Kasaragodu: ಕಾಸರಗೋಡು: ವಿವಾಹವಾಗುವುದಾಗಿ ನಂಬಿಸಿ ಅತ್ಯಾಚಾರ: ಖ್ಯಾತ ಯೂಟ್ಯೂಬರ್ ಬಂಧನ!


Kasaragodu: ಅಪ್ರಾಪ್ತ ಬಾಲಕಿಯನ್ನು ವಿವಾಹವಾಗುವುದಾಗಿ ಭರವಸೆ ನೀಡಿ ಅತ್ಯಾಚಾರ ಎಸಗಿದ ಆರೋಪದ ಮೇರೆಗೆ ಕಾಸರಗೋಡಿನ ಯೂಟ್ಯೂಬರ್ ನೋರ್ವನನ್ನು ಕೋಝಿಕ್ಕೋಡ್ ಕೊಯಿಲಾಂಡಿ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ಕೊಡಿಯಮ್ಮೆ ಚೆಪ್ಪಿನಡ್ಕದ ಕಿಂಗ್ ಅಲಿಯಾಸ್ ಸಾಲು ಮೊಹಮ್ಮದ್ ಸಾಲಿ (35) ಎಂದು ಗುರುತಿಸಲಾಗಿದೆ. ಆರೋಪಿಯು ವಿದೇಶದಿಂದ ಹಿಂದಿರುಗುತ್ತಿದ್ದಾಗ ಮಂಗಳೂರು ವಿಮಾನ ನಿಲ್ದಾಣದಲ್ಲಿ ಪೊಲೀಸರು ಬಂಧಿಸಿದ್ದಾರೆ. ಸುಮಾರು ಏಳು ವರ್ಷಗಳಿಂದ ಸಾಮಾಜಿಕ ಜಾಲತಾಣದಲ್ಲಿ ಸಾಲು ಕಿಂಗ್ ಮೀಡಿಯ, ಸಾಲು ಕಿಂಗ್ ಬ್ಲಾಗ್ಸ್, ಸಾಲು ಕಿಂಗ್ ಫ್ಯಾಮಿಲಿ ಮೊದಲಾದ ಹೆಸರಿನಲ್ಲಿ ಸಕ್ರಿಯನಾಗಿದ್ದನು. ಇನ್ನು 2016 ರಲ್ಲಿ ಈತ ವಿವಾಹವಾಗಿದ್ದು, ಮೂವರು ಮಕ್ಕಳು ಕೂಡ ಇದ್ದಾರೆ.
ಈ ನಡುವೆ ಪತ್ನಿಯೊಂದಿಗೆ ವಿರಸ ಉಂಟಾಗಿದ್ದು, ಹದಿನೈದರ ಬಾಲಕಿ ಜೊತೆ ಈತ ಸಂಬಂಧ ಬೆಳೆಸಿದ್ದನು. ಬಾಲಕಿಯು ಇನ್ಸ್ಟಾಗ್ರಾಂ, ಸ್ನಾಪ್ ಚಾಟ್ ಸಾಮಾಜಿಕ ಜಾಲತಾಣ ಮೂಲಕ ಪರಿಚಯವಾಗಿದ್ದಳು. ಬಳಿಕ ವಿವಾಹವಾಗುವ ಭರವಸೆ ಅತ್ಯಾಚಾರ ಎಸಗಿದ್ದನು ಎನ್ನಲಾಗಿದೆ. ಇನ್ನು ಘಟನೆಗೆ ಸಂಬಂಧಪಟ್ಟಂತೆ ಪೊಲೀಸರು ಪೋಕ್ಸೋ ಪ್ರಕರಣ ದಾಖಲಿಸಿಕೊಳ್ಳುತ್ತಿದ್ದಂತೆ ಆರೋಪಿಯು ವಿದೇಶಕ್ಕೆ ಪಲಾಯನ ಗೈದಿದ್ದನು.
Comments are closed.