ರಾಜ್ಯದಲ್ಲಿ ನಾಳೆಯಿಂದ 18 ರಿಂದ ಮೇಲ್ಪಟ್ಟವರಿಗೆ ಲಸಿಕೆ ಶುರು
ರಾಜ್ಯದಲ್ಲಿ 18 ರಿಂದ 44 ವರ್ಷದೊಳಗಿನವರಿಗೆ ಮೇ 22 ರಿಂದ ಅಂದರೆ ನಾಳೆಯಿಂದ ಲಸಿಕೆ ನೀಡಲು ರಾಜ್ಯ ಸರ್ಕಾರ ಮುಂದಾಗಿದೆ. ಈ ಬಗ್ಗೆ ರಾಷ್ಟ್ರೀಯ ಅಭಿಯಾನ ನಿರ್ದೇಶಕರಾದ ಆರುಂಧತಿ ಅವರು ಆದೇಶ ಹೊರಡಿಸಿದ್ದಾರೆ.
ಆದರೆ 18 ರಿಂದ 44 ವರ್ಷದ ಫಲಾನುಭವಿಗಳಿಗೆ ದಿನಾಂಕ ಮೇ 22 ರಿಂದ ಪ್ರಾರಂಭಿಸಲು ಉದ್ದೇಶಿಸಲಾಗಿದ್ದು, ರಾಜ್ಯ ಗುರುತಿಸಿರುವ ಕೊರೋನ ಮಂಚೂಣಿ ಕಾರ್ಯಕರ್ತರಿಗೆ ಮಾತ್ರ ಕೋವಿಡ್ ಲಸಿಕೆ ನೀಡಲಾಗುತ್ತದೆ. ಸದ್ಯಕ್ಕೆ ಜನ ಸಾಮಾನ್ಯರಿಗೆ ಈ ಲಸಿಕೆ ಇರೋದಿಲ್ಲ.
ಬ್ಯಾಂಕ್ ಸಿಬ್ಬಂದಿ, ಪೆಟ್ರೋಲ್ ಬಂಕ್ ಸಿಬ್ಬಂದಿ, ಕಟ್ಟಡ ಕಾರ್ಮಿಕರು, ವಿಮಾನಯಾನ ಸಂಸ್ಥೆಗಳ ಸಿಬ್ಬಂದಿಗಳು, ರೈಲ್ವೆ ಸಿಬ್ಬಂದಿ, ಗಾರ್ಮೆಂಟ್ ಕೆಲಸಗಾರರು ಸೇರಿದಂತೆ ಒಟ್ಟು 18 ಗುಂಪುಗಳಿಗೆ ಆದ್ಯತೆ ನೀಡಿದ್ದು, ಇವರು ಸರ್ಕಾರ ಲಸಿಕೆ ನೀಡುವ ಮೊದಲ ಆದ್ಯತೆ ಪಟ್ಟಿಯಲ್ಲಿ ಬರುತ್ತಾರೆ.
ಮುಂದಿನ ದಿನಗಳಲ್ಲಿ ಆದ್ಯತೆ ಗುಂಪುಗಳಿಗೆ ಕೋವಿಡ್
ಲಸಿಕಾಕರಣ ನಡೆಸಲಾಗುತ್ತದೆ ಎಂದು ತಿಳಿಸಿದ್ದಾರೆ.
ಫಲಾನುಭವಿಗಳು ತಮ್ಮ ಸ್ವವಿವರದ ಜೊತೆ ಆಧಾರ್ ಕಾರ್ಡ್, ಅಥವಾ ಪಾನ್ ಕಾರ್ಡ್ ಅಥವಾ ಮತದಾರರ ಚೀಟಿ ಇವುಗಳಲ್ಲಿ ಯಾವುದಾದರೂ ಒಂದು ಸರ್ಕಾರಿ ದಾಖಲೆಯನ್ನು ತಮ್ಮೊಂದಿಗೆ ಒಯ್ಯುವುದು ಕಡ್ಡಾಯವಾಗಿರುತ್ತದೆ.