Nimisha Priya: ಕೇರಳ ನರ್ಸ್ ಪ್ರಕರಣಕ್ಕೆ ಬಿಗ್ ಟ್ವಿಸ್ಟ್- ರದ್ದಾಗಿಲ್ಲ ನಿಮಿಷ ಪ್ರಿಯಾ ಗಲ್ಲು ಶಿಕ್ಷೆ, ಕೇಂದ್ರ ಸರ್ಕಾರ ಎಚ್ಚರಿಕೆ

Nimisha Priya: ಯೆಮೆನ್ ನಲ್ಲಿ ಕೊಲೆ ಪ್ರಕರಣ ಸಂಬಂಧ ಕೇರಳ ನರ್ಸ್ ನಿಮಿಷ ಪ್ರಿಯಾ ಪ್ರಕರಣಕ್ಕೆ ಇದೀಗ ಬಿಗ್ ಟ್ವಿಸ್ಟ್ ಸಿಕ್ಕಿದ್ದು ಆಕೆಯ ಗಲ್ಲು ಶಿಕ್ಷೆ ರದ್ದಾಗಿಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟೀಕರಣ ನೀಡಿದೆ.

ಹೌದು, ಯೆಮೆನ್ ನಲ್ಲಿ ಕೊಲೆ ಪ್ರಕರಣ ಸಂಬಂಧ ಕೇರಳ ನರ್ಸ್ ನಿಮಿಷ ಪ್ರಿಯಾ ಅಲ್ಲಿನ ಕೋರ್ಟ್ ಗಲ್ಲು ಶಿಕ್ಷೆ ವಿಧಿಸಿತ್ತು. ಗಲ್ಲು ಶಿಕ್ಷೆಗೆ ಗುರಿಯಾಗಿರುವ ನಿಮಿಷ ಪ್ರಿಯಾಗಾಗಿ ಇಡೀ ದೇಶವೇ ಪ್ರಾರ್ಥಿಸಿತ್ತು. ಈ ಬೆನ್ನಲ್ಲೇ ಕೇಂದ್ರ ಸರಕಾರ ಮಧ್ಯಪ್ರವೇಶಿಸಿ ಮಾತುಕತೆ ನಡೆಸಿತ್ತು. ಇತ್ತ ಹಲವು ಸಂಘಟನೆಗಳು, ಸಮುದಾಯದ ನಾಯಕರು ಮಾತುಕತೆಗೆ ಮುಂದಾಗಿದ್ದರು. ಕೊನೆಗೆ ಜುಲೈ 16ರ ಗಲ್ಲು ಶಿಕ್ಷೆ ಮುಂದೂಡಲಾಗಿತ್ತು. ಇದರ ಬೆನ್ನಲ್ಲೇ ಕೆಲ ಸಮುದಾಯದ ನಾಯಕರು ನಿಮಿಷ ಪ್ರಿಯಾ ಗಲ್ಲು ಶಿಕ್ಷೆ ರದ್ದಾಗಿದೆ. ಆಕೆ ಶೀಘ್ರದಲ್ಲೇ ಬಿಡುಗಡೆಯಾಗಲಿದ್ದಾರೆ ವಿಡಿಯೋ ಸಂದೇಶ ಪೋಸ್ಟ್ ಮಾಡಿದ್ದರು. ಆದರೆ ಈಗ ಕೇಂದ್ರ ವಿದೇಶಾಂಗ ಇಲಾಖೆಯ ಈ ಕುರಿತು ಮಾಹಿತಿಯನ್ನು ಹಂಚಿಕೊಂಡಿದ್ದು ಕೇಂದ್ರ ಸರ್ಕಾರ ನಿರಂತರ ಸಂಪರ್ಕದಲ್ಲಿದೆ. ಯಮೆನ್ ಗಲ್ಲು ಶಿಕ್ಷೆಯನ್ನು ಮುಂದೂಡಿದೆ, ಆದರೆ ರದ್ದುಪಡಿಸಿಲ್ಲ ಎಂದು ಸ್ಪಷ್ಟಪಡಿಸಿದೆ.
