Dharmasthala : ಮೊದಲ ಬಾರಿಗೆ ‘ಮಾಸ್ಕ್ ಮ್ಯಾನ್’ ಇಂಟರ್ವ್ಯೂ – ಏನೆಲ್ಲಾ ಹೇಳಿದ ಗೊತ್ತಾ?

Share the Article

Dharmasthala : ಧರ್ಮಸ್ಥಳದ ನಿಗೂಢ ಸಾವಿನ ಪ್ರಕರಣ (Dharmasthala Burials Case) – ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತಿರುವುದಾಗಿ ಅನಾಮಿಕ ದೂರು ನೀಡಿರುವ ಪ್ರಕರಣ ತನಿಖೆ ಅಂತಿಮ ಘಟ್ಟಕ್ಕೆ ಬಂದು ನಿಂತಿದೆ. ಇದೀಗ ಅನಾಮಿಕ ದೂರುದಾರನ ಹೇಳಿಕೆ ಆಧರಿಸಿ ಎಸ್.ಐ.ಟಿ (SIT) ತಂಡ ಹಲವು ಪಾಯಿಂಟ್‌ಗಳಲ್ಲಿ ಉತ್ಖನನ ಮಾಡಿ ಪ್ರಕರಣದ ವರದಿಯನ್ನು ಗೃಹಸಚಿವರಿಗೆ ಸಲ್ಲಿಸಿದೆ. ಆದರೆ ಇದೀಗ ಮಾಸ್ಕ್‌ಮ್ಯಾನ್‌ (Maskman) ಸುದ್ದಿ ಸಂಸ್ಥೆ ಇಂಡಿಯಾ ಟುಡೆ ಪತ್ರಿಕೆಯ ಹಲವು ಪ್ರಶ್ನೆಗಳಿಗೆ ಉತ್ತರಿಸಿದ್ದಾನೆ.

ಹೌದು, ಸುದ್ದಿ ಸಂಸ್ಥೆಗೆ ಸಂದರ್ಶನ ನೀಡಿದ ಮಾಸ್ಕ್‌ಮ್ಯಾನ್‌

ನನಗೆ ಬಹಳ ಸಮಯದಿಂದ ಪಾಪಪ್ರಜ್ಞೆ ಕಾಡುತ್ತಿತ್ತು, ನಾನು ಹೂತು ಹಾಕಿದ್ದ ತಲೆಬರುಡೆಗಳು ಕನಸ್ಸಿನಲ್ಲಿ ನನಗೆ ಕಾಡಲು ಆರಂಭಿಸಿದ್ದವು, ನಾನು ಹೂಳಿದ್ದ ಶವಗಳಿಗೆ ಸತ್ತ ನಂತರ ಯಾವುದೇ ಕರ್ಮ ಆಗಿರಲಿಲ್ಲ. ಆ ಹೆಣಗಳನ್ನ ತೆಗೆದು ಸರಿಯಾಗಿ ಕರ್ಮ ಪೂಜೆಗಳನ್ನ ಮಾಡಿದರೆ ನನಗೆ ಪುಣ್ಯ ಸಿಗಬಹುದು ಹಾಗೂ ನೆಮ್ಮದಿ ಸಿಗುತ್ತದೆ. ಹಾಗಾಗಿ ಪೂಜೆ ಮಾಡಿಸುವ ಉದ್ದೇಶದಿಂದ ನಾನು ಬಂದಿದ್ದೇನೆ ಎಂದು ಹೇಳಿದ್ದಾನೆ. ಇದರೊಂದಿಗೆ ಇನ್ನು ಹಲವು ಪ್ರಶ್ನೆಗಳಿಗೆ ಆತ ಉತ್ತರಿಸಿದ್ದು, ಏನೆಲ್ಲಾ ಹೇಳಿದ್ದಾನೆ ನೋಡೋಣ ಬನ್ನಿ.

ಹೆಣ ಹೂತಿದ್ದು ನೀವು ಒಬ್ಬರೇ? ಯಾರಾದರೂ ನೋಡಿದ್ದಾರೆಯೇ?

