Bantwala: ಬಂಟ್ವಾಳ: ರೈಲಿನಡಿಗೆ ಬಿದ್ದು ಯುವಕ ಆತ್ಮಹತ್ಯೆ!

Share the Article

Bantwala: ಬಿ.ಸಿ.ರೋಡಿನ ರೈಲ್ವೇ ನಿಲ್ದಾಣದ ಬಳಿ ಇಂದು ಜುಲೈ 24, ಗುರುವಾರ ಬೆಳಗ್ಗೆ 11 ಗಂಟೆಯ ಸುಮಾರಿಗೆ ಯುವಕನೋರ್ವ ಚಲಿಸುತ್ತಿದ್ದ ರೈಲಿನಡಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.

ಯುವಕನ ವಯಸ್ಸು ಸುಮಾರು 30ರಿಂದ 35ರ ನಡುವೆ ಇರಬಹುದೆಂದು ಅಂದಾಜಿಸಲಾಗಿದ್ದು, ಅತನ ಪರಿಚಯ ಇನ್ನೂ ದೃಢವಾಗಿಲ್ಲ ಎಂದು ರೈಲ್ವೆ ಪೊಲೀಸರು ತಿಳಿಸಿದ್ದಾರೆ.

ಘಟನೆಯಲ್ಲಿ ದೇಹದ ಕೆಳಭಾಗ ಸಂಪೂರ್ಣವಾಗಿ ನಜ್ಜುಗುಜ್ಜಾಗಿದ್ದರೂ, ಮುಖದ ಭಾಗಕ್ಕೆ ಏನು ಆಗಿಲ್ಲ. ಸ್ಥಳಕ್ಕೆ ರೈಲ್ವೆ ಪೊಲೀಸರು ಭೇಟಿ ನೀಡಿ ತನಿಖೆ ಮುಂದುವರಿಸಿದ್ದಾರೆ.

ಇದನ್ನೂ ಓದಿ: Paypal: ಇನ್ಮುಂದೆ ‘ಪೇಪಾಲ್’ ಮೂಲಕ ಯುಪಿಐ ಬಳಸಿ ವಿದೇಶಗಳಲ್ಲಿ ಶಾಪಿಂಗ್!

Comments are closed.