Dharmasthala : ಧರ್ಮಸ್ಥಳ ಪ್ರಕರಣ – ದೂರು ನೀಡಿದ ಅನಾಮಿಕ ವ್ಯಕ್ತಿಯ ಗುರುತು ರಕ್ಷಣೆಗೆ ‘AI ನಿರೋಧಕ’ ಮಾಸ್ಕ್ ಬಳಕೆ !!

Dharmasthala : ಧರ್ಮಸ್ಥಳದಲ್ಲಿ ಶವ ಹೂತಿಟ್ಟ ಪ್ರಕರಣ ದಿನದಿಂದ ದಿನಕ್ಕೆ ಹೊಸ ತಿರುವಗಳನ್ನು ಪಡೆದುಕೊಳ್ಳುತ್ತಿದೆ. ಈಗಾಗಲೇ ಮೂರು ದಿನದ ತನಿಖೆ ಮುಕ್ತಾಯಗೊಂಡಿದ್ದು, ಮುಂದಿನ ತನಿಖೆ ಕೂಡ ವೇಗವನ್ನು ಪಡೆದುಕೊಳ್ಳುತ್ತಿದೆ. ಇಂದು ಎಸ್ ಐ ಟಿ ತಂಡವು ಧರ್ಮಸ್ಥಳದ ನೇತ್ರಾವತಿ ಕಾಡಿಗೆ ತೆರಳಿ ದೂರುದಾರನಿಂದ ಸುಮಾರು 15 ಸ್ಥಳಗಳನ್ನು ಗುರುತಿಸಿಕೊಂಡಿದೆ.

ಈ ಪ್ರಕರಣದ ಕುರಿತು ಪೊಲೀಸರಿಗೆ ಹಾಗೂ ವಕೀಲರಿಗೆ ದೂರು ನೀಡಿದ ಅನಾಮಿಕ ವ್ಯಕ್ತಿ ಇದುವರೆಗೂ ಯಾರು ಎಂದು ತಿಳಿದಿಲ್ಲ. ವಿಚಾರಣೆ ಹಾಗೂ ನ್ಯಾಯಾಲಯಕ್ಕೆ ಹಾಜರಾಗುವ ಸಂದರ್ಭದಲ್ಲಿಯೂ ದೂರುದಾರ ವ್ಯಕ್ತಿ ಸಂಪೂರ್ಣ ಮಸಕುಧಾರಿಯಾಗಿದ್ದ. ಹೀಗಾಗಿ ಆತ ಇನ್ನೂ ಅನಾಮಿಕನಾಗಿ ಉಳಿದುಕೊಂಡಿದ್ದಾನೆ. ಆದರೆ ಇಂದು ನೇತ್ರಾವತಿ ಸ್ನಾನಘಟ್ಟಕ್ಕೆ ಬಂದು ಸ್ಥಳ ಮಹಜರು ನಡೆಸುವ ವೇಳೆ ಆತ ವಿಶೇಷವಾದ ಮಾಸ್ಕ್ ಧರಿಸಿದ್ದು ಎಲ್ಲರ ಗಮನ ಸೆಳೆದಿದೆ. ಕಾರಣ ಅದು ಬಿಳಿ ಗೆರೆಗಳು ಮತ್ತು ಕೇಸರಿ ಬಣ್ಣ ಹೊಂದುತ್ತು. ಯಾಕೆ ಹೀಗೆಂದರೆ ಆತನ ಗುರುತನ್ನು ರಹಸ್ಯವಾಗಿಡಲು ಎಸ್ಐಟಿ ಒಂದು ವಿಶಿಷ್ಟ ತಂತ್ರಜ್ಞಾನ ಆಧಾರಿತ ಮಾಸ್ಕ್ ಅನ್ನು ಬಳಸಿದೆ.
ಹೌದು, ಸಾಮಾನ್ಯ ಮಾಸ್ಕ್ಗಳನ್ನು ಬಳಸಿದಾಗ, ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನದ ಸಹಾಯದಿಂದ ಮಾಸ್ಕ್ ಹಾಕಿಕೊಂಡಿರುವ ವ್ಯಕ್ತಿಯ ಮುಖವನ್ನು ಗುರುತಿಸಲು ಸಾಧ್ಯವಿದೆ. ಕೆಲವು ಎಐಗಳು ಸಂಪೂರ್ಣವಾಗಿ ಪತ್ತೆಹಚ್ಚಲು ಸಾಧ್ಯವಾಗದಿದ್ದರೂ, ಸಾಕಷ್ಟು ಹೋಲಿಕೆಯನ್ನು ನೀಡಬಲ್ಲವು. ಇದನ್ನು ತಡೆಯುವ ಉದ್ದೇಶದಿಂದ ಪೊಲೀಸರು ಈ ವಿಶೇಷ ಮಾಸ್ಕ್ ಅನ್ನು ಬಳಸಿದ್ದಾರೆ ಎಂದು ಹೇಳಲಾಗಿದೆ.
ಬಿಳಿ ಗೆರೆಗಳು ಮತ್ತು ಕೇಸರಿ ಬಣ್ಣವನ್ನು ಹೊಂದಿರುವ ಈ ಮಾಸ್ಕ್ಗಳನ್ನು ಎಐಗಳು ಸುಲಭವಾಗಿ ಓದಲು ಅಥವಾ ಡಿಕೋಡ್ ಮಾಡಲು ಸಾಧ್ಯವಾಗುವುದಿಲ್ಲ. ಇದರಿಂದ ಮಾಸ್ಕ್ ಹಾಕಿಕೊಂಡಿರುವ ವ್ಯಕ್ತಿಯ ಮುಖವನ್ನು ಎಐ ಸಹಾಯದಿಂದ ಗುರುತಿಸುವುದು ಅಸಾಧ್ಯವಾಗುತ್ತದೆ. ಈ ಮೂಲಕ ಎಸ್ಐಟಿ ಅನಾಮಿಕ ವ್ಯಕ್ತಿಯ ಗುರುತನ್ನು ಸಾರ್ವಜನಿಕವಾಗಿ ಬಹಿರಂಗವಾಗದಂತೆ ಸಂಪೂರ್ಣವಾಗಿ ರಹಸ್ಯವಾಗಿಡಲು ಈ ಮಾಸ್ಕ್ ಅಳವಡಿಸಿದೆ ಎಂಬುದಾಗಿ ವರದಿಯಾಗಿದೆ.
Comments are closed.