Dharmasthala : ಧರ್ಮಸ್ಥಳ ಪ್ರಕರಣ- SIT ತಂಡದ ದಿನದ ಖರ್ಚು ಎಷ್ಟು ಗೊತ್ತಾ?

Dharmasthala : ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ಐಟಿ ತಂಡವು ಗುರುತಿಸಲಾದ ಸ್ಥಳಗಳನ್ನು ಅಗೆದು ಶೋಧ ನಡೆಸುತ್ತಿದೆ. ಕಳೆದ 13 ದಿನಗಳಿಂದ ಗ್ರಾಮದಲ್ಲಿ ನಡೆಯುತ್ತಿರುವ ಈ ಕಾರ್ಯಾಚರಣೆಯ ದೈನಂದಿನ ವೆಚ್ಚಗಳು ಸಾರ್ವಜನಿಕರಲ್ಲಿ ಕುತೂಹಲ ಮೂಡಿಸುತ್ತಿವೆ. ಹಾಗಾದ್ರೆ ಈ ಪ್ರಕರಣದ ತನಿಖೆಯಲ್ಲಿ ಎಸ್ಐಟಿ ತಂಡದ ದಿನದ ಖರ್ಚು ಎಷ್ಟಾಗುತ್ತೆ ಗೊತ್ತಾ? ಇಲ್ಲಿದೆ ನೋಡಿ ಡೀಟೇಲ್ಸ್

ಕಳೆದ 13 ದಿನಗಳಿಂದ ಧರ್ಮಸ್ಥಳ ಗ್ರಾಮದಲ್ಲಿ ಕಾರ್ಯಾಚರಣೆ ನಡೆಸಿರುವ ಎಸ್ಐಟಿ ತಂಡದ ದಿನದ ಖರ್ಚಿನ ಬಗ್ಗೆ ಕೇಳಿದರೆ ನಿಜಕ್ಕೂ ಶಾಕ್ ಆಗುತ್ತೀರಾ. ಎಸ್ಐಟಿ ತನಿಖೆಗೆ ನಿತ್ಯ ಅಂದಾಜು 4 ರಿಂದ 5 ಲಕ್ಷ ರೂ. ಖರ್ಚಾಗುತ್ತಿದೆ.
ಅಧಿಕಾರಿಗಳ ಊಟ, ತಿಂಡಿ ಮತ್ತು ವಿಶ್ರಾಂತಿಗಾಗಿ ಲಾಡ್ಜ್ ವೆಚ್ಚ ದಿನಕ್ಕೆ 10 ಸಾವಿರ ರೂ., ಗುಂಡಿ ಅಗೆಯುವವರಿಗೆ ಒಬ್ಬೊಬ್ಬರಿಗೂ ದಿನಗೂಲಿ 2 ಸಾವಿರ ರೂ. ಒಟ್ಟು 15 ಜನರಿದ್ದು ದಿನಕ್ಕೆ 30 ಸಾವಿರ ರೂ. ಪೊಲೀಸ್, ವೈದ್ಯರ ಓಡಾಟಕ್ಕೆ ವಾಹನ, ಪೆಟ್ರೋಲ್ ಬಳಕೆ ಖರ್ಚು 20 ಸಾವಿರ ರೂ. ಜಿಪಿಆರ್ಗೆ 2 ಲಕ್ಷ ರೂ ಬಾಡಿಗೆ ನೀಡಲಾಗುತ್ತಿದೆ.
ಎಸ್ಐಟಿ ತಂಡಕ್ಕೆ 5 ಹೊಸ ಕಂಪ್ಯೂಟರ್, 20 ಕುರ್ಚಿ, 3 ಪ್ರಿಂಟರ್ ಸೇರಿ ಇತ್ಯಾದಿಗಳಿಗೆ 40 ಸಾವಿರ ರೂ. ಫೊರೆನ್ಸಿಕ್ ವೈದ್ಯರ ತಂಡಕ್ಕಾಗಿ ವಿಶೇಷ ಉಪಕರಣಗಳ ಬಳಕೆ ವೆಚ್ಚ ದಿನಕ್ಕೆ 3 ರಿಂದ 4 ಸಾವಿರ ರೂ. ಎಸ್ಐಟಿಯೊಂದಿಗೆ ಇರುವ ಒಟ್ಟಾರೆ ತಂಡಕ್ಕೆ 3 ಹೊತ್ತು ಊಟ, ತಿಂಡಿಗೆ 10 ಸಾವಿರ ರೂ. ತಾತ್ಕಾಲಿಕ ಟೆಂಟ್ಗಳ ವೆಚ್ಚ ದಿನಕ್ಕೆ 3 ರಿಂದ 4 ಸಾವಿರ ರೂ., ಒಟ್ಟಾರೆ ಅಂದಾಜು ದಿನದ ಖರ್ಚು ಒಂದು ಲಕ್ಷದ ಐವತ್ತು ಸಾವಿರ ರೂ. ಎನ್ನಲಾಗುತ್ತಿದೆ.
ಕಾರ್ಯಾಚರಣೆಯಲ್ಲಿರುವ ತಂಡದ ವಿವರ
ಧರ್ಮಸ್ಥಳ ಪ್ರಕರಣದ ತನಿಖೆಗಾಗಿ ಒಟ್ಟು 260 ಅಧಿಕಾರಿಗಳು ಮತ್ತು ಸಿಬ್ಬಂದಿ ನಿಯೋಜಿಸಲಾಗಿದೆ. ಇದರಲ್ಲಿ:
ಎಸ್ಐಟಿ ತಂಡ: 26 ಜನ
ಎಫ್ಎಸ್ಎಲ್ (FSL) ತಜ್ಞರು: 5 ಜನ
ಎಸ್ಓಸಿಓ (SOCO) ತಜ್ಞರು: 5 ಜನ
ಪೌರಕಾರ್ಮಿಕರು: 15 ಜನ
ಪೊಲೀಸ್ ಸಿಬ್ಬಂದಿ: 200 ಜನ
ಒಬ್ಬ ಸಹಾಯಕ ಆಯುಕ್ತರು (AC) ಮತ್ತು ಒಬ್ಬ ತಹಶೀಲ್ದಾರ್.
ಸ್ಥಳೀಯಾಡಳಿತದ 5 ಜನ ಅಧಿಕಾರಿಗಳು.
Belthangady: ಬೆಳ್ತಂಗಡಿ : ಅಪ್ರಾಪ್ತೆಯನ್ನು ಗರ್ಭವತಿಯಾಗಿಸಿದ ಪ್ರಕರಣ; ಆರೋಪಿಯ ಬಂಧನ!
Comments are closed.