದ್ದರಿಂದ ಇದೇ ರೀತಿ ಬೇಸರ ಪಟ್ಟುಕೊಂಡಿರುವ ವಿದ್ಯಾರ್ಥಿಯೊಬ್ಬ ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ
ಬರೆದಿದ್ದಾನೆ. ದೇಶದಲ್ಲಿ ಕೇಂದ್ರೀಯ ಪ್ರೌಢಶಿಕ್ಷಣ ಮಂಡಳಿ (ಸಿಬಿಎಸ್‌ಇ) 12ನೇ ತರಗತಿ ಪರೀಕ್ಷೆಗಳನ್ನು ಕೇಂದ್ರ ಸರ್ಕಾರ ರದ್ದು ಮಾಡಿದೆ. ಈ ಕುರಿತು ಪ್ರಧಾನಿ ವಿಷಯವನ್ನು ತಿಳಿಸುತ್ತಿದ್ದಂತೆ, 12ನೇ ತರಗತಿ ವಿದ್ಯಾರ್ಥಿಯೊಬ್ಬ ಪರೀಕ್ಷೆ ಕ್ಯಾನ್ಸಲ್ ಆದ್ರೂ ಪರವಾಗಿಲ್ಲ. ತನ್ನ ಕ್ಲಾಸ್‌ಮೇಟ್ ನೇಹಾಳನ್ನು ಸೀರೆಯಲ್ಲಿ ನೋಡಬೇಕು ಎಂಬ ಆಸೆಯಿದೆ. ಅದಕ್ಕೆ ಫೇರ್‌ವೆಲ್‌ಗೆ ಅವಕಾಶ ಕೊಡಿ ಎಂದು ಮನವಿ ಮಾಡಿಕೊಂಡಿದ್ದಾನೆ!
ಕುಕಿ ಅಗರ್‌ವಾಲ್ ಎಂಬ ಈ ವಿದ್ಯಾರ್ಥಿಯ ಟ್ವಿಟರ್ ಮತ್ತು ಇನ್ಸ್ಟ ದ ಪತ್ರ ಸಾಮಾಜಿಕ ಜಾಲತಾಣದಲ್ಲಿ ಸಕತ್ ವೈರಲ್ ಆಗಿದ್ದು, ನೋಡಿದರನ್ನು ನಗೆಗಡಲಿನಲ್ಲಿ ತೇಲಿಸುತ್ತಿದೆ. ಆತನ ಪತ್ರ ವೈರಲ್ ಆಗುತ್ತಿದ್ದಂತೆ ಅತ್ತ ಆತನ ಇಷ್ಟದ 12th B ಹುಡುಗಿಗೆ ಆಕೆಯ ಗೆಳೆಯ ಗೆಳತಿಯರು ಮೆಸೇಜ್ ಮಾಡಿ ರೇಗಿಸುತ್ತಿದ್ದಾರಂತೆ.
ಅದಕ್ಕೆ ಆಕೆ ಕುಕಿ ಅಗರ್ವಾಲ್ ಗೆ ವಾಟ್ಸಾಪ್ ಮಾಡಿ,” ನನ್ನನ್ನು ಸೀರೆಯಲ್ಲಿ ನೋಡಬೇಕೆಂದಿದ್ದರೆ ನನಗೆ ಹೇಳಬಹುದಿತ್ತಲ್ಲ. ಈಗ ನೋಡು ಎಲ್ಲರೂ ನನಗೆ ಮೆಸೇಜು ಮಾಡುತ್ತಿದ್ದಾರೆ” ಎಂದಿದ್ದಾಳೆ. ಅದಕ್ಕೆ ಆ ಪ್ರೀತಿಯ ಹುಡುಗ, ” ನಾನು ಬರೆದ ಪತ್ರ ಈ ರೀತಿ ಆಗುತ್ತೆ ಅಂತ ನನಗೆ ಗೊತ್ತಿತ್ತು ?” ಎಂದಿದ್ದಾನೆ. ಕೊನೆಗೆ ಆತ ತನ್ನ ಇನ್ಸ್ಟಾಗ್ರಾಮ್ ನಲ್ಲಿ ” ನೇಹಾ ಅಂದ್ರೆ ಬರೀ ಹೆಸರಲ್ಲ. ಅದೊಂದು ಭಾವನೆ” ಎಂದು ಕವಿಮನಸ್ಸಿನಿಂದ ಬರೆದಿದ್ದಾನೆ. ಲಾಕ್ ಡೌನ್ ಸಂದರ್ಭ ಹಾಗೇ ಈ ಚೋಟಿಸೆ ಪ್ಯಾರ್ ಜನರ ದುಗುಡದ ಮುಖವನ್ನು ಮೆತ್ತಗೆ ಅರಳಿಸಿದೆ.