Dakshina Kannada: ಧರ್ಮಸ್ಥಳ ಪದ್ಮಲತಾ ಕೇಸ್‌ ಮರುತನಿಖೆಗೆ ಇನ್ನೊಂದು ದೂರು

Share the Article

Dharmasthala Case: ಧರ್ಮಸ್ಥಳದ ಪದ್ಮಲತಾ ಅವರ ಅಸಹಜ ಸಾವಿನ ಪ್ರಕರಣದ ಕುರಿತು ವಿಶೇಷ ತನಿಖಾ ದಳಗೆ ಇನ್ನೊಬ್ಬ ದೂರುದಾರ ಜಯಂತ್‌ ಅವರು ಮನವಿ ಸಲ್ಲಿಕೆ ಮಾಡಿದ್ದಾರೆ. ಈ ಪ್ರಕರಣ ಇನ್ನೂ ನ್ಯಾಯಾಲಯದಲ್ಲಿದೆ ಎಂದು ಹೇಳಿರುವ ಅವರು, ತನಿಖೆಯನ್ನು ಸರಿಯಾದ ರೀತಿಯಲ್ಲಿ ನಡೆಸುವಂತೆ SITಯನ್ನು ಆಗ್ರಹ ಮಾಡಿದ್ದಾರೆ. ಅಗತ್ಯವಿದ್ದರೆ ನನ್ನ ಬಳಿ ಇರುವ ಸಾಕ್ಷಿಗಳನ್ನು ಎಸ್‌ಐಟಿಗೆ ಕೊಡುತ್ತೇನೆ ಎಂದು ಹೇಳಿದ್ದಾರೆ.

ಪದ್ಮಲತಾ ಅಪಹರಣ ಆಗಿರುವುದು ನಿಜ. ಈ ಕುರಿತು ತನಿಖೆ ಆಗಬೇಕು. ಈ ಪ್ರಕರಣದ ನಾನು ಎರಡನೇ ದೂರುದಾರ. ದೂರು ನೀಡಿದಾಗಿನಿಂದ ನನ್ನನ್ನು ಹಲವರು ಹಿಂಬಾಲಿಸುತ್ತಿದ್ದಾರೆ. ನನಗೆ ಜೀವಭಯವಿದೆ. ಆದರೆ ನಾನು ಹೆದರುವುದಿಲ್ಲ, ಹೋರಾಟ ಮುಂದುವರಿಸುತ್ತೇನೆ ಎಂದು ಹೇಳಿದರು.

ತಾವು ನೀಡಿದ ದೂರಿಗೆ ಸಂಬಂಧಪಟ್ಟಂತೆ ದಾಖಲೆಗಳು ನನ್ನ ಬಳಿ ಇದೆ. ಅದನ್ನು ನಾನು SIT ಗೆ ನೀಡುತ್ತೇನೆ. ಅವರು ಅದನ್ನು ಮಾಧ್ಯಮದವರಿಗೆ ಕೊಡಲಿ ಎಂದು ಹೇಳಿದರೆ ನಾನು ಕೊಡುತ್ತೇನೆ. ನನ್ನ ಆರೋಪ ಸುಳ್ಳು ಎಂದಾದರೆ ನನ್ನ ಮೇಲೆ ಕೇಸು ಹಾಕಲಿ. ನಾನು ಯಾವುದಕ್ಕೂ ಭಯಪಡುವುದಿಲ್ಲ ಎಂದು ಸವಾಲು ಹಾಕಿದರು.

Crime: 18 ಕಡೆಗಳಲ್ಲಿ ಅಂಗಾಂಗ ತುಂಡುಗಳು ಪತ್ತೆ ಕೇಸ್ ಗೆ ಬಿಗ್ ಟ್ವಿಸ್ಟ್: ಆರೋಪಿ ಕೊನೆಗೂ ಲಾಕ್!

Comments are closed.