Raichur: ಪತ್ನಿಯೇ ಸೇತುವೆಯಿಂದ ನದಿಗೆ ತಳ್ಳಿದ ಪ್ರಕರಣ: ಪತಿ ತಾತಪ್ಪ ಬಾಲ್ಯವಿವಾಹ, ಪೋಕ್ಸೋ ಕೇಸ್‌ನಡಿ ಬಂಧನ

Raichur: ಕೃಷ್ಣಾ ನದಿ ಸೇತುವೆ ಮೇಲಿಂದ ಪತಿಯನ್ನು ತಳ್ಳಿ ಕೊಲೆಗೆ ಯತ್ನ ಮಾಡಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ರಾಯಚೂರು ಮಹಿಳಾ ಠಾಣೆ ಪೊಲೀಸರು ಪತಿ ತಾತಪ್ಪ ಬಂಧನ ಮಾಡಿದ್ದಾರೆ. ಬಾಲ್ಯವಿವಾಹ, ಪೋಕ್ಸೋ ಕಾಯ್ದೆಯಡಿ ತಾತಪ್ಪನ ವಿರುದ್ಧ ಪ್ರಕರಣ ದಾಖಲಾಗಿದ್ದು ಈ ಕಾರಣದಿಂದ ಬಂಧನವಾಗಿದೆ.

16 ವರ್ಷದ ಅಪ್ರಾಪ್ತೆಯನ್ನು ತಾತಪ್ಪ ಮದುವೆಯಾಗಿದ್ದು, ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಪತಿಯ ಕೊಲೆಗೆ ಪತ್ನಿ ಯತ್ನ ಮಾಡಿದ್ದಳು ಎನ್ನುವ ಆರೋಪ ಕೇಳಿ ಬಂದಿತ್ತು. ಈ ಕುರಿತು ಮನೆ ಮಂದಿ ಎಲ್ಲಾ ನಿರ್ಧಾರ ತೆಗೆದುಕೊಂಡಿದ್ದು, ಈ ಸುದ್ದಿ ರಾಜ್ಯದಾದ್ಯಂತ ಹಬ್ಬಿತ್ತು.
ಕೊಲೆಯತ್ನ ಪ್ರಕರಣದ ತನಿಖೆಯ ಸಂದರ್ಭ ಬಾಲ್ಯ ವಿವಾಹವಾಗಿರುವುದು ಬಹಿರಂಗವಾಗಿದೆ. ಈ ಕುರಿತು ತಾತಪ್ಪನನ್ನು ಪೊಲೀಸರು ಬಂಧನ ಮಾಡಿ ವಿಚಾರಣೆ ನಡೆಸಿದ್ದಾರೆ.
Comments are closed.