Anchor Anushree : ಅನುಶ್ರೀ ಮದುವೆಯಾಗೋ ಹುಡುಗನಿಗೆ ಅಪಘಾತ?

Share the Article

Anchor Anushree: ಮಂಗಳೂರು ಮೂಲದ ಅನುಶ್ರೀ (Anushree) ಅವರು ಮಾಡುವ ಆ್ಯಂಕರಿಂಗ್ ಗೆ ಅದೆಷ್ಟೋ ಅಭಿಮಾನಿಗಳಿದ್ದಾರೆ. ಇದೀಗ ಆಗಸ್ಟ್ 28ಕ್ಕೆ ಅನುಶ್ರೀ ಮದುವೆ ನಡೆಯಲಿದೆ ಎಂಬುದಾಗಿ ವರದಿ ಆಗಿದೆ. ಇದರೊಂದಿಗೆ ಹುಡುಗ ಯಾರೆಂಬುದು ಕೂಡ ರಿವಿಲ್ ಆಗಿದ್ದು ಅನೇಕರ ಕುತೂಹಲಕ್ಕೆ ಬ್ರೇಕ್ ಬಿದ್ದಿದೆ. ಆದರೆ ಈ ಬೆನ್ನಲ್ಲೇ ಒಂದು ಶಾಪಿಂಗ್ ಸುದ್ದಿ ಎದುರಾಗಿದ್ದು ಅನುಶ್ರೀ ಮದುವೆಯಾಗುವ ಹುಡುಗನಿಗೆ ಅಪಘಾತ ಆಗಿದೆ ಎನ್ನಲಾಗುತ್ತಿದೆ.

ಆಂಕರ್ ಅನುಶ್ರೀ ಅವರು ಮತ್ತು ಅನುಶ್ರೀ ಅವರ ಭಾವಿ ಗಂಡ ಎನ್ನಲಾದ ರೋಷನ್ ಅವರು ಒಂದೇ ವಿಡಿಯೋದಲ್ಲಿ ಕಾಣಿಸಿಕೊಂಡಿದ್ದಾರೆ. ಅವರಿಬ್ಬರು ಅನುಶ್ರೀ ಅವರ ಸಹೋದರನ ಹೋಟೆಲ್ ಉದ್ಘಾಟನೆ ಸಮಯದಲ್ಲಿ ಜೊತೆಯಾಗಿದ್ದರೂ ಎನ್ನಲಾಗುತ್ತಿದೆ. ಆದರೆ ಇದೇ ವಿಡಿಯೋದಲ್ಲಿ ರೋಷನ್ ಅವರು ಕೈಗೆ ಬ್ಯಾಂಡೇಜ್ ಹಾಕಿಕೊಂಡಿರುವುದು ದೊಡ್ಡ ಚರ್ಚೆಗೆ ಕಾರಣ ಆಗಿದೆ.

ಒಂದು ಕಡೆ ಅವರಿಗೆ ಅಪಘಾತ ಆಗಿದೆಯಾ? ಅನ್ನೋ ಆತಂಕದಲ್ಲಿ ಇದೀಗ ಸೋಷಿಯಲ್ ಮೀಡಿಯಾ ಬಳಕೆದಾರರು ಚರ್ಚೆ ಮಾಡುತ್ತಿದ್ದರೆ, ಇನ್ನೊಂದು ಕಡೆ ಇದು ಹಳೆಯ ವಿಡಿಯೋ ಅಂತಹದ್ದು ಏನು ಆಗಿಲ್ಲ ಅನ್ನೋ ಮಾತುಗಳು ಕೂಡ ಕೇಳಿ ಬರುತ್ತಿವೆ. ಆದರೆ ಈ ಬಗ್ಗೆ ಆಂಕರ್ ಅನುಶ್ರೀ ಅವರೇ ಆಗಲಿ ಅಥವಾ ಅವರ ಕಡೆಯವರೇ ಆಗಲಿ ಅಧಿಕೃತವಾಗಿ ಏನನ್ನೂ ಹೇಳಿಲ್ಲ, ಹೀಗಾಗಿ ಕುತೂಹಲ ಡಬಲ್ ಆಗಿದೆ.

Comments are closed.