ಹೆಣಗಳನ್ನು ತಾನೊಬ್ಬನೇ ಸಮಾಧಿ ಮಾಡುತ್ತಿರಲಿಲ್ಲ, ತನ್ನ ಜತೆಗೆ ನಾಲ್ಕು ಜನರ ತಂಡವಿತ್ತು ಎಂದು ಹೇಳಿದ್ದಾನೆ. “ಅಲ್ಲಿ ಯಾವುದೇ ಸ್ಮಶಾನವಿರಲಿಲ್ಲ. ನಾವು ಕಾಡುಗಳಲ್ಲಿ, ಹಳೇಯ ರಸ್ತೆಗಳಲ್ಲಿ, ನದಿ ದಂಡೆಯ ಪಕ್ಕದಲ್ಲಿ ಹೂತು ಹಾಕಿದ್ದೇವೆ. ಬಾಹುಬಲಿ ಬೆಟ್ಟದಲ್ಲಿ ನಾವು ಮಹಿಳೆಯೊಬ್ಬರನ್ನು ಹೂತು ಹಾಕಿದ್ದೇವೆ. ನೇತ್ರಾವತಿ ಸ್ನಾನ ಘಟ್ಟದಲ್ಲಿ ಸುಮಾರು 70 ಶವಗಳನ್ನು ಹೂತಿದ್ದೇವೆ. ಸ್ಥಳೀಯರು ಕೆಲವೊಮ್ಮೆ ಇವರು ಶವಗಳನ್ನು ಹೂಳುವುದನ್ನು ನೋಡಿದ್ದಾರೆ ಆದರೆ ಎಂದಿಗೂ ಮಧ್ಯಪ್ರವೇಶಿಸಲಿಲ್ಲ ಎಂದು ಆತ ಹೇಳಿದ್ದಾನೆ. “ಜನರು ನಮ್ಮನ್ನು ನೋಡಿದರು, ಆದರೆ ಅವರಿಗೆ ಯಾವುದೇ ತೊಂದರೆ ಇರಲಿಲ್ಲ. ನಮಗೆ ಆದೇಶಗಳು ಬರುತ್ತಿದ್ದವು, ನಾವು ಶವಗಳನ್ನು ಹೂಳಿದೆವು. ಅದು ನಮ್ಮ ಕೆಲಸವಾಗಿತ್ತು.

ಹೆಣದ ಮೇಲೆ ಏನೆಲ್ಲಾ ಇರುತ್ತಿತ್ತು?

ಹೂತಿದ್ದ ಶವಗಳ ಸಾವಿಗೆ ನಿಖರ ಕಾರಣ ಹೇಳಲು ಸಾಧ್ಯವಾಗದೇ ಹೋದರೂ, ಹೆಚ್ಚಿನ ಶವಗಳ ಮೇಲೆ ಹಿಂಸೆ ಮತ್ತು ಲೈಂಗಿಕ ದೌರ್ಜನ್ಯದ ಕುರುಹುಗಳಿತ್ತು. ಆದರೆ ಬಲಿಪಶುಗಳು ಲೈಂಗಿಕ ದೌರ್ಜನ್ಯಕ್ಕೊಳಗಾಗಿದ್ದಾರೆಯೇ ಎಂಬುದನ್ನು ವೈದ್ಯಕೀಯ ತಜ್ಞರು ಮಾತ್ರ ಪರಿಶೀಲಿಸಬಹುದು. ಮಕ್ಕಳಿಂದ ಹಿಡಿದು ವೃದ್ಧರವರೆಗೆ ಎಲ್ಲಾ ವಯಸ್ಸಿನ ದೇಹಗಳು ಇದ್ದವು. ಅವರಲ್ಲಿ ಹೆಚ್ಚಿನವರು ಮಹಿಳೆಯವರು. ಅವರು ಹೂಳಿದ್ದಾರೆಂದು ಹೇಳಿಕೊಳ್ಳುವ 100 ದೇಹಗಳಲ್ಲಿ ಸುಮಾರು 90 ಶವಗಳು ಮಹಿಳೆಯರಿದ್ದು ಇದ್ದವು.

ಹೆಣಗಳು ಸಿಗದಿರಲು ಕಾರಣ?

