Viral Video : ಮುಸ್ಲಿಂ ಯುವತಿಯ ‘ಧರ್ಮಸ್ಥಳ ಪ್ರೇಮ’ – ವಿಡಿಯೋದಲ್ಲಿ ಆಕೆ ಹೇಳಿದ್ದೇನು?

Share the Article

Viral Video : ಸದ್ಯ ದೇಶಾದ್ಯಂತ ಸಂಚಲನ ಸೃಷ್ಟಿಸುತ್ತಿರುವ ಧರ್ಮಸ್ಥಳ ಪ್ರಕರಣ ತನಿಖೆ ಹಂತದಲ್ಲಿದೆ. ಇದರ ನಡುವೆಯೇ ಸಾಕಷ್ಟು ಊಹಾ ಪೂಹಗಳು ಕೇಳಿ ಬರುತ್ತಿದ್ದು, ಧರ್ಮಸ್ಥಳ ಕ್ಷೇತ್ರಕ್ಕೆ ಮಸಿ ಬಳಿಯಲಾಗುತ್ತಿದೆ ಎಂಬ ಆರೋಪವು ಮುನ್ನಲೆಗೆ ಬಂದಿದೆ. ಸ್ವತಹ ಹಿಂದೂಗಳೇ ಧರ್ಮಸ್ಥಳದ ವಿರುದ್ಧ ಆಪಾದನೆ ಮಾಡುತ್ತಿದ್ದಾರೆ ಎಂಬುದು ಹಲವರ ವಾದ. ಈ ನಡುವೆ ಮುಸ್ಲಿಂ ಯುವತಿಯ ಧರ್ಮಸ್ಥಳ ಪ್ರೇಮ ಒಂದು ಅನಾವರಣಗೊಂಡಿದೆ.

ಹೌದು, ಮುಸ್ಲಿಂ ಯುವತಿಯೊಬ್ಬರು ಅಪ್ಲೋಡ್ ಮಾಡುತ್ತಿದ್ದ ವಿಡಿಯೋಗಳಿಗೆ ‘ಧರ್ಮಸ್ಥಳಕ್ಕೆ ಹೋಗಿ ಹಾಡು, ಅಲ್ಲಿ 5 ಗೌಡರಿದ್ದಾರೆ’ ಎಂದು ಯಾರೋ ಕಿಡಿಗೇಡಿಗಳು ಕಮೆಂಟ್ ಮಾಡಿದ್ದಾರೆ. ಇದನ್ನು ಹಂಚಿಕೊಂಡು ಮತ್ತೊಂದು ವಿಡಿಯೋ ಮಾಡಿರುವ ಯುವತಿ, ಹೇ ಹುಚ್ಚ.. ಅದು ಧರ್ಮಸ್ಥಳ, ಒಳ್ಳೆಯ ಸ್ಥಳ, ಹಿಂದೂಗಳ ಪವಿತ್ರ ಭೂಮಿ. ನಾನು ಮುಸ್ಲಿಂ ಆದರೆ ಏನಾಯಿತು? ಅದು ಹಿಂದೂಗಳು ಆರಾಧಿಸುವ ಸ್ಥಳ. ಅದಕ್ಕೆ ನಾನು ಗೌರವ ಕೊಡಬೇಕು’ ಎಂದು ಹೇಳಿದ್ದಾರೆ

ಅಲ್ಲದೆ ಯಾಕೆ ಅಲ್ಲಿ ಅವರ ಹೆಸರನ್ನು ಎಳೆದು ತರುತ್ತೀರಿ, ಗೌಡ ಎಂದು ಹಾಡನ್ನು ಯಾಕೆ ಹೇಳಬೇಕು.. ಬೇರೆ ಬೇರೆ ಜಾತಿ ಧರ್ಮಗಳ ಹೆಸರನ್ನು ಹೇಳಿದರೆ ಸರಿಯಾಗುತ್ತದೆಯೇ? ನನ್ನ ವಿಡಿಯೋದಲ್ಲಿ ಬಂದು ಧರ್ಮಸ್ಥಳ ಗೌಡ ಎಂದೆಲ್ಲ ಯಾಕೆ ಮಾತನಾಡುತ್ತೀರಿ? ನನಗೆ ಮದುವೆಯಾಗಿದೆ, ನನಗೆ ಇಬ್ಬರು ಮಕ್ಕಳಿದ್ದಾರೆ, ನಾನು ಮುಸ್ಲಿಂ ಧರ್ಮದವಳು ಹೀಗೆಲ್ಲಾ ಮಾಡಬೇಡಿ ಎಂದು ಅವರು ಮನವಿಯನ್ನು ಮಾಡಿರುವುದನ್ನು ವಿಡಿಯೋದಲ್ಲಿ ಕಾಣಬಹುದು.

Beluru Gopalakrishna: ಧರ್ಮಸ್ಥಳ ಪ್ರಕರಣ – ಹೆಣಗಳು ಸಿಗದಿದ್ದರೆ ಅನಾಮಿಕನನ್ನು ನೇಣಿಗೆ ಹಾಕಲಿ, ಕಾಂಗ್ರೆಸ್ ಶಾಸಕ ಹೇಳಿಕೆ!!

Comments are closed.