Biklu Shiva case: ಬಿಕ್ಲು ಶಿವ ಕೊಲೆ ಆರೋಪಿಗೆ ರಾಜಕಾರಣಿ ಅಷ್ಟೆ ಅಲ್ಲ ಸಿನಿಮಾ ನಂಟು – ಆರೋಪಿಯಿಂದ ಡಿಂಪಲ್ ಕ್ವೀನ್ ಗೆ ಚಿನ್ನಾಭರಣ ಗಿಫ್ಟ್! ನಿಜಾನಾ?

Biklu Shiva case: ರೌಡಿಶೀಟರ್ ಬಿಕ್ಲು ಶಿವನ ಬ್ರೂಟಲ್ ಮರ್ಡರ್ ಪ್ರಕರಣ ಆರೋಪಿ ಜಗ್ಗನಿಗೆ ರಾಜಕಾರಣಿ ಅಷ್ಟೆ ಅಲ್ಲ ಸಿನಿಮಾ ನಂಟು ಇದೆ ಎಂಬ ಸುದ್ದಿ ಇದೀಗ ಹರಿದಾಡುತ್ತಿದೆ. ಒಂದು ವರ್ಷದ ಹಿಂದೆ ನಟಿ ಡಿಂಪಲ್ ಕ್ವೀನ್ ರಚಿತಾ ರಾಮ್ಗೆ ಕೊಲೆ ಆರೋಪಿ ಜಗ್ಗ ಚಿನ್ನಾಭರಣ ಗಿಫ್ಟ್ ನೀಡಿರೋ ಫೋಟೋ ಇದೀಗ ವೈರಲ್ ಆಗುತ್ತಿದೆ. ಆರೋಪಿ ಜಗ್ಗ ಅಲಿಯಾಸ್ ಜಗದೀಶ್ ಸಾಮಾನ್ಯ ವ್ಯಕ್ತಿಯಲ್ಲ. ಜಗ್ಗ ಫೈನಾಶ್ಷಿಯಲಿ, ಪೊಲಿಟಿಕಲ್ ನಲ್ಲಿ ಸ್ಟ್ರಾಂಗ್ ಪರ್ಸನ್ ಎಂದು ಹೇಳಲಾಗುತ್ತಿದೆ ಎಂದು ವರದಿಯಾಗಿದೆ.


ಜಗ್ಗ ನಟಿ ರಚಿತಾ ರಾಮ್ ಗೆ ರೇಷ್ಮೆ ಸೀರೆ, ಚಿನ್ನದ ಹಾರ, ಓಲೆ ಗಿಫ್ಟ್ ಕೊಟ್ಟಿರೋ ಫೋಟೋಸ್ ಇದೀಗ ಲಭ್ಯವಾಗಿದ್ದು, ರಚಿತಾ ರಾಮ್ ಜೊತೆಗೆ ರವಿಚಂದ್ರನ್ ಕೂಡ ಫೋಟೋದಲ್ಲಿ ಫೋಸ್ ಕೊಟ್ಟಿರೋದು ಕಾಣಬಹುದು. ಅಲ್ಲದೆ ಸುದೀಪ್ ಜೊತೆಗೆ ಜಗ್ಗ ಆಪ್ತವಾಗಿರೋ ಫೋಟೋ ಕೂಡ ಸಿಕ್ಕಿದೆ ಎಂದು ವರದಿಯಾಗಿದೆ.
ಜಗ್ಗ ಕೆಲ ಸಿನಿಮಾಗಳಿಗೆ ಹಣ ಹೂಡಿಕೆ ಮಾಡಿರೋ ಮಾಹಿತಿಯಿದೆ. ಪ್ರಕರಣಕ್ಕೂ ಈ ಫೋಟೋಗಳಿಗೆ ಸಂಬಂಧ ಇಲ್ಲದಿದ್ರು. ತಲೆ ಮರೆಸಿಕೊಂಡಿರೋ ಜಗ್ಗನ ನೆಟ್ ವರ್ಕ್ಗೆ ಇದು ಸಾಕ್ಷಿ. ಅಲ್ಲದೆ ಜಗ್ಗನ ಬೆನ್ನಿಗೆ ಶಾಸಕ ಬೈರತಿ ಬಸವರಾಜ್ ಶ್ರೀರಕ್ಷೆ ಇದೆ, ಜಗ್ಗನ ಜೊತೆ ಶಾಸಕ ಕೂಡ ಈ ಕೊಲೆ ಕೇಸ್ ನ ಆರೋಪಿಯಾಗಿದ್ದು, ಜಗ್ಗ ಕೇವಲ ರಿಯಲ್ ಎಸ್ಟೇಟ್, ಪೊಲಿಟಿಕ್ಸ್ ಅಷ್ಟರಲ್ಲೆ ಇಲ್ಲ. ಮಾಜಿ ರೌಡಿ ಶೀಟರ್ ಆಗಿರೋ ಜಗ್ಗನಿಗೆ ಸಿನಿಮಾ ನಂಟು ಕೂಡ ಇದೆ ಎಂಬ ಮಾಹಿತಿ ಇದೀಗ ಹೊರ ಬಿದ್ದಿದೆ. ಈ ಬಗ್ಗೆ ಸತ್ಯಾಸತ್ಯತೆ ತನಿಖೆ ನಂತರವಷ್ಟೇ ತಿಳಿಯ ಬೇಕಿದೆ..
Comments are closed.