ವಿದೇಶಾಂಗ ಸಚಿವಾಲಯದ (External Affairs Ministry) ವಕ್ತಾರ (Spokesperson) ರಣಧೀರ್ ಜೈಸ್ವಾಲ್ (Randhir Jaiswal) ಅವರು ಸುದ್ದಿಗೋಷ್ಠಿಯ ಮುಖಾಂತರ ಈ ವಿಚಾರವನ್ನು ತಿಳಿಸಿದ್ದು ಇದು ಸೂಕ್ಷ್ಮ ವಿಷಯವಾಗಿದ್ದು, ಭಾರತ ಸರ್ಕಾರ ನಿರಂತರವಾಗಿ ಸಾಧ್ಯವಿರುವ ಎಲ್ಲ ಸಹಾಯವನ್ನು ನೀಡುತ್ತಿದೆ. ಅದರಂರೆ, ನಮ್ಮ ಪ್ರಯತ್ನಗಳಿಂದಾಗಿ, ಅವರ ಮರಣದಂಡನೆ ಶಿಕ್ಷೆಯನ್ನು ಮುಂದೂಡಲಾಗಿದ್ದು, ನಾವು ನಿರಂತರವಾಗಿ ಮೇಲ್ವಿಚಾರಣೆ ಮಾಡುತ್ತಿದ್ದೇವೆ; ಇದಕ್ಕಾಗಿ, ಕೆಲವು ಸ್ನೇಹಪರ ದೇಶಗಳೊಂದಿಗೆ ಸಂಪರ್ಕದಲ್ಲಿದ್ದೇವೆ ಎಂದರು. ಮುಂದುವರೆದು, ಈ ವಿಷಯಕ್ಕೆ ಸಂಬಂಧಿಸಿದ ಕೆಲವು ಸುದ್ದಿಗಳು ದಾರಿತಪ್ಪಿಸುವಂತಿವೆ, ಹಾಗಾಗಿ, ದಯವಿಟ್ಟು ನಮ್ಮಿಂದ ಅಧಿಕೃತ ನವೀಕರಣಕ್ಕಾಗಿ ಕಾಯಿರಿ’ ಎಂದು ಹೇಳಿದ್ದಾರೆ.
ಏನಿದು ಪ್ರಕರಣ?
ಪಾಲಕ್ಕಾಡ್ ಜಿಲ್ಲೆಯ ಕೊಲ್ಲಂಗೋಡ್ ಮೂಲದ ನಿಮಿಷಾ ಪ್ರಿಯಾ, ತಮ್ಮ ಪತಿ ಮತ್ತು ಮಗನೊಂದಿಗೆ 2012ರಲ್ಲಿ ಯೆಮೆನ್‌ಗೆ ತೆರಳಿದ್ದರು. ನರ್ಸ್ ಆಗಿದ್ದ ನಿಮಿಷಪ್ರಿಯಾ ಯೆಮನ್ ನಲ್ಲಿಯೇ ಕೆಲಸ ಮುಂದುವರೆಸಿದರು. ಅವರ ಪತಿ ಟಾಮಿಗೆ ಖಾಸಗಿ ಕಂಪೆನಿಯಲ್ಲಿ ಕೆಲಸವೂ ಸಿಕ್ಕಿತು. ಈ ಮಧ್ಯೆ, ಅವರು ಯೆಮೆನ್ ಪ್ರಜೆ ತಲಾಲ್ ಅಬ್ದುಲ್ ಮಹ್ದಿ ಅವರನ್ನು ಭೇಟಿಯಾದರು. ತಲಾಲ್ ಅವರ ಸಹಾಯವನ್ನು ಪಡೆದು ವ್ಯಾಪಾರ ಪಾಲುದಾರಿಕೆಯಲ್ಲಿ ಕ್ಲಿನಿಕ್ ಅನ್ನು ಪ್ರಾರಂಭಿಸಲು ನಿರ್ಧರಿಸಿದರು. ಆ ದೇಶದ ಯಾರೊಬ್ಬರ ಸಹಾಯವಿಲ್ಲದೆ ಯೆಮೆನ್‌ನಲ್ಲಿ ಕ್ಲಿನಿಕ್ ಅನ್ನು ಪ್ರಾರಂಭಿಸುವುದು ಅಸಾಧ್ಯವಾಗಿತ್ತು.