ಅರಣ್ಯ ಪ್ರದೇಶದಲ್ಲಿ ಹೆಣ ಹೂಳೂತ್ತಿದ್ದೆವು

ಧರ್ಮಸ್ಥಳದ ಆಗಿನ ಪರಿಸ್ಥಿತಿ ಬೇರೆ ಇತ್ತು. ಈಗ ಬಹಳ ಬದಲಾಗಿದೆ. ಆಗ ಕಾಡು ಬಹಳ ಕಡಿಮೆ ಇತ್ತು. ಆದರೆ ಈಗ ಜಾಸ್ತಿ ಇದೆ. ನಾನು ನನಗೆ ಗೊತ್ತಿರುವ ಹಾಗೆ ಸರಿಯಾದ ಜಾಗಗಳನ್ನ ಕೆಲ ಪ್ರದೇಶಗಳಲ್ಲಿ ಗುರುತು ಮಾಡಿದ್ದೆ. ಆದರೆ ಕೆಲ ಬದಲಾವಣೆ ಆಗಿರುವುದರಿಂದ ಅಲ್ಲಿ ಹೆಣಗಳು ಸಿಕ್ಕಿಲ್ಲ. ನಾನು ಅದೇ ಜಾಗದಲ್ಲಿ ಹೆಣ ಹೂಳಿದ್ದೆ, ಆದರೆ ಅಲ್ಲಿ ಈಗ ಸಿಗಲಿಲ್ಲ ಎಂದರೆ ನಾನು ಏನು ಮಾಡಲಿ. ಮತ್ತೊಂದು ಮುಖ್ಯವಾದ ವಿಚಾರ ಎಂದರೆ ನನಗೆ ಗ್ರಾಮ ಪಂಚಾಯಿತಿ ಅವರು ಶವ ಹೂಳಲು ಹೇಳಿಯೇ ಇಲ್ಲ. ಮಾಹಿತಿ ಕಚೇರಿಯವರು ಈ ಕೆಲಸ ಮಾಡಲು ಹೇಳುತ್ತಿದ್ದರು. ಹಾಗಾಗಿ ನಾವು ಆ ಕೆಲಸ ಮಾಡಿದ್ದೇವೆ. ನಾನು ಬಹುತೇಕ ಅರಣ್ಯ ಪ್ರದೇಶದಲ್ಲಿ ಮಾತ್ರ ಹೆಣಗಳನ್ನ ಹೂಳಿದ್ದೇನೆ. ಸ್ಮಶಾನ ಜಾಗದಲ್ಲಿ ಹೆಣ ಹೂಳಿಲ್ಲ. ನೇತ್ರಾವತಿ ಹೊಳೆ ಬದಿಯೇ ಹೂತು ಹಾಕಿದ್ದೇವು.

ನಾನು SIT ಯನ್ನು ನಂಬುತ್ತೇನೆ, ಆದರೆ SIT ನನ್ನನ್ನು ನಂಬುತ್ತಿಲ್ಲ:

“ನಾನು ವಿಶೇಷ ತನಿಖಾ ತಂಡವನ್ನು ನಂಬುತ್ತೇನೆ, ಆದರೆ ಅವರು ನನ್ನನ್ನು ನಂಬುವಂತೆ ಕಾಣುತ್ತಿಲ್ಲ. ನಾನು ನನಗೆ ನೆನಪಿರುವಂತೆ ಸಮಾಧಿ ಮಾಡಲಾದ ಜಾಗಗಳನ್ನು ತೋರಿಸುತ್ತಿದ್ದೇನೆ, ಆದರೆ ಇಲ್ಲಿ ಇಷ್ಟು ವರ್ಷಗಳಲ್ಲಿ ಜಾಗ ಬದಲಾಗಿದೆ. ನಾನು ನನ್ನಿಂದ ಆಗುವಷ್ಟು ಪ್ರಯತ್ನ ಪಡುತ್ತಿದ್ದೇನೆ. ಅಲ್ಲದೆ ಜೆಸಿಬಿ ಇನ್ನಷ್ಟು ಅಗಲ ಅಗೆದು ಅವಶೇಷ ಮರುಪಡೆಯಲು ಪ್ರಯತ್ನಿಸಬೇಕು.ಅಂದು ನನ್ನೊಂದಿಗೆ ಇದ್ದ ಉಳಿದವರನ್ನೂ ಎಸ್‌ಐಟಿ ಕರೆಯಲಿ, ಎಲ್ಲರೂ ಸತ್ಯ ಹೇಳಲಿ. ಒಂದು ವೇಳೆ ಎಲ್ಲರನ್ನೂ ಕರೆದರೆ ಈ ಪ್ರಕ್ರಿಯೆ ಸುಲಭವಾಗಿ ಮತ್ತು ವೇಗವಾಗಿ ನಡೆಯುತ್ತದೆ.

ಕನಸಿನಲ್ಲಿ ಕಾಣುತ್ತಿತ್ತು ಅಸ್ಥಿಪಂಜರ

ಎರಡು ದಶಕಗಳ ನಂತರ ಧರ್ಮಸ್ಥಳಕ್ಕೆ ಮರಳಿದ್ದೇನೆ ಎಂದು ಆತ ಹೇಳಿದ್ದಾನೆ. “ನನಗೆ ಅಸ್ಥಿಪಂಜರದ ಅವಶೇಷಗಳ ಬಗ್ಗೆ ಕನಸು ಬೀಳುತ್ತಿತ್ತು. ನನಗೆ ತಪ್ಪಿತಸ್ಥ ಭಾವನೆ ಕಾಡುತ್ತಿತ್ತು, ಆದ್ದರಿಂದ ನಾನು ಧರ್ಮಸ್ಥಳಕ್ಕೆ ಹಿಂತಿರುಗಿದೆ” ಎಂದು ಅವರು ಹೇಳಿದ.

Darshan: ಪವಿತ್ರಾ ಗೌಡ ಬಳಿಕ ದರ್ಶನ್ ಬಂಧನ, ವಿಜಯಲಕ್ಷ್ಮೀ ಮನೆಯಲ್ಲೇ ಅರೆಸ್ಟ್!

Comments are closed.