Facial Makeup: 22 ವರ್ಷಗಳಿಂದ ತನ್ನ ಮುಖದ ಮೇಕಪ್ ಸರಿಯಾಗಿ ತೆಗೆಯದ ಮಹಿಳೆ! ಈಗ ಈಕೆಯ ಪರಿಸ್ಥಿತಿ ಏನಾಗಿದೆ?

Share the Article

Facial Makeup: ಮೇಕಪ್ ಮಾಡಿಕೊಳ್ಳಲು ಎಲ್ಲರಿಗೂ ಇಷ್ಟ, ಆದರೆ ಮೇಕಪ್ ಮಾಡಿಕೊಂಡ ನಂತರ ಮುಖ ಸರಿಯಾಗಿ ತೊಳೆಯದಿದ್ದರೆ ಏನಾಗಬಹುದು? ಇಲ್ಲೊಬ್ಬ ಮಹಿಳೆ ಇಪ್ಪತ್ತು ವರ್ಷಗಳ ಕಾಲ  ಪ್ರತಿದಿನ ಮೇಕಪ್ ಮಾಡುತ್ತಿದ್ದು, ಆದರೆ ಅದನ್ನು ತೆಗೆಯುವುದು “ಒಂದು ತೊಂದರೆ” ಎಂದು ಅವಳು ಭಾವಿಸಿ, ಮೇಕಪ್‌ ತೆಗೆಯದೆ ಹಾಗೆ ಮಲಗುತ್ತಿದ್ದಳು. ಮರುದಿನ ಬೆಳಿಗ್ಗೆ ಮತ್ತೆ ಅದೇ ಮೇಕಪ್ ಹಾಕಿಕೊಳ್ಳಬೇಕಾದರೆ, ರಾತ್ರಿಯಲ್ಲಿ ಅದನ್ನು ತೊಳೆಯುವುದು ಏಕೆ ಎಂದು ಅವಳು ಯೋಚನೆ ಮಾಡಿದ್ದಾಳೆ. ಪರಿಣಾಮವಾಗಿ, ಈಗ ಅವಳ ಮುಖದಲ್ಲಿ ಅಲರ್ಜಿ ಕಾಣಿಸಿಕೊಂಡಿದೆ. ಅವಳ ಮುಖ ತುಂಬಾ ಊದಿಕೊಂಡಿದ್ದು, ಇದೀಗ ಹೊರಗೆ ಹೋಗಲು ಸಹ ಅವಳು ಹೆದರುವಂತೆ ಆಗಿದೆ ಆಕೆಯ ಪರಿಸ್ಥಿತಿ.

ಈ ಘಟನೆ ನಡೆದಿರುವುದು ಚೀನಾದಲ್ಲಿ. ಓರ್ವ ಮಹಿಳೆ, ಆಕೆಯ ಹೆಸರು ಗಾವೊ. ಇದೀಗ ಈಕೆ ಮೇಕಪ್ ಮಾಡಿದ ನಂತರ ಸರಿಯಾಗಿ ಮುಖ ತೊಳೆಯುವುದು ಬಹಳ ಮುಖ್ಯ ಎಂದು ಅವಳು ಸಾಮಾಜಿಕ ಮಾಧ್ಯಮದಲ್ಲಿ ಎಲ್ಲರಿಗೂ ಎಚ್ಚರಿಕೆ ನೀಡಿದ್ದಾಳೆ. ಅವಳು 20 ವರ್ಷಗಳ ಕಾಲ ಮೇಕಪ್ ಬಳಸುತ್ತಿದ್ದಳು. ಆದರೆ ಮುಖವನ್ನು ಸರಿಯಾಗಿ ಸ್ವಚ್ಛಗೊಳಿಸಲಿಲ್ಲ. ಅವಳು ಅದನ್ನು ನೀರಿನಿಂದ ತೊಳೆದು ಮರುದಿನ ಬೆಳಿಗ್ಗೆ ಮತ್ತೆ ಮೇಕಪ್ ಹಚ್ಚುತ್ತಿದ್ದಳು. ಆರಂಭದಲ್ಲಿ ಎಲ್ಲವೂ ಚೆನ್ನಾಗಿ ನಡೆಯಿತು, ಆದರೆ ಈ ವರ್ಷ ಅವಳ ಮುಖದ ಮೇಲೆ ಅಲರ್ಜಿ ಎಷ್ಟಿತ್ತೆಂದರೆ ಅವಳ ಮುಖ ಸಂಪೂರ್ಣವಾಗಿ ಊದಿಕೊಂಡಿದೆ. ಆಕೆಯನ್ನು ಗುರುತಿಸುವುದು ಸಹ ಕಷ್ಟವಾಗಿದೆ.

“ನನ್ನ ಮುಖದ ಮೇಲೆ ಸಾವಿರಾರು ಇರುವೆಗಳು ಓಡುತ್ತಿರುವಂತೆ ಭಾಸವಾಗುತ್ತಿದೆ”  ಎಂದು ಆಕೆ ಇದೀಗ ಸಾಮಾಜಿಕ ಮಾಧ್ಯಮದಲ್ಲಿ ಹೇಳಿದ್ದಾಳೆ. ಸಾವಿರಾರು ಇರುವೆಗಳು ತನ್ನ ಮುಖದ ಮೇಲೆ ತೆವಳುತ್ತಿರುವಂತೆ ಭಾಸವಾಗುತ್ತಿದ್ದು, ತುರಿಕೆಯಿಂದ ಬಳಲುತ್ತಿದ್ದಾಳೆ. ಇದೀಗ ಆಕೆಯ ಮುಖದಲ್ಲಿ ಸುಕ್ಕುಗಳು ತುಂಬಿದ್ದು, ಆಕೆ ಭಯದಿಂದ ಜನರನ್ನು ಭೇಟಿಯಾಗುವುದನ್ನು ಸಹ ನಿಲ್ಲಿಸಿದ್ದಾಳೆ. ಮೊದಲು ಅವಳು ವೈದ್ಯರ ಬದಲು ಚರ್ಮದ ಚಿಕಿತ್ಸಾಲಯದಲ್ಲಿ ಇಂಜೆಕ್ಷನ್ ಪಡೆದಳು, ಅದು ಅವಳ ಸ್ಥಿತಿಯನ್ನು ಇನ್ನಷ್ಟು ಹದಗೆಡಿಸಿತು.

 

ಗಾವೊ ಈಗ ಎಲ್ಲರಿಗೂ ವಿವರಿಸುತ್ತಿರುವುದು, ಒಬ್ಬರು ಯಾವುದೇ ರೀತಿಯ ಮೇಕಪ್ ಮಾಡಿಕೊಳ್ಳಬಹುದು, ಆದರೆ ಮಲಗುವ ಮುನ್ನ ಮುಖವನ್ನು ಸರಿಯಾಗಿ ಸ್ವಚ್ಛಗೊಳಿಸುವುದು ಅವಶ್ಯಕ. ನೀರಿನಿಂದ ಮಾತ್ರವಲ್ಲ, ಉತ್ತಮ ಫೇಸ್ ವಾಶ್ ನಿಂದ. ಇಲ್ಲದಿದ್ದರೆ ಮುಖ ಸುಂದರವಾಗುವ ಬದಲು ಭಯಾನಕ ಆಗಬಹುದು ಎಂದು ಹೇಳಿದ್ದಾಳೆ.

Comments are closed.