Udupi: ನೇಜಾರಿನಲ್ಲಿ ನಾಲ್ವರ ಕೊಲೆ ಪ್ರಕರಣ: ಜು.31 ಕ್ಕೆ ವಿಚಾರಣೆ ಮುಂದೂಡಿಕೆ

Share the Article

Udupi: ನೇಜಾರಿನಲ್ಲಿ ನಡೆದ ನಾಲ್ವರ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಶನಿವಾರ ವಿಚಾರಣೆ ನಡೆದು ಮುಂದಿನ ವಿಚಾರಣೆಯನ್ನು ಜು.31 ಕ್ಕೆ ನಿಗದಿ ಮಾಡಿ ನ್ಯಾಯಾಲಯವು ಆದೇಶ ನೀಡಿದೆ.

ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಸಮೀವುಲ್ಲಾ ಅವರ ಪೀಠದಲ್ಲಿ ನಡೆದ ಕಲಾಪದಲ್ಲಿ ಆರೋಪಿ ಪರ ವಕೀಲರಿಗೆ ದೋಷಾರೋಪಣೆ ಪಟ್ಟಿಯನ್ನು ನೀಡಲಾಯಿತು. ಆರೋಪಿ ಪ್ರವೀನ್‌ ಚೌಗುಲೆಯನ್ನು ವಿಡಿಯೋ ಕಾನ್ಫರೆನ್ಸ್‌ ಮೂಲಕ ಹಾಜರು ಮಾಡಿ, ನ್ಯಾಯಾಂಗ ಬಂಧನವನ್ನು ವಿಸ್ತರಣೆ ಮಾಡಲಾಯಿತು. ಸರಕಾರದ ಪರವಾಗಿ ವಿಶೇಷ ಸರಕಾರಿ ಅಭಿಯೋಜಕ ಶಿವಪ್ರಸಾದ್‌ ಆಳ್ವ, ಆರೋಪಿಯ ಪರವಾಗಿ ಡಿಫೆನ್ಸ್‌ ಕೌನ್ಸಿಲ್‌ ಮುಖ್ಯಸ್ಥೆ ರಾಜು ಪೂಜಾರಿ ಹಾಜರಿದ್ದರು.

Comments are closed.