Suicide: ವಿಷ ಸೇವಿಸಿ ಒಂದೇ ಕುಟುಂಬದ ಐವರು ಆತ್ಮಹ*ತ್ಯೆ

Suicide: ಒಂದೇ ಕುಟುಂಬದ ಐವರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಅಹಮದಾಬಾದ್‌ನ ಬಾವ್ಲಾದಲ್ಲಿ ನಡೆದಿದೆ.

ವಿಪುಲ್ ಕಾಂಜಿ ವಾಘೇಲಾ (34), ಪತ್ನಿ ಸೋನಾಲ್ (26), ಇಬ್ಬರು ಹೆಣ್ಣು ಮಕ್ಕಳಾದ (11 ಮತ್ತು 05) ಮತ್ತು ಒಬ್ಬ ಮಗ (08) ಸಾವಿಗೀಡಾದವರು.
ಬಾಡಿಗೆ ಮನೆಯಲ್ಲಿ ವಾಸವಿದ್ದ ಈ ಕುಟುಂಬ ವಿಷಪೂರಿತ ದ್ರವ ಸೇವನೆ ಮಾಡಿ ಆತ್ಮಹತ್ಯೆ ಮಾಡಿಕೊಂಡಿದೆ ಎಂದು ಭಾನುವಾರ (ಜು.20) ಪೊಲೀಸರು ತಿಳಿಸಿದ್ದಾರೆ.
ಮೃತರು ಮೂಲತಃ ಧೋಲ್ಕಾದವರು ಎನ್ನಲಾಗಿದೆ. ಆತ್ಮಹತ್ಯೆ ಮಾಡಿಕೊಳ್ಳಲು ನಿಖರ ಕಾರಣ ತಿಳಿದು ಬಂದಿಲ್ಲ. ಹಣಕಾಸು ಬಿಕ್ಕಟ್ಟಿನ ಆಯಾಮದಲ್ಲೂ ತನಿಖೆ ಮಾಡಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Comments are closed.