KGF Babu: ಬಚ್ಚನ್‌ ಬಳಿ ಖರೀದಿಸಿದ್ದ ಕಾರಿಗೆ ಕೊನೆಗೂ ಟ್ಯಾಕ್ಸ್ ಕಟ್ಟಿದ ಬಾಬು !! ಅಬ್ಬಬ್ಬಾ.. ಎಷ್ಟು ಗೊತ್ತಾ?

Share the Article

KGF Babu: ಐಷಾರಾಮಿ ಕಾರುಗಳಿಗೆ ರಾಜ್ಯದಲ್ಲಿ ಮೋಟಾರು ವಾಹನ ತೆರಿಗೆ ಪಾವತಿಸದ ಕಾರಣಕ್ಕಾಗಿ ಉದ್ಯಮಿ ಕೆಜಿಎಫ್‌ ಬಾಬು ಅವರ ವಸಂತನಗರ ನಿವಾಸದ ಮೇಲೆ ಜಂಟಿ ಸಾರಿಗೆ ಆಯುಕ್ತೆ ಶೋಭಾ ನೇತೃತ್ವದ ಸಾರಿಗೆ ಅಧಿಕಾರಿಗಳ ತಂಡ ದಾಳಿ ನಡೆಸಿದೆ. ಅಲ್ಲದೆ ಇವರಿಂದ ಬರೋಬ್ಬರಿ ₹38.36 ಲಕ್ಷ ತೆರಿಗೆ ವಸೂಲಿ ಮಾಡಿದ್ದಾರೆ.

ಹೌದು, ಮಹಾರಾಷ್ಟ್ರದಲ್ಲಿ ನೋಂದಣಿಯಾದ ಕಾರನ್ನು ರಸ್ತೆ ಸಾರಿಗೆ ತೆರಿಗೆ ಪಾವತಿಸದೇ ಕರ್ನಾಟಕದಲ್ಲಿ ಬಳಸುತ್ತಿದ್ದ ಉದ್ಯಮಿ ಕೆಜಿಎಫ್ ಬಾಬು ಅವರಿಗೆ ಬೆಳ್ಳಂಬೆಳಗ್ಗೆ ಪ್ರಾದೇಶಿಕ ಸಾರಿಗೆ ಇಲಾಖೆ (RTO) ಅಧಿಕಾರಿಗಳು ಬಿಸಿ ಮುಟ್ಟಿಸಿದ್ದರು. ಇದೀಗ ಕೆಜಿಎಫ್ ಬಾಬು ತೆರಿಗೆ ಕಟ್ಟಿದ್ದಾರೆ.

ನಡೆಸಿದ ಕೆಜಿಎಫ್‌ ಬಾಬು, ಮಹಾರಾಷ್ಟ್ರದಲ್ಲಿ ತೆರಿಗೆ ಪಾವತಿಸಿಯೇ ಇಲ್ಲಿಗೆ ತರಲಾಗಿದೆ ಎಂದು ತಿಳಿಸಿದ್ದಾರೆ. ಆಗ ಸಾರಿಗೆ ಅಧಿಕಾರಿಗಳು, ಹೊರರಾಜ್ಯಗಳಲ್ಲಿ ತೆರಿಗೆ ಪಾವತಿಸಿದ್ದರೂ, 1 ವರ್ಷಗಳಿಗಿಂತ ಹೆಚ್ಚಿನ ಅವಧಿ ಆ ವಾಹನ ಇಲ್ಲಿ ಸಂಚರಿಸುತ್ತಿದ್ದರೆ ಅದಕ್ಕೆ ರಾಜ್ಯದ ತೆರಿಗೆ ಪಾವತಿಸಬೇಕು ಎಂದಿದ್ದಾರೆ. ಅದಕ್ಕೊಪ್ಪಿದ ಕೆಜಿಎಫ್‌ ಬಾಬು, ಎಂಎಚ್ 02 ಬಿಬಿ 0002 ಸಂಖ್ಯೆಯ ರೋಲ್ಸ್‌ರಾಯ್ಸ್‌ ಕಾರಿಗೆ 19.83 ಲಕ್ಷ ರು. ಮತ್ತು ಎಂಎಚ್‌ 11 ಎಎಕ್ಸ್‌ 0001 ಸಂಖ್ಯೆಯ ರೋಲ್ಸ್‌ರಾಯ್ಸ್‌ ಕಾರಿಗೆ 18.53 ಲಕ್ಷ ರು. ತೆರಿಗೆ ಪಾವತಿಸಿದ್ದಾರೆ.

ಅಂದಹಾಗೆ ಬಚನ್ ಬಳಿ ಖರೀದಿಸಿದ ಕಾರಿಗೆ 18 ಲಕ್ಷದ 53 ಸಾವಿರ ರೂ ಮತ್ತು ಆಮೀರ್ ಖಾನ್ ಬಳಿ ಖರೀದಿಸಿದ ಕಾರಿಗೆ 19.73 ಲಕ್ಷ ರೂ. ಹಣವನ್ನು ಆರ್ಟಿಒ ಅಧಿಕಾರಿಗಳಿಗೆ ಡಿಡಿ ಮೂಲಕ ಟ್ಯಾಕ್ಸ್ ಪಾವತಿಸಿದ್ದಾರೆ.

ಇದನ್ನೂ ಓದಿ:Gadaga: ಯುವತಿಯಿಂದಲೇ ಲವ್ ಜಿಹಾದ್ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ – ಯುವಕನ ವಿರುದ್ಧ ಬಿತ್ತು `ಪೋಕ್ಸೋ’ ಕೇಸ್!

Comments are closed.