Hubballi: ಜೈನ ಧರ್ಮದ ವಿರುದ್ಧ ಅವಹೇಳನಕಾರಿ ಹೇಳಿಕೆ: ಗಿರೀಶ್‌ ಮಟ್ಟಣ್ಣನವರ್‌, Kudla Rampage ಮೇಲೆ FIR

Share the Article

Dharmasthala : ಧರ್ಮಸ್ಥಳ ವಿಚಾರ ಮಾತನಾಡುವಾಗ ಜೈನ ಧರ್ಮದ ವಿರುದ್ಧ ಅವಹೇಳನಕಾರಿಯಾಗಿ ಹೇಳಿಕೆ ನೀಡಿರುವ ಕಾರಣ ಸಾಮಾಜಿಕ ಹೋರಾಟಗಾರ ಗಿರೀಶ್‌ ಮಟ್ಟಣ್ಣನವರ್‌ ಹಾಗು ಅವರ ಹೇಳಿಕೆ ಪ್ರಸಾರ ಮಾಡಿರುವ ಕುಡ್ಲ ರ್ಯಾಪೇಂಜ್‌ ಯೂಟ್ಯೂಬ್‌ ಚಾನೆಲ್‌ ಮಾಲಿಕನ ವಿರುದ್ಧ ಹುಬ್ಬಳ್ಳಿ ಗ್ರಾಮೀಣ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ.

ಜೈನ್‌ ಧರ್ಮೀಯರು ಕ್ರೂರಿಗಳು, ಸ್ತ್ರೀಲೋಲರು, ಮತಾಂಧರು ಸೇರಿ ಇತ್ಯಾದಿ ಪದಗಳನ್ನು ಜೈನರ ವಿರುದ್ಧ ಬಳಕೆ ಮಾಡಲಾಗಿದೆ. ಯಾವುದೇ ದಾಖಲೆ ಇಲ್ಲದೆ ಅದನ್ನು kudla Rampage ಚಾನೆಲ್‌ನಲ್ಲಿ ಪ್ರಸಾರ ಮಾಡಲಾಗಿದೆ. ಇದು ಜೈನ ಸಮಾಜಕ್ಕೆ ನೋವಾಗಿದ್ದು ಹೀಗಾಗಿ ಈ ಕುರಿತು ಜೈನ್‌ ಸಮಾಜದ ಮುಖಂಡ ಅಜಿತ್‌, ಗ್ರಾಮೀಣ ಪೊಲೀಸ್‌ ಠಾಣೆಗೆ ದೂರು ನೀಡಿದರು.

ಜೈನ್‌ ಧರ್ಮದ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿ ಇವರಿಬ್ಬರ ಮೇಲೆ ಸೂಕ್ತ ಕ್ರಮ ಕೈಗೊಳ್ಳುವಂತೆ ಅಜಿತ್‌ ಆಗ್ರಹ ಮಾಡಿದ್ದು, ಪೊಲೀಸರು ಬಿಎನ್‌ಎಸ್‌ 2023 ಕಾಯ್ದೆಯ ಕಲಂ 299, 196(1) (ಎ) ಅಡಿಯಲ್ಲಿ ಎಫ್‌ಐಆರ್‌ ದಾಖಲು ಮಾಡಿದ್ದಾರೆ.

Comments are closed.