Mangaluru: ಕೆಂಪುಕಲ್ಲು-ಮರಳು ಸಮಸ್ಯೆ: ಕರಾವಳಿಯ ಬಿಜೆಪಿ ನಿಯೋಗದಿಂದ ಸಿಎಂಗೆ ಮನವಿ

Mangaluru: ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಅತೀವ ಸಮಸ್ಯೆಯಾಗಿ ಜನರನ್ನು ಕಾಡುತ್ತಿರುವ ಕೆಂಪುಕಲ್ಲು ಹಾಗೂ ಮರಳನ್ನು ಪೂರೈಸುವ ಬಗ್ಗೆ ಜಿಲ್ಲೆಯ ಸಂಸದರು, ಶಾಸಕರು, ಬಿಜೆಪಿ ಜಿಲ್ಲಾಧ್ಯಕ್ಷರು ಮತ್ತು ಪದಾಧಿಕಾರಿಗಳ ನಿಯೋಗದೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಮನವಿಯನ್ನು ಅರ್ಪಿಸಲಾಯಿತು.

ಮನೆ ಮುಂಗಟ್ಟುಗಳನ್ನು ಕಟ್ಟುತ್ತಿರುವ ಜನರಿಗೆ ಕೆಂಪು ಕಲ್ಲು ಹಾಗೂ ಮರಳು ದೊರಕುವುದು ಅತ್ಯಂತ ದುರ್ಲಭವಾಗಿದೆ, ಹೀಗಾಗಿ ನಿಲುಗಡೆಯಾಗಿರುವ ಈ ವಸ್ತುಗಳನ್ನು ತಕ್ಷಣ ದೊರಕುವಂತೆ ಮಾಡಿ ಮನೆ ಇತ್ಯಾದಿಗಳ ರಚನೆಗೆ ಸಹಕರಿಸಬೇಕೆಂದು ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿಕೊಂಡರು. ನಿಯೋಗದಲ್ಲಿ ಸಂಸದ ಬ್ರಿಜೇಶ್ ಚೌಟ, ಮಂಗಳೂರು ದಕ್ಷಿಣದ ಶಾಸಕ ವೇದವ್ಯಾಸ ಕಾಮತ್, ಮುಲ್ಕಿ ಮೂಡುಬಿದಿರೆ ಕ್ಷೇತ್ರದ ಶಾಸಕ ಉಮಾನಾಥ ಕೋಟ್ಯಾನ್, ಬೆಳ್ತಂಗಡಿ ಕ್ಷೇತ್ರದ ಶಾಸಕ ಹರೀಶ್ ಪೂಂಜ ಹಾಗೂ ಇತರರು ಹಾಜರಿದ್ದರು.
ಇದನ್ನೂ ಓದಿ: Crime: ತಾಯಿಯನ್ನು ಕೊಂದು ಸುಟ್ಟು ಹಾಕಿ ಪಕ್ಕದಲ್ಲೇ ಮಲಗಿದ ಪುತ್ರ!!
Comments are closed.