ಧರ್ಮಸ್ಥಳದಲ್ಲಿ ಕೋರೋನ ರೋಗಿಯ ಸಾವು | ಆತಂಕದಲ್ಲಿ ಬೆಳ್ತಂಗಡಿ ತಾಲೂಕು !
ಧರ್ಮಸ್ಥಳದಲ್ಲಿ ಕೊರೋನಾದಿಂದ ಇಂದು ಒಂದು ಸಾವು ಸಂಭವಿಸಿದೆ. ಬೆಳ್ತಂಗಡಿ ತಾಲೂಕು ಬೆಚ್ಚಿಬಿದ್ದಿದೆ.
ಧರ್ಮಸ್ಥಳದ 55 ವರ್ಷ ಪ್ರಾಯದ ರಘುಚಂದ್ರ ಲಿಂಗಾಯಿತ ಪುರ್ಜೆಬೈಲ್ ಎಂಬವರೇ ಇದೀಗ ಮೃತಪಟ್ಟ ದುರ್ದೈವಿ.
ದೇಶದೆಲ್ಲೆಡೆ ಮತ್ತು ರಾಜ್ಯದೆಲ್ಲೆಡೆ ಕೊರೋನಾ ಅಬ್ಬರಿಸುತ್ತಾ ಇದ್ದರೂ, ಬೆಳ್ತಂಗಡಿ ತಾಲೂಕಿನಲ್ಲಿ ಸೋಂಕಿತರ ಪ್ರಮಾಣ ತೀರಾ ಕಡಿಮೆ ಇತ್ತು. ಇದೀಗ ಬೆಳ್ತಂಗಡಿ ತಾಲೂಕಿನಲ್ಲಿ ಕೂಡ ಸೋಂಕಿತರ ಸಂಖ್ಯೆ ವಿಪರೀತವಾಗಿ ಏರುತ್ತಿದ್ದು ಅದು ಆತಂಕಕ್ಕೆ ಕಾರಣವಾಗಿದೆ.
ಇದೀಗ ಧರ್ಮಸ್ಥಳದಲ್ಲಿ ಕೊರೋನಾ ಸಂಬಂಧಿತ ಸಾವಾಗಿದ್ದು ಆತಂಕ ಮೂಡಿಸಿದೆ.
ಈ ಮಧ್ಯೆ ಸ್ಥಳೀಯ ಆಡಳಿತ ಮತ್ತು ಪೊಲೀಸ್ ಇಲಾಖೆ ಮತ್ತಷ್ಟು ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದೆ.
ತಾಲೂಕಿನ ಹಲವೆಡೆ ಜನರು ಸಂಜೆಯ ಹೊತ್ತಿಗೆ ಆಟೋಟ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದು ಅದು ಪೊಲೀಸ್ ಇಲಾಖೆಯ ಗಮನಕ್ಕೆ ಬಂದಿದೆ. ಇನ್ನು ಮುಂದೆ ಅಂತಹ ಯಾವುದೇ ಚಟುವಟಿಕೆಗಳಿಗೆ ಅವಕಾಶವಿಲ್ಲ. ನಾಲ್ಕಾರು ಜನ ಗುಂಪು ಸೇರಿ ಕೈಯಲ್ಲಿ ಮೊಬೈಲ್ ಹಿಡಿದುಕೊಂಡು ಇನ್ನು ಮುಂದೆ ಚಿಟ್ ಚಾಟ್ ಮಾಡುವಂತಿಲ್ಲ. ಒಂದು ವೇಳೆ ಇದು ಪೊಲೀಸರ ಗಮನಕ್ಕೆ ಬಂದರೆ ಕೂಡಲೇ ಅಲ್ಲಿರುವವರು ವಾಹನ ಮೊಬೈಲು ಇನ್ನಿತರ ವಸ್ತುಗಳನ್ನು ಸೀಝ್ ಮಾಡಲಾಗುವುದು ಎಂದು ಬೆಳ್ತಂಗಡಿಯ ಸಬ್ಇನ್ಸ್ಪೆಕ್ಟರ್ ಪವನ್ ನಾಯಕ್ ಅವರು ಹೇಳಿದ್ದಾರೆ.
ಅಷ್ಟೇ ಅಲ್ಲದೆ, ಒಂದು ವೇಳೆ ವಾಹನ ಮುಟ್ಟುಗೋಲು ಸಂದರ್ಭ ಯಾವುದೇ ಕಾಂಪ್ರೋಮೈಸ್ ಗೆ ಅವಕಾಶ ಇರೋದಿಲ್ಲ. ರಾಷ್ಟ್ರೀಯ ವಿಪತ್ತು ಆದ ಕೋರೋನಾ ವಿಷಯದಲ್ಲಿ ಯಾರದೇ ಮಾತು ನಡೆಯುವುದಿಲ್ಲ, ನಡೆಯಬಾರದು ಎಂದು ನಿರ್ಧಾರಕ್ಕೆ ಬರಲಾಗಿದೆ ಎನ್ನಲಾಗಿದೆ.
ಅಲ್ಲದೆ, ಧರ್ಮಸ್ಥಳ ಗ್ರಾಮದ ವ್ಯಾಪ್ತಿಯಲ್ಲಿ ಯಾವುದೇ ವ್ಯಕ್ತಿ ಪರ ಊರಿಂದ ಬಂದರೆ ಈ ವಿಷಯವನ್ನು ಕೂಡಲೇ ಪಂಚಾಯತ್ ಅಧಿಕಾರಿಗಳಿಗೆ ತಿಳಿಸಬೇಕೆಂದು ಕೋರಲಾಗಿದೆ.