Tirupati : 11, 000 ಕೆಜಿ ಏರಿಕೆ ಕಂಡ ತಿಮ್ಮಪ್ಪನ ಚಿನ್ನದ ಭಂಡಾರ!!ಇದರ ಮೌಲ್ಯವೆಷ್ಟು ಗೊತ್ತಾ?

Share the Article

Tirupati: ಹಿಂದೂಗಳ ಅತಿ ಪವಿತ್ರ ಸ್ಥಳ ಹಾಗೂ ವಿಶ್ವವಿಖ್ಯಾತಿ ಪಡೆದಿರುವ ತಿರುಪತಿ ತಿಮ್ಮಪ್ಪನ ಮಹಿಮೆ ಎಲ್ಲರಿಗೂ ತಿಳಿದಿದೆ. ಇಲ್ಲಿಗೆ ದಿನನಿತ್ಯವೂ ಲಕ್ಷಾಂತರ ಭಕ್ತರು ಆಗಮಿಸಿ ಶ್ರೀವಾರಿಯ ಕೃಪೆಗೆ ಪಾತ್ರರಾಗುತ್ತಾರೆ. ಅಲ್ಲದೆ ದಿನನಿತ್ಯವೂ ಬರುವ ಭಕ್ತಾದಿಗಳು ತಿಮ್ಮಪ್ಪನಿಗೆ ಚಿನ್ನ ಬೆಳ್ಳಿಯ ರೀತಿಯಲ್ಲಿ ಹರಕೆಗಳನ್ನು ಒಪ್ಪಿಸುತ್ತಾರೆ. ಹೀಗೆ ಒಪ್ಪಿಸಿದ ಚಿನ್ನ ಇದೀಗ 11 ಸಾವಿರ ಕೆಜಿಯನ್ನು ದಾಟಿದೆ.

ಹೌದು, ಒಂದೇ ವರ್ಷದಲ್ಲಿ ಸುಮಾರು ₹773 ಕೋಟಿ ಮೌಲ್ಯದ 1,000 ಕೆಜಿಗೂ ಹೆಚ್ಚು ಚಿನ್ನ ತಿಮ್ಮಪ್ಪನಿಗೆ ಕಾಣಿಕೆಯಾಗಿ ಬಂದಿದೆ ಎಂದು ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ) ತಿಳಿಸಿದೆ. ಹೀಗಾಗಿ ತಿಮ್ಮಪ್ಪನ ಚಿನ್ನದ ಭಂಡಾರ ಈಗ 11,000 ಕೆಜಿ ದಾಟಿದೆ ಮತ್ತು ಫಿಕ್ಸೆಡ್ ಡೆಪಾಸಿಟ್ ₹18,000 ಕೋಟಿಗೂ ಹೆಚ್ಚಿದೆ.

ತಿಮ್ಮಪ್ಪನ ಚಿನ್ನದ ಭಂಡಾರ ಈಗ 11,000 ಕೆಜಿ ದಾಟಿದೆ. ಫಿಕ್ಸೆಡ್ ಡೆಪಾಸಿಟ್ ₹18,000 ಕೋಟಿಗೂ ಹೆಚ್ಚಿದೆ. ಈ ಫಿಕ್ಸೆಡ್ ಡೆಪಾಸಿಟ್ ನಿಂದ ಬರುವ ವಾರ್ಷಿಕ ಬಡ್ಡಿ ₹1,200 ಕೋಟಿ ದಾಟಿದೆ ಎಂದು ಟಿಟಿಡಿ ಹೇಳಿದೆ.

ಇದನ್ನೂ ಓದಿ: Viral Video : RSS ಪ್ರಾರ್ಥನೆ ವೇಳೆ ಸ್ವಯಂಸೇವಕರ ಕಾಲ ಬಳಿ ಹರಿದ ಹಾವು – ಮುಂದೇನಾಯ್ತು?

Comments are closed.