Viral Post : ಮನೆಗಳಲ್ಲಿ ಬರೀ 30 ನಿಮಿಷ ಕೆಲಸ – ಈ ಮಹಿಳೆಗೆ ತಿಂಗಳಿಗೆ ಸಿಗುತ್ತೆ 2 ಲಕ್ಷ, ಕೆಲಸವೇನು ಗೊತ್ತಾ !!

Share the Article

Viral Post : ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ದುಡಿಯುವುದೇ ದೊಡ್ಡ ವಿಚಾರವಾಗಿದೆ. ಎಷ್ಟು ದುಡಿದರೂ ಕೂಡ ತಿಂಗಳಾಂತ್ಯಕ್ಕೆ ಕೈಗೆ ಸಿಗುವುದು ಬಿಡಿ ಕಾಸು ಮಾತ್ರ ಎಂಬುದು ಕೆಲವರ ಆರೋಪ. ಆದರೂ ಕೂಡ ಇಂದು ಅನೇಕರು ಮನೆಯಲ್ಲಿ ಕೂತು ಸಣ್ಣ ಪುಟ್ಟ ಕೆಲಸಗಳ ಮೂಲಕವೇ ತಿಂಗಳಿಗೆ ಲಕ್ಷ ಗಳಿಸುವುದನ್ನು ನಾವು ನೋಡಬಹುದು. ಇದೀಗ ಅಂತದ್ದೇ ಒಂದು ಕೆಲಸದ ವಿಚಾರ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ಮಹಿಳೆಯೊಬ್ಬರು ತಿಂಗಳಿಗೆ ಎರಡು ಲಕ್ಷ ಹಣವನ್ನು ಗಳಿಸುತ್ತಿದ್ದಾರೆ.

ಹೌದು, ಮುಂಬೈನಂತಹ ಮಹಾನಗರದಲ್ಲಿ ಮಹಿಳೆಯೊಬ್ಬರು ಪ್ರತಿದಿನವೂ 10-12 ಮನೆಗಳಲ್ಲಿ ದಿನಕ್ಕೆ 30 ನಿಮಿಷದ ಕೆಲಸ ಮಾಡಿ ತಿಂಗಳಿಗೆ 2 ಲಕ್ಷ ರೂ ಸಂಬಳ ಗಳಿಸುತ್ತಿದ್ದಾರೆ. ಈ ಕುರಿತಾಗಿ ಮುಂಬೈನ ವಕೀಲೆಯೊಬ್ಬರು ತಮ್ಮ ಮನೆಗೆ ಅಡುಗೆ ಮಾಡಲು ಬರುವ ಕೆಲಸಗಾರರ ಸಂಬಳದ ಬಗ್ಗೆ ಪೋಸ್ಟ್ ಮಾಡಿದ್ದಾರೆ. 30 ನಿಮಿಷ ಅಡುಗೆ ಕೆಲಸ, ತಿಂಗಳಿಗೆ 18,000 ರೂ ಎಂದಿದ್ದಾರೆ. ಈ ಮಹಿಳೆಯ ಪೋಸ್ಟ್ ವೈರಲ್ ಆಗಿದ್ದು, ನೆಟ್ಟಿಗರು ಆಶ್ಚರ್ಯ ಚಕಿತರಾಗಿದ್ದಾರೆ.

ಅಂದಹಾಗೆ @AyushiiDoshii ಹೆಸರಿನ ಎಕ್ಸ್ ಖಾತೆಯಲ್ಲಿ ಮಹಿಳೆಯೊಬ್ಬರು ತಮ್ಮ ಮನೆಗೆ ಬರುವ ಅಡುಗೆಯವ ತಿಂಗಳಿಗೆ ಎಷ್ಟು ಸಂಪಾದನೆ ಮಾಡ್ತಾನೆ ಎಂದು ಈ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ. ನನ್ನ ಮಹಾರಾಜ್ (ಅಡುಗೆಯವ)’ ಪ್ರತಿ ದಿನ ಅರ್ಧ ಗಂಟೆ ಕೆಲಸ ಮಾಡುತ್ತಾನೆ. ತಿಂಗಳಿಗೆ 18,000 ರೂ ಪಡೆಯುತ್ತಾರೆ . ಹೀಗೆ ಹತ್ತು ಹನ್ನೆರಡು ಮನೆಗಳಲ್ಲಿ ಪ್ರತಿದಿನ ಕೆಲಸ ಮಾಡುತ್ತಾರೆ. ಉಚಿತ ಊಟ ಚಹಾ ಸಿಗುತ್ತದೆ. ಒಂದು ವೇಳೆ ಸರಿಯಾಗಿ ಸಂಬಳ ಕೊಡದ್ದಿದರೆ ವಿದಾಯ ಹೇಳದೇ ಹೊರಟು ಹೋಗುತ್ತಾರೆ ಎಂದು ಇಲ್ಲಿ ಬರೆಯಲಾಗಿದೆ.

Comments are closed.