ಕ್ಲಿನಿಕ್ ಅನ್ನು ಪ್ರಾರಂಭಿಸಿದ ನಂತರ, ತಲಾಲ್ ನಿಮಿಷಪ್ರಿಯಾ ತನ್ನ ಹೆಂಡತಿ ಎಂದು ಎಲ್ಲರನ್ನೂ ನಂಬುವಂತೆ ಮಾಡಿದರು ಎಂದು ಆರೋಪಿಸಲಾಗಿದೆ. ಅದಕ್ಕಾಗಿ ಆತ ನಕಲಿ ವಿವಾಹ ಪ್ರಮಾಣಪತ್ರವನ್ನು ಮಾಡಿದ್ದರು. ನಂತರ, ನಿಮಿಷಾರನ್ನು ಬೆದರಿಸುವ ಮೂಲಕ, ಧಾರ್ಮಿಕ ಪದ್ಧತಿಗಳ ಪ್ರಕಾರ ಅವರನ್ನು ವಿವಾಹವಾಗಿದ್ದರು ಎನ್ನಲಾಗಿದೆ.
ತಲಾಲ್, ನಿಮಿಷಾ ಪಾಲುದಾರಿಕೆಯಲ್ಲಿ ಪ್ರಾರಂಭಿಸಿದ ಕ್ಲಿನಿಕ್ ನಿಂದ ಎಲ್ಲಾ ಆದಾಯವನ್ನು ತೆಗೆದುಕೊಳ್ಳಲು ಪ್ರಾರಂಭಿಸಿದ್ದರು. ಅಲ್ಲದೇ ನಿಮಿಷಾರ ಪಾಸ್‌ಪೋರ್ಟ್ ತನ್ನ ವಶಕ್ಕೆ ತೆಗೆದುಕೊಂಡು ಆಕೆಯ ಬಳಿ ಇದ್ದ ಚಿನ್ನವನ್ನು ಮಾರಾಟ ಮಾಡಿದ್ದರು ಎಂದು ಆರೋಪಿಸಲಾಗಿದೆ. ಒಂದು ಹಂತದವರೆಗೆ ಎಲ್ಲವನ್ನೂ ಸಹಿಸಿದ ನಿಮಿಷಾ, ಮುಂದೆ ಸಹಿಸಲಾರದಿದ್ದಾಗ, ಅಲ್ಲಿನ ಅಧಿಕಾರಿಗಳಿಗೆ ದೂರು ನೀಡಿದರು. ನಂತರ ಆತನಿಂದ ತಪ್ಪಿಸಿಕೊಂಡು ಭಾರತಕ್ಕೆ ಮರಳಲು ಮುಂದಾದ ನಿಮಿಷ ಪ್ರಿಯಾ ತಲಾಲ್‌ಹೆ ಸೆಡೆಶನ್ ನೀಡಿದ್ದಳು. ಆದರೆ ಡೋಸ್ ಹೆಚ್ಚಾದ ಕಾರಣ ತಲಾಲ್ ಮೃತಪಟ್ಟಿದ್ದ. ಗಾಬರಿಗೊಂಡ ನಿಮಿಷ ಪ್ರಿಯಾ ಮತ್ತೊಬ್ಬ ಗೆಳೆಯ ಸಹಾಯದಲ್ಲಿ ತಲಾಲ್ ಮೃತದೇಹ ಕತ್ತರಿಸಿ ನೀರಿನ ಟ್ಯಾಂಕ್‌ನಲ್ಲಿ ಹಾಕಲಾಗಿತ್ತು. ಹೀಗಾಗಿ ಈ ಪ್ರಕರಣ ಉದ್ದೇಶಪೂರ್ವಕವಾಗಿ ನಡೆದ ಕೊಲೆ ಎಂದು ಸಾಬೀತಾಗಿತ್ತು.
Comments are closed.