Subramanya : ನಾಪತ್ತೆಯಾಗಿದ್ದ ಆಂಬ್ಯುಲೆನ್ಸ್ ಚಾಲಕನ ಮೃತದೇಹ ಪತ್ತೆ

Subramanya : ಕಳೆದ ಮೂರ್ನಾಲ್ಕು ದಿನಗಳ ಹಿಂದೆ ನಾಪತ್ತೆಯಾಗಿದ್ದ ಸುಬ್ರಹ್ಮಣ್ಯ ಸರ್ಕಾರಿ ಆಸ್ಪತ್ರೆಯ ಅಂಬ್ಯುಲೆನ್ಸ್ ಚಾಲಕ ಹೊನ್ನಪ್ಪ ಗೌಡ ಅವರ ಮೃತದೇಹವು ಇಂದು ಪತ್ತೆಯಾಗಿರುವ ಕುರಿತು ವರದಿಯಾಗಿದೆ.

ಸತತ ಮೂರು ದಿನಗಳ ಕಾರ್ಯಾಚರಣೆ ಬಳಿಕ ಇಂದು ಮತ್ತೆ ಕಾರ್ಯಾಚರಣೆ ಆರಂಭಿಸಿದ ಈಶ್ವರ್ ಮಲ್ಪೆ ಹಾಗೂ ರಕ್ಷಣಾ ಸಿಬ್ಬಂದಿಗೆ ಯಾವುದೇ ಸುಳಿವು ಸಿಕ್ಕಿರಲಿಲ್ಲ. ನಿರಂತರ ಕಾರ್ಯಾಚರಣೆ ನಡೆದಿದ್ದು, 4ನೇ ದಿನವಾದ ಶುಕ್ರವಾರ ಕುಮಾರಧಾರ ಸ್ನಾನಘಟ್ಟದಿಂದ ಸುಮಾರು ಕಿ.ಮೀ. ಕೆಳಭಾಗದಲ್ಲಿ ಹೊನ್ನಪ್ಪ ಅವರ ಮೃತದೇಹ ಪತ್ತೆಯಾಗಿದೆ.
ಅವರ ಮೃತದೇಹವು ಕುಮಾರಧಾರ ನದಿ ಸೇತುವೆಯಿಂದ ಸುಮಾರು ಮೂರು ಕಿ.ಮೀ.ದೂರದಲ್ಲಿ ಪತ್ತೆಯಾಗಿರುವುದಾಗಿ ತಿಳಿದುಬಂದಿದೆ. ಕಾರ್ಯಾಚರಣೆಗೆ ಗ್ರಾಮ ಪಂಚಾಯತ್ ಹಾಗೂ ಕುಕ್ಕೇ ಸುಬ್ರಹ್ಮಣ್ಯ ದೇವಾಲಯದ ಆಡಳಿತ ಮಂಡಳಿ ಸಂಪೂರ್ಣ ಸಹಕಾರ ನೀಡಿತ್ತು.
ಇದನ್ನೂ ಓದಿ: Bihar Election: ಬಿಹಾರ ಚುನಾವಣೆಗೆ ಎನ್‌ಡಿಎಯ ಸಂಭಾವ್ಯ ಸೀಟು ಹಂಚಿಕೆ
Comments are closed.