Madya pradesh: ಗರ್ಭದಲ್ಲಿ ಮಗು ಸಾವನಪ್ಪಿದೆ ಎಂದ ಡಾಕ್ಟರ್: ಬೇರೆ ಆಸ್ಪತ್ರೆಯಲ್ಲಿ ಆರೋಗ್ಯವಂತ ಮಗುವಿಗೆ ಜನ್ಮ ನೀಡಿದ ತಾಯಿ

Share the Article

Madhya pradesh: ಗರ್ಭದಲ್ಲಿಯೇ ಮಗು ಸಾವನ್ನಪ್ಪಿದೆ ಎಂದು ವೈದ್ಯರೊಬ್ಬರು ಹೇಳಿದ್ದು, ಬೇರೊಂದು ಆಸ್ಪತ್ರೆಗೆ ಹೋಗಿ ದಾಖಲಾಗಿ ತಾಯಿಯೊಬ್ಬಳು ಆರೋಗ್ಯವಂತ ಮಗುವಿಗೆ ಜನ್ಮ ನೀಡಿರುವ ಘಟನೆ ಮಧ್ಯ ಪ್ರದೇಶದ ಭೋಪಾಲ್ ನಲ್ಲಿ ನಡೆದಿದೆ.

ಗರ್ಭಿಣಿ ಮಹಿಳೆಯು ಸರ್ಕಾರಿ ಅಸ್ಪಟ್ಟೆಯೊಂದಕ್ಕೆ ದಾಖಲಾಗಿದ್ದು, ಅಲ್ಲಿ ಮಗು ಸತ್ತಿದೆ ಎಂದು ಹೇಳಿದ್ದರಿಂದ, ತಕ್ಷಣವೇ ಆಕೆಯ ಪತಿ ಆಕೆಯನ್ನು ಖಾಸಗಿ ಅಸ್ಪತ್ರೆಯೊಂದಕ್ಕೆ ಶಿಫ್ಟ್ ಮಾಡಿರುತ್ತಾರೆ. ಹಾಗೂ ಈ ಸಮಯದಲ್ಲಿ ಮಗು ಆರೋಗ್ಯವಾಗಿದೆ ಎಂದು ತಿಳಿದುಬಂದಿರುತ್ತದೆ.

ನಂತರ ಸಿಜೆರಿಯನ್ ಮೂಲಕ 3.8 ಕೆಜಿ ತೂಕದ ಗಂಡು ಮಗುವಿಗೆ ತಾಯಿ ಜನ್ಮ ನೀಡಿದ್ದು, ಸರ್ಕಾರಿ ಆಸ್ಪತ್ರೆಯ ಮೇಲೆ ಕಠಿಣ ಕ್ರಮ ಕೈಗೊಳ್ಳ ಬೇಕಾಗಿ ಮಹಿಳೆಯವ ಮನೆಯವರು ಒತ್ತಾಯಿಸಿದ್ದಾರೆ.

Comments are closed.