Adhar: ಆಧಾರ್ ಕಾರ್ಡ್ ಗೂ ಇದೆ ಎಕ್ಸ್‌ಪೈರಿ ಡೇಟ್ – ಬೇಗ ನಿಮ್ಮ ಆಧಾರ್ ಮಾನ್ಯತೆ ಪರಿಶೀಲಿಕೊಳ್ಳಿ!

Share the Article

Adhar: ಡ್ರೈವಿಂಗ್ ಲೈಸೆನ್ಸ್, ಪಾಸ್ಪೋರ್ಟ್ ಸೇರಿದಂತೆ ಇತರ ಕೆಲವು ದಾಖಲೆಗಳಿಗೆ ಎಕ್ಸ್ಪೈರಿ ಡೇಟ್ ಇರುವುದನ್ನು ಕಾಣಬಹುದು. ಆದರೆ ಆಧಾರ್ ಕಾರ್ಡ್ ಗೂ ಕೂಡ ಎಕ್ಸ್‌ಪೈರಿ ಡೇಟ್ ಇದೆ ಅನ್ನೋದು ನಿಮಗೆ ಗೊತ್ತಾ? ಇಲ್ಲಿದೆ ನೋಡಿ ಡೀಟೇಲ್ಸ್.

ಹೌದು, ಚಾಲನಾ ಪರವಾನಗಿ ಅಥವಾ ಪಾಸ್‌ಪೋರ್ಟ್‌ನಂತೆ ಆಧಾರ್ ಕಾರ್ಡ್ ಕೂಡ ಅವಧಿ ಮುಗಿಯುತ್ತದೆ. ಆದರೆ ಇದು ಕೊಂಚ ವಿಭಿನ್ನ ಒಮ್ಮೆ ಆಧಾರ್ ಕಾರ್ಡ್ ಮಾಡಿದ ನಂತರ ಅದು ಇಡೀ ಜೀವನಕ್ಕೆ ಮಾನ್ಯವಾಗಿರುತ್ತದೆ. ಆದಾಗ್ಯೂ ನೀವು ಆಧಾರ್ ಕಾರ್ಡ್‌ನಲ್ಲಿರುವ ವಿಳಾಸ ಮತ್ತು ಹೆಸರು ಇತ್ಯಾದಿ ಮಾಹಿತಿಯನ್ನು ಬದಲಾಯಿಸಬಹುದು ಆದರೆ ಆಧಾರ್ ಸಂಖ್ಯೆ ಮತ್ತು ಕಾರ್ಡ್ ಒಂದೇ ಆಗಿರುತ್ತದೆ.

ಹೀಗಾಗಿ ನೀವು ಆಧಾರ್ ಕಾರ್ಡ್‌ಗೆ ಸಂಬಂಧಿಸಿದ ಸೇವೆಯನ್ನು ಪಡೆಯಲು ನೀವು ಸರ್ಕಾರಿ ವೆಬ್‌ಸೈಟ್ UIDAI ಗೆ ಭೇಟಿ ನೀಡಬಹುದು. ವೆಬ್‌ಸೈಟ್‌ಗೆ ಭೇಟಿ ನೀಡುವ ಮೂಲಕ ನೀವು ಆಧಾರ್ ಕಾರ್ಡ್ ಅನ್ನು ಸಹ ನವೀಕರಿಸಬಹುದು. ಇದು ಜನರಿಗೆ ತುಂಬಾ ಉಪಯುಕ್ತವಾಗಿರುವುದರೊಂದಿಗೆ ಆಧಾರ್ ಕಾರ್ಡ್‌ನ ಸಿಂಧುತ್ವವನ್ನು ಪರಿಶೀಲಿಸಲು ವೆಬ್‌ಸೈಟ್‌ನಲ್ಲಿ ಒಂದು ಆಯ್ಕೆಯೂ ಇದೆ.

ಪರಿಶೀಲಿಸುವುದು ಹೇಗೆ?
UIDAI ವೆಬ್ಸೈಟ್ಗೆ ಭೇಟಿ ನೀಡಿ ನೀವು ಆಧಾರ್ ಕಾರ್ಡ್ ಸಂಖ್ಯೆಯನ್ನು ನಮೂದಿಸಿ. ಆ ಸಂಖ್ಯೆಯ ಆಧಾರ್ ಕಾರ್ಡ್ ಅಸ್ತಿತ್ವದಲ್ಲಿದೆಯೇ ಅಥವಾ ಇಲ್ಲವೇ ಎಂಬುದನ್ನು ಪರಿಶೀಲಿಸಬಹುದು. ಆಧಾರ್ ಸಂಖ್ಯೆಯ ಜೊತೆಗೆ ಪರದೆಯ ಮೇಲೆ ಅಸ್ತಿತ್ವದಲ್ಲಿದೆ ಎಂದು ಕಾಣಿಸಿಕೊಳ್ಳುತ್ತದೆ.

Comments are closed.