Nandini: ‘ನಂದಿನಿ ತುಪ್ಪ’ದ ಹೊಸ ಪ್ಯಾಕೆಟ್ ಬಿಡುಗಡೆ

Share the Article

Nandini: ನಂದಿನಿ ನಕಲು ತುಪ್ಪವನ್ನು ತಡೆಯಲು ಇದೀಗ ಕೆಎಂಎಫ್ ಮಹತ್ವ ನಿರ್ಧಾರವನ್ನು ಕೈಗೊಂಡಿದ್ದು ನಂದಿನಿ ತುಪ್ಪದ ಹೊಸ ಪ್ಯಾಕೆಟ್ಗಳನ್ನು ಬಿಡುಗಡೆಗೊಳಿಸಿದೆ.ಹೌದು, ಮೈಸೂರು ಜಿಲ್ಲಾ ಹಾಲು ಒಕ್ಕೂಟ ಸಹಕಾರ ಸಂಘಗಳ ಕಚೇರಿ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೆಎಂಎಫ್ ವ್ಯವಸ್ಥಾಪಕ ನಿರ್ದೇಶಕ ಬಿ.ಶಿವಸ್ವಾಮಿ ಅವರು, ನೂತನ 500 ಮಿಲಿಲೀಟರ್ ಹಾಗೂ 1 ಲೀಟರ್ ಪ್ಯಾಕೆಟ್ ಅನ್ನು ಬಿಡುಗಡೆ ಮಾಡಿದರು.

ನೂತನ ಪ್ಯಾಕೆಟ್ ಅನ್ನು ಬಿಡುಗಡೆಗೊಳಿಸಿ ಮಾತನಾಡಿದ ಅವರು, ನೂತನ ಪ್ಯಾಕೆಟ್ ಹಾಲೋ ಗ್ರಾಮ್ ಪ್ರಿಂಟೆಡ್ ಆಗಿದ್ದು, ಪ್ಯಾಕೆಟ್ ಕ್ಯೂ ಆರ್ ಕೋಡ್ ಸ್ಕ್ಯಾನ್ ಮಾಡಿದರೆ ತುಪ್ಪದ ಸಂಪೂರ್ಣ ಮಾಹಿತಿ ಸಿಗಲಿದೆ. ಪ್ಯಾಕೆಟ್ ಬ್ಯಾಚ್ ನಂಬರ್, ಅದನ್ನು ತಯಾರಿಸಿದ ದಿನಾಂಕ, ಯಾವ ದಿನಾಂಕದವರೆಗೆ ಬಳಸಬಹುದು ಹಾಗೂ ಯಾವುದೇ ದೂರುಗಳನ್ನು ಸಹ ದಾಖಲಿಸಬಹುದಾಗಿದೆ. 500 ಗ್ರಾಂ ಮತ್ತು 1 ಲೀಟರ್ ಪ್ಯಾಕೆಟ್ ಅನ್ನೂ ನವೀಕರಿಸಿ ಬಿಡುಗಡೆ ಮಾಡಿದ್ದು, ತುಪ್ಪದಲ್ಲಿಯಾಗಲಿ ಅಥವಾ ದರದಲ್ಲಿಯಾಗಲಿ ಯಾವುದೇ ಬದಲಾವಣೆ ಮಾಡಿಲ್ಲ. ಎಂದಿನoತೆ ಅದೇ ಸ್ವಾದದ ಪೌಷ್ಠಿಕಯುಕ್ತ ತುಪ್ಪ ಗ್ರಾಹಕರು ಸವಿಯಬಹುದಾಗಿದೆ ಎಂದರು.

ಇದನ್ನೂ ಓದಿ: Land Acquisition: ದೇವನಹಳ್ಳಿ ಭೂಸ್ವಾಧೀನ ಅಧಿಸೂಚನೆ ರದ್ದು: ರೈತರ ಹೋರಾಟಕ್ಕೆ ಜಯ

Comments are closed.