ವೃದ್ಧರ ಅನುಪಾತ ಇಳಿಸಲು ಹೊಸ ನೀತಿ ಪ್ರಕಟಿಸಿದ ಚೀನಾ | ದಂಪತಿಗಳಿಗೆ 3 ಮಕ್ಕಳು ಹೊಂದಲು ಗ್ರೀನ್ ಸಿಗ್ನಲ್

ಜಗತ್ತಿನ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಚೀನಾ ತನ್ನ ಕುಟುಂಬ ಯೋಜನೆಯನ್ನ ಸಡಿಲಗೊಳಿದೆ. ಇನ್ಮುಂದೆ ಮೂರು ಮಕ್ಕಳನ್ನು ಹೊಂದಲು ಚೀನಾ ಸರ್ಕಾರ ಗ್ರೀನ್ ಸಿಗ್ನಲ್ ನೀಡಿದೆ.

ಇಲ್ಲಿಯತನಕ ಜನಸಂಖ್ಯೆ ನಿಯಂತ್ರಣಕ್ಕಾಗಿ ಚೀನಾದಲ್ಲಿ ಎರಡು ಮಕ್ಕಳನ್ನ ಮಾತ್ರ ಹೊಂದಲು ಅವಕಾಶವಿತ್ತು. ದಶಕಗಳ ಬಳಿಕ ತನ್ನ ನಿರ್ಧಾರವನ್ನ ಸಡಿಲಗೊಳಿಸಿ ಮಹತ್ವದ ಆದೇಶವನ್ನು ಹೊರಡಿಸಿದೆ.

ಯಾಕೆ ಈ ನಿರ್ಧಾರ ಗೊತ್ತಾ ?!

ಚೀನಾ ಜನಸಂಖ್ಯೆಯಲ್ಲಿ ವೃದ್ಯಾಪ್ಯ ಹಂತಕ್ಕೆ ತೆರಳುತ್ತಿರುವ ಸಂಖ್ಯೆ ವೇಗವಾಗಿ ಏರಿಕೆಯಾಗುತ್ತಿದೆ. ಜನನ ಪ್ರಮಾಣ ನಿಧಾನಗತಿಯಲ್ಲಿದೆ. ಜನನ ಪ್ರಮಾಣ ಮಂದಗತಿಯ ಪ್ರಮಾಣಕ್ಕೆ ಎರಡು ಮಕ್ಕಳ ನೀತಿಯೇ ಕಾರಣವಾಗಿತ್ತು. ಹಾಗಾಗಿ ಚೀನಾ ಮುದುಕರ ದೇಶ ಆಗಬಾರದು ಎಂಬ ಕಾರಣಕ್ಕಾಗಿ ಭವಿಷ್ಯದ ಚಿಂತನೆಯಲ್ಲಿರುವ ಚೀನಾ ಈ ಮಹತ್ವದ ಹೆಜ್ಜೆಯನ್ನ ಇರಿಸಿದೆ.

ಈ ಹೊಸ ನೀತಿಗೆ ಚೀನಾ ರಾಷ್ಟ್ರಪತಿ ಶಿ ಜಿನ್‍ಪಿಂಗ್ ಸಹ ಅನುಮತಿ ನೀಡಿದ್ದಾರೆ. ದಶಕಗಳಿಂದ ಪಾಲಿಸಿಕೊಂಡ ಬಂದ ನಿಯಮಕ್ಕೆ ಬ್ರೇಕ್ ಬಿದ್ದಿದೆ. ಇನ್ನು ಮುಂದೆ ಚೀನೀಯರು 3 ಮಕ್ಕಳನ್ನು ಹುಟ್ಟಿಸಬಹುದು.

ವಿಶ್ವದಲ್ಲಿ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶ ಚೀನಾ. ನಂತರದ ಸ್ಥಾನದಲ್ಲಿ ಭಾರತವಿದೆ. 1970ರ ದಶಕದಲ್ಲಿ ಜನಸಂಖ್ಯೆ ನಿಯಂತ್ರಣಕ್ಕಾಗಿ ಚೀನಾ ಸರ್ಕಾರ ಕಠಿಣ ನಿಯಮಗಳನ್ನು ಜಾರಿಗೆ ತರಲು ಆರಂಭಿಸಿತು. ಆರಂಭದಲ್ಲಿ ದಂಪತಿ ಕೇವಲ ಒಂದು ಮಗು ಪಡೆಯಲು ಮಾತ್ರ ಅನುಮತಿ ನೀಡಲಾಗಿತ್ತು. ಈ ನಿಯಮ ಚೀನಾದಲ್ಲಿ ಪಾಲನೆ ಆಗ್ತಿದ್ದಂತೆ ಜನನ ಪ್ರಮಾಣ ತುಂಬಾ ಇಳಿಕೆ ಕಂಡಿತು. ಆಗ 2009 ರಲ್ಲಿ ಚೀನಾದ ಒನ್ ಚೈಲ್ಡ್ ಪಾಲಿಸಿಯಲ್ಲಿ ಬದಲಾವಣೆ ತಂದಿತು ಚೀನಾ ಸರ್ಕಾರ.


ಅದರ ಪ್ರಕಾರ ದಂಪತಿ ಎರಡು ಮಕ್ಕಳು ಹೊಂದಲು ಷರತ್ತು ಬದ್ಧ ಅನುಮತಿ ನೀಡಲಾಯ್ತು. ಯಾರು ತಮ್ಮ ತಂದೆ-ತಾಯಿಗೆ ಒಂದೇ ಸಂತಾನ ಆಗಿರುತ್ತಾರೋ ಅವರು ಮಾತ್ರ ಎರಡು ಮಕ್ಕಳನ್ನು ಪಡೆಯಬಹುದು ಎಂದು ತನ್ನ ಬರ್ತ್ ಪಾಲಿಸಿಯಲ್ಲಿ ಸೂಚಿಸಲಾಗಿತ್ತು. 2014 ರವರೆಗೂ ಚೀನಾದಲ್ಲಿ ಈ ನೀತಿಯನ್ನ ಪಾಲಿಸಿಕೊಂಡು ಬರಲಾಗಿತ್ತು.

ದೇಶದಲ್ಲಿ ವೃದ್ಧರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆ ಇದೀಗ ಮೂರು ಮಕ್ಕಳು ಪಡೆಯಲು ಅನುಮತಿ ನೀಡಲಾಗಿದೆ. ದೇಶದಲ್ಲಿನ ವೃದ್ದ ಜನಸಂಖ್ಯೆಯ ಅನುಪಾತವನ್ನು ಕಡಿಮೆ ಮಾಡುವ ಜವಾಬ್ದಾರಿಯನ್ನು ದಂಪತಿಗಳಿಗೆ ನೀಡಲಾಗಿದೆ. ಅವರು ಆ ಜವಾಬ್ದಾರಿಯಲ್ಲಿ ಸೋಲು ಕಾಣಲಾರರು !

Leave A Reply

Your email address will not be published.