Belagavi: ರೈತರೊಬ್ಬರ ಗದ್ದೆಯಲ್ಲಿ ಹೈಟೆಕ್‌ ವಾಮಾಚಾರ, ಲಿಂಬೆಹಣ್ಣು, ಮೊಸರನ್ನದ ಜೊತೆ ಸ್ಮಾರ್ಟ್‌ಫೋನ್ನಿಟ್ಟು ದುಷ್ಕೃತ್ಯ

Share the Article

Belagavi: ಲಿಂಬೆಹಣ್ಣು, ಅರಿಶಿಣ ಕುಂಕುಮ ಇಟ್ಟು ವಾಮಾಚಾರ ಮಾಡುವುದು ನೀವು ಕೇಳಿರಬಹುದು. ಆದರೆ ಬೆಳಗಾವಿಯಲ್ಲೊಂದು ಹೈಟೆಕ್‌ ವಾಮಾಚಾರದ ಕುರಿತು ವರದಿಯಾಗಿದೆ.

ಲಿಂಬೆಹಣ್ಣು, ಅರಿಶಿಣ, ಕುಂಕುಮದ ರೀತಿಯ ವಸ್ತು ಬಳಕೆ ಮಾಡಿ ರೈತ ಸದಾನಂದ ದೇಸಾಯಿ ಜಮೀನಿನಲ್ಲಿ ಸ್ಮಾರ್ಟ್‌ಫೋನ್‌ ಸೇರಿ ವಾಮಾಚಾರದ ವಸ್ತುಗಳು ಬೆಳಗಾವಿ ಜಿಲ್ಲೆಯ ಯಳ್ಳೂರು ಗ್ರಾಮದ ಹೊರವಲಯದಲ್ಲಿ ನಡೆದಿದೆ.

ಇದನ್ನು ಕಂಡ ಗ್ರಾಮಸ್ಥರು ಈ ವಿಚಿತ್ರ ಘಟನೆಯನ್ನು ನೋಡಿ, ರೈತ ಮುಖಂಡ ರಾಜು ಮರವೆ ಅವರಿಗೆ ಮಾಹಿತಿಯನ್ನು ನೀಡಿದ್ದಾರೆ. ಗಿಡಕ್ಕೆ ಲಿಂಬೆಹಣ್ಣು, ಮೊಸರು, ತೆಂಗಿನಕಾಯಿ, ಎಲೆ-ಅಡಿಕೆ, ಕ್ಯಾರ್‌ ಬೀಜಗಳ ಜೊತೆಗೆ ಒಂದು ಸ್ಮಾರ್ಟ್‌ಫೋನ್‌ ಅನ್ನು ಕಟ್ಟಿದ್ದು ಇದನ್ನು ನೋಡಿದ ಇವರು ನಿಜಕ್ಕೂ ಶಾಕ್‌ಗೊಳಗಾಗಿದ್ದಾರೆ.

ಸಾಂಪ್ರದಾಯಿಕ ವಾಮಾಚಾರಕ್ಕೆ ಆಧುನಿಕ ತಂತ್ರಜ್ಞಾನವನ್ನು ಬಳಕೆ ಮಾಡಿರುವುದು ನಿಜಕ್ಕೂ ಶಾಕಿಂಗ್‌ . ಇದರ ಹಿಂದಿನ ಉದ್ದೇಶ ಕಂಡು ಹಿಡಿಯಬೇಕು ಎಂದು ರಾಜು ಮರವೆ ಹೇಳಿರುವ ಕುರಿತು ವರದಿಯಾಗಿದೆ.

Comments are closed.