Madikeri: ಕುಶಾಲನಗರದಲ್ಲಿ ಭೀಕರ ಅಪಘಾತ: ಬೆಳ್ಳಾರೆ ಪೆರುವಾಜೆ ನಿವಾಸಿ ಸಾವು

Share the Article

Madikeri: ಮಡಿಕೇರಿ-ಕುಶಾಲನಗರ ಮಾರ್ಗದ ಆನೆಕಾಡು ಬಳಿ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಬೈಕ್‌ಗೆ ಮುಖಾಮುಖಿ ಡಿಕ್ಕಿ ಹೊಡೆದಿದ್ದು, ಈ ಘಟನೆಯಲ್ಲಿ ಬೈಕ್‌ ಸವಾರ ಸ್ಥಳದಲ್ಲಿಯೇ ಸಾವಿಗೀಡಾದ ಘಟನೆ ನಡೆದಿದೆ.

ಮೃತ ವ್ಯಕ್ತಿಯನ್ನು ಸುಳ್ಯ ತಾಲೂಕಿನ ಪೆರಾಜೆ ನಿವಾಸಿ ಕಾರ್ತಿಕ್‌ ಭಟ್‌ ಆರ್ನಾಡಿ (29) ಎಂದು ಗುರುತಿಸಲಾಗಿದೆ.

ಕಾರ್ತಿಕ್‌ ತನ್ನ ಬೈಕ್‌ನಲ್ಲಿ‌ ಹೋಗುತ್ತಿದ್ದಾಗ, ಮಡಿಕೇರಿಯಿಂದ ಕುಶಾಲನಗರದ ಕಡೆಗೆ ಹೋಗುತ್ತಿದ್ದ ಕಾರು, ಆನೆಕಾಡು ಸಮೀಪ ಬರುತ್ತಿದ್ದಂತೆ ಚಾಲಕನ ನಿಯಂತ್ರಣ ತಪ್ಪಿದೆ. ಪರಿಣಾಮ ಎದುರುಗಡೆಯಿಂದ ಬರುತ್ತಿದ್ದ ಕಾರ್ತಿಕ್‌ ಬೈಕ್‌ಗೆ ಡಿಕ್ಕಿ ಹೊಡೆದಿದೆ.

ಪರಿಣಾಮ ಕಾರ್ತಿಕ್‌ ಬೈಕ್‌ನಿಂದ ರಸ್ತೆಗೆ ಎಸೆಯಲ್ಪಟ್ಟಿದ್ದು, ರಕ್ತಸ್ರಾವದಿಂದ ಸಾವಿಗೀಡಾಗಿದ್ದಾರೆ. ಕಾರು ರಸ್ತೆ ಬದಿಯ ಚರಂಡಿಗೆ ಇಳಿದು, ಸಮೀಪದ ಕಾಡಿನೊಳಗೆ ನುಗ್ಗಿರುವ ಕುರಿತು ವರದಿಯಾಗಿದೆ. ಮೈಸೂರಿನಲ್ಲಿ ಕೆಲಸದಲ್ಲಿದ್ದ ಕಾರ್ತಿಕ್‌ ವಾರದ ಕೊನೆಯಲ್ಲಿ ಬೆಳ್ಳಾರೆಯ ಮನೆಗೆ ಬರುತ್ತಿದ್ದು, ಅಪಘಾತ ನಡೆದಿದೆ.

Comments are closed.